Shukra Gochar 2022: 2023ರ ಆರಂಭದಲ್ಲಿಯೇ ಈ ರಾಶಿಯವರಿಗೆ ಬಂಪರ್ ಕೊಡುಗೆಗಳನ್ನು ನೀಡಲಿದ್ದಾನೆ ಶುಕ್ರ

Venus Transit in December 2022: ಈ ವರ್ಷಾಂತ್ಯದಲ್ಲಿ  ಅಡ್ನರೆ ಡಿಸೆಂಬರ್ ಕೊನೆಯಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿರುವ ಐಶಾರಾಮಿ ಜೀವನಕಾರಕನಾದ ಶುಕ್ರನು ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 2023ರ ಆರಂಭದಲ್ಲಿ ಯಾವ ರಾಶಿಯವರಿಗೆ ಶುಕ್ರನ ದೆಸೆ ಇರಲಿದೆ ಎಂದು ತಿಳಿಯಿರಿ.

Written by - Yashaswini V | Last Updated : Dec 14, 2022, 12:35 PM IST
  • ಈ ವರ್ಷದ ಕೊನೆಯಲ್ಲಿ ರಾಶಿಚಕ್ರವನ್ನು ಬದಲಾಯಿಸಲಿರುವ ಶುಕ್ರನು ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದ್ದಾನೆ
  • ಶುಕ್ರನ ಸಂಚಾರದ ಪರಿಣಾಮವಾಗಿ ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ
  • ಹೊಸ ವರ್ಷದಲ್ಲಿ ಶುಕ್ರನು ಯಾವ ರಾಶಿಯವರಿಗೆ ವಿಶೇಷವಾಗಿ ಫಲಪ್ರದವಾಗಲಿದೆ ತಿಳಿಯಿರಿ
Shukra Gochar 2022: 2023ರ ಆರಂಭದಲ್ಲಿಯೇ ಈ ರಾಶಿಯವರಿಗೆ ಬಂಪರ್ ಕೊಡುಗೆಗಳನ್ನು ನೀಡಲಿದ್ದಾನೆ ಶುಕ್ರ  title=
Shukra gochar effect-2023

Venus Transit in December 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹದ ಒಂದು ಸಣ್ಣ ಬದಲಾವಣೆಯೂ ಕೂಡ ಎಲ್ಲಾ ಜೀವರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಶಿ ಪರಿವರ್ತನೆಯ ಪರಿಣಾಮವಾಗಿ ಕೆಲವು ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾದರೆ, ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಗಳು ದೊರೆಯುತ್ತವೆ. 2022 ಡಿಸೆಂಬರ್‌ನಲ್ಲಿ ಐಶಾರಾಮಿ, ಸುಖ-ಸಂತೋಷ ಜೀವನಕಾರಕನಾದ ಶುಕ್ರನು ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ. ಶುಕ್ರನ ಈ ಸಂಚಾರವು ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದೆ. 

ವೈದಿಕ ಜ್ಯೋತಿಷ್ಯದ ಪ್ರಕಾರ, ಈ ತಿಂಗಳ ಮೊದಲ ವಾರದಲ್ಲಿ ಧನು ರಾಶಿಯನ್ನು ಪ್ರವೇಶಿಸುವ ಶುಕ್ರನು 29 ಡಿಸೆಂಬರ್ 2022 ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗ್ರಹಗಳ ರಾಜಕುಮಾರನಾದ ಬುಧ ಕೂಡ 28 ಡಿಸೆಂಬರ್ 2022 ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳಲಿದೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ಕೋಣೆಯಲ್ಲಿ ಶುಕ್ರನ ಈ ರಾಶಿ ಬದಲಾವಣೆಯಿಂದ ಹೊಸ ವರ್ಷದ ಆರಂಭದಲ್ಲಿ ಎಂದರೆ 2023ರ ಆರಂಭದಲ್ಲಿ ಕೆಲವು ರಾಶಿಯವರಿಗೆ ಬಂಪರ್ ಕೊಡುಗೆಗಳನ್ನು ಕರುಣಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಇದನ್ನೂ ಓದಿ- Rahu Ketu Gochar 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾರೆ ರಾಹು-ಕೇತು

ಡಿಸೆಂಬರ್‌ನಲ್ಲಿ ಶುಕ್ರ ಸಂಚಾರ: ಹೊಸ ವರ್ಷದ ಆರಂಭದಲ್ಲಿ ಈ ರಾಶಿಯವರಿಗೆ ನೀಡಲಿದೆ ವಿಶೇಷ ಫಲ:
ಸಿಂಹ ರಾಶಿಯವರಿಗೆ ಯಶಸ್ಸು:

ಶುಕ್ರ ರಾಶಿ ಪರಿವರ್ತನೆಯ ಪರಿಣಾಮವಾಗಿ ಹೊಸ ವರ್ಷದ ಆರಂಭದಲ್ಲಿ ಸಿಂಹ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಪ್ರಪ್ತಿಯಾಗಲಿದೆ. ಉದ್ಯೋಗ-ವ್ಯವಹಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶದ ಜೊತೆಗೆ ಹಣಕಾಸಿನ ಲಾಭವಾಗಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿಬರಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ಕನ್ಯಾ ರಾಶಿಯವರಿಗೆ ತಾಯಿ ಲಕ್ಷ್ಮೀ ಆಶೀರ್ವಾದ:
ಶುಕ್ರ ಸಂಚಾರದಿಂದ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ಯೋಗದ ಪರಿಣಾಮದಿಂದಾಗಿ ಕನ್ಯಾ ರಾಶಿಯವರು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷಿತ ಲಾಭ ದೊರೆಯಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. 

ಇದನ್ನೂ ಓದಿ- Budh Gochar 2022: ಡಿಸೆಂಬರ್‌ನಲ್ಲಿ 3 ಬಾರಿ ರಾಶಿ ಬದಲಾವಣೆ, ನಾಲ್ಕು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಬುಧ

ಧನು ರಾಶಿಯವರಿಗೆ ಆರ್ಥಿಕ ಲಾಭ:
ಈ ವರ್ಷಾಂತ್ಯದಲ್ಲಿ ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಲಿರುವ ಶುಕ್ರನು ಈ ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದಾನೆ. ಹೊಸ ಮೂಲಗಳಿಂದ ಹರಿದು ಬರಲಿರುವ ಧನ ಲಾಭದಿಂದಾಗಿ ನಿಮ್ಮ ಆರ್ಥಿಕ ಸಂಕಷ್ಟಗಳು ಕೊನೆಗೊಳ್ಳಲಿವೆ. ದಾಂಪತ್ಯ ಜೀವನ ಸಂತೋಷಮಯವಾಗಿರುತ್ತದೆ. ಸಂತಾನ ಪ್ರಾಪ್ತಿ ಯೋಗವೂ ಇದೆ. ಈ ಸಮಯದಲ್ಲಿ ಬಡ್ತಿಯ ಜೊತೆಗೆ ಮನೆ, ವಾಹನ ಖರೀದಿ ಯೋಗವೂ ಇದೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News