Nazi typist: 10,505 ಮಂದಿಯ ಕೊಲೆ ಮಾಡಿದ ಮಹಿಳಾ ಟೈಪಿಸ್ಟ್: ಇಂತಹ ಕೃತ್ಯ ಎಸಗಿದ್ರೂ ವಿಧಿಸಿದ್ದು ಕೇವಲ 2 ವರ್ಷ ಶಿಕ್ಷೆ!!

Nazi typist proved guilty in 10505 murders: ಅಪ್ರಾಪ್ತ ವಯಸ್ಕಳಾಗಿದ್ದಾಗ, ಫೋರ್ಚ್ನರ್ 1943 ರಿಂದ 1945 ರಲ್ಲಿ ನಾಜಿ ಆಡಳಿತದ ಅಂತ್ಯದವರೆಗೆ ಗ್ಡಾನ್ಸ್ಕ್ ಬಳಿಯ ಸ್ಟಟ್‌ಥಾಫ್ ಶಿಬಿರದಲ್ಲಿ ನಾಜಿ-ಆಕ್ರಮಿತ ಪೋಲೆಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಅಪರಾಧದ ಸಮಯದಲ್ಲಿ ಮಹಿಳೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಫೋರ್ಚ್ನರ್ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯಾಲಯದ ಅಡಿಯಲ್ಲಿ ನಮೂದಿಸಲಾಗುತ್ತದೆ.

Written by - Bhavishya Shetty | Last Updated : Dec 21, 2022, 04:26 PM IST
    • 10,505 ಜನರ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಜಿ ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್
    • ಇರ್‌ಗಾರ್ಡ್ ಫೋರ್ಚ್ನರ್ ಗೆ ಶಿಕ್ಷೆ ವಿಧಿಸಿದ ಜರ್ಮನಿಯ ಇಟ್ಜೆಹೋ ನ್ಯಾಯಾಲಯ
    • ನ್ಯಾಯಾಲಯವು ಮಂಗಳವಾರ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದೆ
Nazi typist: 10,505 ಮಂದಿಯ ಕೊಲೆ ಮಾಡಿದ ಮಹಿಳಾ ಟೈಪಿಸ್ಟ್: ಇಂತಹ ಕೃತ್ಯ ಎಸಗಿದ್ರೂ ವಿಧಿಸಿದ್ದು ಕೇವಲ 2 ವರ್ಷ ಶಿಕ್ಷೆ!! title=
Poland

Nazi typist proved guilty in 10505 murders: ಪೋಲೆಂಡ್‌ನ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದ 97 ವರ್ಷದ ಮಾಜಿ ನಾಜಿ ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್ 10,505 ಜನರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾರೆ. ಈ ಮಾಹಿತಿಯನ್ನು ಮಾಧ್ಯಮ ವರದಿಗಳಲ್ಲಿ ನೀಡಲಾಗಿದೆ. ಇರ್‌ಗಾರ್ಡ್ ಫೋರ್ಚ್ನರ್ ಗೆ ಜರ್ಮನಿಯ ಇಟ್ಜೆಹೋ ನ್ಯಾಯಾಲಯವು ಮಂಗಳವಾರ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್ ಗಳಿಗೆ ನಿಯಮಗಳೇ ಇಲ್ವಾ: ಹೈದರಾಬಾದ್ ಪೊಲೀಸರೇ ಬೆಟರ್ ಆದ್ರೂ...?

ಅಪ್ರಾಪ್ತ ವಯಸ್ಕಳಾಗಿದ್ದಾಗ, ಫೋರ್ಚ್ನರ್ 1943 ರಿಂದ 1945 ರಲ್ಲಿ ನಾಜಿ ಆಡಳಿತದ ಅಂತ್ಯದವರೆಗೆ ಗ್ಡಾನ್ಸ್ಕ್ ಬಳಿಯ ಸ್ಟಟ್‌ಥಾಫ್ ಶಿಬಿರದಲ್ಲಿ ನಾಜಿ-ಆಕ್ರಮಿತ ಪೋಲೆಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಅಪರಾಧದ ಸಮಯದಲ್ಲಿ ಮಹಿಳೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಫೋರ್ಚ್ನರ್ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯಾಲಯದ ಅಡಿಯಲ್ಲಿ ನಮೂದಿಸಲಾಗುತ್ತದೆ.

