Seeing Crocodile in Dream: ಸಾಮಾನ್ಯವಾಗಿ ರಾತ್ರಿ ಮಲಗುವಾಗ ಕನಸು ಕಾಣುವುದು ಸಾಮಾನ್ಯ. ಕೆಲವು ಕನಸುಗಳು ಸಿಹಿಯಾಗಿದ್ದರೆ, ಇನ್ನು ಕೆಲವು ಭಯ ಹುಟ್ಟಿಸುವಷ್ಟು 3-4 ದಿನಗಳು ನೆನಪಾಗುತ್ತವೆ. ಕೆಲವು ಕನಸುಗಳನ್ನು ನಾವು ಎಷ್ಟು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದರೂ ನಮಗೆ ಅವುಗಳನ್ನು ನೆನಪಿಸಿಕೊಳ್ಳಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಒಂದಲ್ಲ ಒಂದು ಅರ್ಥವಿದೆ. ಕನಸಿನಲ್ಲಿ ನಾವು ಖಂಡಿತವಾಗಿಯೂ ನಮ್ಮ ಸುತ್ತಲೂ ಇರುವ ಪ್ರಾಣಿಗಳು, ಪಕ್ಷಿಗಳು ಅಥವಾ ಕೆಲವು ವಸ್ತುಗಳ ಬಗ್ಗೆ ಯೋಚಿಸುತ್ತೇವೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಮೊಸಳೆಯನ್ನು ನೋಡಿದ್ದರೆ ಅದರ ಸಂಕೇತ ಏನು ಎಂಬುದನ್ನು ತಿಳಿಯಿರಿ.
ಇದನ್ನೂ ಓದಿ: Palmistry: ನಿಮ್ಮ ಕೈಯಲ್ಲಿಯೂ ಈ ಚಿಹ್ನೆ ಇದೆಯಾ, ಇದ್ರೆ ನಿಮ್ಮದು ರಾಜಯೋಗ, ಧನ-ಸಂಪತ್ತಿನ ಕೊರತೆ ಎಂದಿಗೂ ಎದುರಾಗಲ್ಲ
ನಿಮ್ಮ ಕನಸಿನಲ್ಲಿ ಮೊಸಳೆಯನ್ನು ನೀವು ನೋಡಿದರೆ, ಅದು ನಿಮ್ಮ ಭವಿಷ್ಯವನ್ನು ಸಹ ಸೂಚಿಸುತ್ತದೆ. ಈ ಕನಸು ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮೊದಲು, ಮೊಸಳೆಯು ತನ್ನ ಬೇಟೆಯನ್ನು ಬಹಳ ಎಚ್ಚರಿಕೆಯಿಂದ ಹೊಂಚು ಹಾಕುವ ಪ್ರಾಣಿಯಾಗಿದೆ. ಅದು ತನ್ನ ಬೇಟೆಯ ಮೇಲೆ ನಿಧಾನವಾಗಿ ಚಲಿಸುತ್ತದೆ ಮತ್ತು ಅದನ್ನು ಒಮ್ಮೆಗೇ ಹಿಡಿಯುತ್ತದೆ.
ಕನಸಿನಲ್ಲಿ ಅನೇಕ ಮೊಸಳೆಗಳು ಕಾಣಿಸಿಕೊಂಡರೆ, ಅದು ಅಶುಭ ಸಂಕೇತವಾಗಿದೆ. ನಿಮ್ಮ ಒಡನಾಟವು ಒಳ್ಳೆಯ ಜನರೊಂದಿಗೆ ಇಲ್ಲ ಎಂದರ್ಥ. ನಿಮ್ಮ ಜೊತೆ ಸ್ನೇಹಿತರಂತೆ ಇರುವವರು ಯಾವಾಗಲೂ ನಿಮಗೆ ಹಾನಿ ಮಾಡಲು ಬಯಸುತ್ತಾರೆ. ಆದ್ದರಿಂದ ನೀವು ಎಚ್ಚರದಿಂದಿರಬೇಕು. ಕನಸಿನಲ್ಲಿ ಮೊಸಳೆಯನ್ನು ನೋಡುವುದು ಮುಂಬರುವ ದಿನಗಳಲ್ಲಿ ನಿಮಗೆ ಸಮಸ್ಯೆಯಾಗಬಹುದಾದ ಅಂತಹ ಸ್ನೇಹಿತರೊಂದಿಗೆ ನೀವು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತದೆ.
ಕನಸಿನಲ್ಲಿ ಮೊಸಳೆಯನ್ನು ನೋಡುವುದು ಭವಿಷ್ಯದಲ್ಲಿ ನೀವು ತೊಂದರೆಯಲ್ಲಿ ಸಿಲುಕುವಿರಿ ಅಥವಾ ಯಾರಾದರೂ ನಿಮಗೆ ತೊಂದರೆ ನೀಡಲು ಪ್ರಯತ್ನಿಸಬಹುದು ಎಂದು ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ಮೊಸಳೆ ಅಳುತ್ತಿರುವುದನ್ನು ನೀವು ನೋಡಿದರೆ, ಇದರರ್ಥ ನೀವು ನಿಮ್ಮೊಂದಿಗೆ ಸಂತೋಷವಾಗಿಲ್ಲ. ಒಂದಲ್ಲ ಒಂದು ಚಿಂತೆಯಲ್ಲಿ ನಿರತರಾಗಿರುತ್ತಾರೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಬೇಕು, ಜೊತೆಗೆ ಅವರೊಂದಿಗೆ ಸಮಯ ಕಳೆಯಬೇಕು. ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುತ್ತದೆ
ಇದನ್ನೂ ಓದಿ: 2023 Astro Updates : ಈ ಐದು ರಾಶಿಯವರಿಗೆ 2023 ಅದೃಷ್ಟ ತರುವ ವರ್ಷ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.