Shani Shukra Yuti 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ 2023ರ ಆರಂಭದಲ್ಲಿ ಕರ್ಮಫಲದಾತ ಶನಿ ಮತ್ತು ಸಂಪತ್ತು-ಐಶ್ವರ್ಯ, ಪ್ರೀತಿ-ಪ್ರಣಯವನ್ನು ನೀಡುವ ಶುಕ್ರ ಗ್ರಹಗಳು ಶನಿಯ ರಾಶಿಚಕ್ರ ಚಿಹ್ನೆಯಾದ ಮಕರ ರಾಶಿಯಲ್ಲಿ ಸಂಯೋಗ ಹೊಂದಿದ್ದಾರೆ. ಜ್ಯೋತಿಷ್ಯದಲ್ಲಿ ಶನಿ-ಶುಕ್ರರ ಯುತಿಯನ್ನು ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಮಕರ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಆದರೂ, ಕೆಲವು ರಾಶಿಯವರಿಗೆ ಇದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ-ಶನಿ ಇಬ್ಬರೂ ಮಿತ್ರ ಗ್ರಹಗಳು. ಹಾಗಾಗಿ, ಶುಕ್ರ-ಶನಿ ಸಂಯೋಗವು ಒಳ್ಳೆಯ ಫಲಗಳನ್ನು ನೀಡುತ್ತದೆ. ಅದರಲ್ಲೂ ಈ ಸಮಯವು ಮೂರು ರಾಶಿಯವರಿಗೆ ಅದ್ಭುತವಾಗಿದ್ದು, ಅವರು ಸಾಕಷ್ಟು ಹಣವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಮಕರ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗದಿಂದ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ:
ಮೇಷ ರಾಶಿ:
ಮಕರ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗದಿಂದಾಗಿ ಮೇಷ ರಾಶಿಯವರ ವ್ಯಾವಹಾರಿಕ ಜೀವನ, ವೃತ್ತಿ ಜೀವನ ಬೆಳಗಲಿದೆ. ಈ ರಾಶಿಯ ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ. ಇದೇ ವೇಳೆ ಈಗಾಗಲೇ ಉದ್ಯೋಗದಲ್ಲಿರುವವರಿ ಪ್ರಮೋಷನ್ ಸಾಧ್ಯತೆಯೂ ಇದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗಬಹುದು.
ಇದನ್ನೂ ಓದಿ- Vastu Tips: ಹೊಸ ವರ್ಷದ ಕ್ಯಾಲೆಂಡರ್ ಈ ದಿಕ್ಕಿನಲ್ಲಿದ್ದರೆ ಧನಾಗಮನ
ಕನ್ಯಾ ರಾಶಿ:
ಶನಿ-ಶುಕ್ರರ ಯುತಿಯು ಕನ್ಯಾ ರಾಶಿಯವರಿಗೆ ಬಹಳ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರ ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ಮಾತ್ರವಲ್ಲ, ವೈವಾಹಿಕ ಜೀವನವೂ ಸುಮಧುರವಾಗಿರಲಿದೆ. ಇನ್ನೂ ಮದುವೆಯಾಗದವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.
ಇದನ್ನೂ ಓದಿ- Grah Gochar 2023: ಜನವರಿಯಲ್ಲಿ ಗ್ರಹಗಳ ಸ್ಥಾನ ಬದಲಾವಣೆ, ಹೊಸ ವರ್ಷದ ಮೊದಲ ತಿಂಗಳು 5 ರಾಶಿಯವರಿಗೆ ಸಂಕಷ್ಟ
ತುಲಾ ರಾಶಿ:
ತುಲಾ ರಾಶಿಯ ಅಧಿಪತಿ ಶುಕ್ರ. ಶುಕ್ರ-ಶನಿ ಎರಡೂ ಕೂಡ ಮಿತ್ರ ಗ್ರಹಗಳು. ಹಾಗಾಗಿ, ಮಕರ ರಾಶಿಯಲ್ಲಿ ಶನಿ-ಶುಕ್ರರ ಸಂಯೋಜನೆಯು ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಉತ್ತಮ ಪ್ರಯೋಜನಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಬಯಸಿದ ಉದ್ಯೋಗ ನಿಮಗೆ ಸಿಗಬಹುದು. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಸಾಕಷ್ಟು ಹಣವನ್ನು ಗಳಿಸುವಿರಿ. ಇದರಿಂದಾಗಿ ನಿಮ್ಮ ಆರ್ಥಿಕ ಜೀವನವು ಸುಧಾರಿಸಲಿದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.