Pathaan Trailer Leaks : ಪಠಾಣ್ ಟ್ರೈಲರ್ ಲೀಕ್‌.. ಶಾರುಖ್‌ ಖಾನ್‌ ಶಾಕ್‌..!

ಬಹುನಿರೀಕ್ಷಿತ ಸಿನಿಮಾ ಪಠಾಣ್‌ ಚಿತ್ರಕ್ಕಾಗಿ ಶಾರುಖ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸರಣಿ ಫ್ಲಾಪ್ ಗಳಿಂದ ಬಳಲುತ್ತಿರುವ ಬಾಲಿವುಡ್‌ಗೆ ಈ ಸಿನಿಮಾ ವರದಾನವಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೆ, ಶಾರುಖ್ ಫಾರ್ಮ್ ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ಝೀರೋ ಚಿತ್ರದ ಮೂಲಕ ಶಾರುಖ್ ನಿಜವಾಗಿಯೂ ಜೀರೋ ಆದ್ರು. ಆದರೆ ಇಷ್ಟು ವರ್ಷಗಳ ನಂತರ ಮತ್ತೆ ಪಠಾಣ್ ಆಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.

Written by - Krishna N K | Last Updated : Jan 6, 2023, 04:02 PM IST
  • ಬಹುನಿರೀಕ್ಷಿತ ಸಿನಿಮಾ ಪಠಾಣ್‌ ಚಿತ್ರಕ್ಕಾಗಿ ಶಾರುಖ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ.
  • ಶಾರುಖ್ ದೀಪಿಕಾ ಕಾಂಬೋ ಸಿನಿಮಾ ಪಠಾಣ್ ಜನವರಿ 25 ರಂದು ಬಿಡುಗಡೆಯಾಗಲಿದೆ.
  • ಪಠಾಣ್ ಅವರ ಟ್ರೇಲರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Pathaan Trailer Leaks : ಪಠಾಣ್ ಟ್ರೈಲರ್ ಲೀಕ್‌.. ಶಾರುಖ್‌ ಖಾನ್‌ ಶಾಕ್‌..! title=

Pathaan trailer : ಬಹುನಿರೀಕ್ಷಿತ ಸಿನಿಮಾ ಪಠಾಣ್‌ ಚಿತ್ರಕ್ಕಾಗಿ ಶಾರುಖ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸರಣಿ ಫ್ಲಾಪ್ ಗಳಿಂದ ಬಳಲುತ್ತಿರುವ ಬಾಲಿವುಡ್‌ಗೆ ಈ ಸಿನಿಮಾ ವರದಾನವಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೆ, ಶಾರುಖ್ ಫಾರ್ಮ್ ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ಝೀರೋ ಚಿತ್ರದ ಮೂಲಕ ಶಾರುಖ್ ನಿಜವಾಗಿಯೂ ಜೀರೋ ಆದ್ರು. ಆದರೆ ಇಷ್ಟು ವರ್ಷಗಳ ನಂತರ ಮತ್ತೆ ಪಠಾಣ್ ಆಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.

ಶಾರುಖ್ ದೀಪಿಕಾ ಕಾಂಬೋ ಸಿನಿಮಾ ಪಠಾಣ್ ಜನವರಿ 25 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿನಿಮಾ ಸಿಲುಕಿಕೊಂಡಿತ್ತು. ಕೇಸರಿ ಬಿಕಿನಿ ಹಾಕಿಕೊಂಡು ʼಬೇಷರಮ್ ರಂಗ್ʼ ಹಾಡಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದ ದೀಪಿಕಾ ನೋಟ ವಿವಾದಕ್ಕೆ ಗುರಿಯಾಗಿತ್ತು. ಈ ಚಿತ್ರದ ಟ್ರೇಲರ್ ಅನ್ನು ಜನವರಿ 10, 2023 ರಂದು ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಮನೆಯಿಂದ ಹೊರಬಂದ ಸಮಂತಾ... ಹೇಗಿದೆ ಆರೋಗ್ಯ..!

ಆದರೆ ಈಗ ನಿರ್ಮಾಪಕರಿಗೆ ಶಾಕ್ ಆಗಿದೆ. ಪಠಾಣ್ ಟ್ರೇಲರ್ ಲೀಕ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೃಶ್ಯಗಳು ಅದ್ಭುತವಾಗಿವೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಸಾಹಸ ದೃಶ್ಯಗಳು ಅದ್ಭುತವಾಗಿವೆ ಎಂದು ಹೇಳಲಾಗುತ್ತಿದೆ. ಪಠಾಣ್ ಟ್ರೇಲರ್ ಲೀಕ್ ಆದ ನಂತರ ಚಿತ್ರತಂಡ ಗೊಂದಲಕ್ಕೀಡಾಗಿದೆ. ಮುಂದೆ ಸಿನಿಮಾ ಲೀಕ್‌ ಆದ್ರೆ ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದೆ. ಸಧ್ಯ ಪಠಾಣ್ ಚಿತ್ರತಂಡ ಏನ್‌ ಮಾಡುತ್ತೆ ಅಂತ ಕಾಯ್ದು ನೋಡಬೇಕಿದೆ. 

ಅಲ್ಲದೆ, ಪಠಾಣ್‌ ಸಿನಿಮಾ ಬೇಷರಂ ರಂಗ್‌ ಹಾಡಿನಿಂದಲೇ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ಬ್ಯಾನ್‌ ಪಠಾಣ್‌ ಎಂಬ ಘೋಷಣೆಗೂ ಸಹ ಕಿಂಗ್‌ ಖಾನ್‌ ಸಿನಿಮಾ ಗುರಿಯಾಗಿತ್ತು. ನಂತರ ಸೆನ್ಸಾರ್‌ ಮಂಡಳಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳುವಂತೆ ಚಿತ್ರ ನಿರ್ಮಾಪಕರಿಗೆ ತಿಳಿಸಿತ್ತು. ಇದೀಗ ಬಿಡುಗಡೆಗೂ ಮುನ್ನವೇ ಪಠಾಣ್‌ ಟ್ರೇಲರ್‌ ಲೀಕ್‌ ಆಗಿದ್ದು, ಚಿತ್ರತಂಡಕ್ಕೆ ಶಾಕ್‌ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News