ಮಂಡ್ಯ: ನಾಲ್ಕು ಸರಗಳ್ಳತನ ಹಾಗೂ ಒಂದು ಮನೆಗಳ್ಳತನದ ಪ್ರಕರಣಗಳನ್ನು ಬೆನ್ನತ್ತಿದ ನಾಗಮಂಗಲ ಪೊಲೀಸರು ಸರಗಳ್ಳರ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಈ ಪ್ರಕರಣಗಳನ್ನು ಬೆನ್ನತ್ತಿ ಕಾರ್ಯಾಚರಣೆಗೆ ಮುಂದಾದ ನಾಗಮಂಗಲ ಪೊಲೀಸರು ಈಗ 208 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 1 ಲಕ್ಷ ನಗದು ಹಣ ಸೇರಿದಂತೆ ಒಟ್ಟು 10,00,000/- (ಹತ್ತು ಲಕ್ಷ) ರೂ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗಮಂಗಲ ವೃತ್ತ ಪೊಲೀಸರ ಕಾರ್ಯಾಚರಣೆ ಸರಗಳ್ಳತನದ ಆರೋಪಿಗಳ ಬಂಧನ, 208 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 1 ಲಕ್ಷ ನಗದು ಹಣ ಸೇರಿದಂತೆ ಒಟ್ಟು 10,00,000/- (ಹತ್ತು ಲಕ್ಷ) ರೂ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದು, 4 ಸರಕಳ್ಳತನ ,1 ಮನೆಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು 1/2 pic.twitter.com/gWz7UedTSu
— SP Mandya (@MandyaPolice) December 27, 2022
ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್ .ಎನ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.