ಯಹೂದಿ ಖೈದಿಗಳು, ಯಹೂದಿ-ಅಲ್ಲದ ವ್ಯಕ್ತಿಗಳು ಮತ್ತು ವಶಪಡಿಸಿಕೊಂಡ ಸೋವಿಯತ್ ಸೈನಿಕರು ಸೇರಿದಂತೆ ಸುಮಾರು 65,000 ಜನರು ಸ್ಟಟ್‌ಥಾಫ್‌ನಲ್ಲಿ ಭಯಾನಕ ಪರಿಸ್ಥಿತಿಗಳಲ್ಲಿ ಕೊಲ್ಲಲ್ಪಟ್ಟರು. ಬಿಬಿಸಿ ವರದಿಯ ಪ್ರಕಾರ, ಫೋರ್ಚ್ನರ್ 10,505 ಜನರ ಹತ್ಯೆಗೆ ಸಹಾಯ ಮತ್ತು ಪ್ರಚೋದನೆ ನೀಡಿದ ಆರೋಪದಲ್ಲಿ ತಪ್ಪಿತಸ್ಥಳೆಂದು ಕಂಡುಬಂದಿದೆ ಮತ್ತು ಇತರ ಐವರ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಸ್ಟಟ್‌ಥಾಫ್‌ನಲ್ಲಿ, ಜೂನ್ 1944 ರಿಂದ ಕೈದಿಗಳನ್ನು ಕೊಲ್ಲಲು ವಿವಿಧ ವಿಧಾನಗಳನ್ನು ಬಳಸಲಾಯಿತು. ಸಾವಿರಾರು ಜನರು ಗ್ಯಾಸ್ ಚೇಂಬರ್‌ಗಳಲ್ಲಿ ಸಾವನ್ನಪ್ಪಿದ್ದರು. ಸೆಪ್ಟೆಂಬರ್ 2021 ರಲ್ಲಿ ವಿಚಾರಣೆ ಪ್ರಾರಂಭವಾದಾಗ ಫೋರ್ಚ್ನರ್ ಕಣ್ಮರೆಯಾಗಿದ್ದಳು. ಆ ಬಳಿಕ ತನಿಖೆಯ ಸಂದರ್ಭದಲ್ಲಿ ಹ್ಯಾಂಬರ್ಗ್‌ನಲ್ಲಿ ಸಿಕ್ಕಿ ಬಿದ್ದಿದ್ದಾಳೆ.

ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ ಫೋರ್ಚ್ನರ್, “ನಡೆದಿರುವ ಘಟನೆಗೆ ನನ್ನನ್ನು ಕ್ಷಮಿಸಿ. ಆ ಸಮಯದಲ್ಲಿ ನಾನು ಸ್ಟಟ್‌ಥಾಫ್‌ನಲ್ಲಿದ್ದೆ. ಕ್ಷಮಿಸಿ ಎಂದು ಮಾತ್ರ ನಾನು ಹೇಳಬಲ್ಲೆ” ಎಂದಿದ್ದಾರೆ.

ಇದನ್ನೂ ಓದಿ:  Mouthwash : ನೀವು ಬಳಸುವ ಮೌತ್‌ವಾಶ್ ಈ ಗಂಭೀರ ಕಾಯಿಲೆಗೆ ಕಾರಣವಾಗಬಹುದು!

ಜರ್ಮನಿಯಲ್ಲಿ ನಾಜಿ ಯುಗದ ಅಪರಾಧಗಳಲ್ಲಿ ಈ ಮಹಿಳೆಯ ವಿಚಾರಣೆಯೇ ಕೊನೆಯದಾಗಿರಬಹುದೆಂದು BBC ವರದಿ ಮಾಡಿದೆ. ಆದರೂ ಕೆಲವು ಪ್ರಕರಣಗಳು ಇನ್ನೂ ತನಿಖೆಯಾಗುತ್ತಿವೆ. ಸ್ಟಟ್‌ಥಾಫ್‌ನಲ್ಲಿ ಮಾಡಿದ ನಾಜಿ ಅಪರಾಧಗಳಿಗಾಗಿ ಇತ್ತೀಚಿನ ವರ್ಷಗಳಲ್ಲಿ ಎರಡು ಇತರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News