ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷ ಎರಡು ಮದುವೆಯಾಗಲೇ ಬೇಕು !ಇಬ್ಬರು ಪತ್ನಿಯರೊಂದಿಗೆ ಜೊತೆಯಲ್ಲಿಯೇ ಸಂಸಾರ ಮಾಡಬೇಕು !

Weird Indian Village: ಹಿಂದೂ ಸಂಪ್ರದಾಯದಲ್ಲಿ ಏಕಪತ್ನಿತ್ವವು ಆಳವಾಗಿ ಬೇರೂರಿರುವ ದೇಶದಲ್ಲಿ ಈ ಹಳ್ಳಿಯಲ್ಲಿ ಅನುಸರಿಸಿಕೊಂಡು ಬರುತ್ತಿರುವುದು ಆಶ್ಚರ್ಯವೆನಿಸಬಹುದು. 

Written by - Ranjitha R K | Last Updated : Sep 19, 2024, 02:35 PM IST
  • ಈ ಹಳ್ಳಿಯಲ್ಲಿದೆ ವಿಚಿತ್ರ ಸಂಪ್ರದಾಯ
  • ವಿಚಿತ್ರವಾದ ಪದ್ಧತಿಗಳಿಗೆ ಈ ಗ್ರಾಮ ಹೆಸರುವಾಸಿ
  • ಈ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯು ಎರಡು ಬಾರಿ ಮದುವೆಯಾಗಬೇಕು.
ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷ ಎರಡು ಮದುವೆಯಾಗಲೇ ಬೇಕು !ಇಬ್ಬರು ಪತ್ನಿಯರೊಂದಿಗೆ ಜೊತೆಯಲ್ಲಿಯೇ ಸಂಸಾರ ಮಾಡಬೇಕು ! title=

Weird Indian Village : ರಾಜಸ್ಥಾನದ ಜೈಸಲ್ಮೇರ್‌ ನಲ್ಲಿ ಅಪರೂಪದ ಸಂಪ್ರದಾಯವನ್ನು ಆಚರಿಸಿಕೊಂಡು ಬರುವ ಹಳ್ಳಿಯಿದೆ.ರಾಮದೇವ್ ಕಿ ಬಸ್ತಿ ಎಂಬ ಹೆಸರಿನ ಈ ಗ್ರಾಮವು ವಿಚಿತ್ರವಾದ ಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರತಿಯೊಂದು ಮನೆಯೂ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತದೆ. ಅವುಗಳಲ್ಲಿ ಒಂದು ಈ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯು ಎರಡು ಬಾರಿ ಮದುವೆಯಾಗಬೇಕು.

ಎರಡು ಮದುವೆ ಹಿಂದಿನ ಕಾರಣ : 
ಹಿಂದೂ ಸಂಪ್ರದಾಯದಲ್ಲಿ ಏಕಪತ್ನಿತ್ವವು ಆಳವಾಗಿ ಬೇರೂರಿರುವ ದೇಶದಲ್ಲಿ ಈ ಆಚರಣೆ ವಿಚಿತ್ರ ಎಂದೆನಿಸದಿರದು. ಆದರೆ ಈ ರಾಮದೇವ್ ಕಿ ಬಸ್ತಿಯಲ್ಲಿ  ಮದುವೆಯ ಪರಿಕಲ್ಪನೆಯು ಸಂಪೂರ್ಣವಾಗಿ ಹೊಸ ಆಯಾಮವನ್ನು ಪಡೆಯುತ್ತದೆ.ಇಲ್ಲಿ,ಬಹುಪತ್ನಿತ್ವವನ್ನು ಅಂಗೀಕರಿಸಲಾಗಿದೆ ಮಾತ್ರವಲ್ಲದೆ ಇದು  ಸಂಸ್ಕೃತಿಯ ಒಂದು ಭಾಗ ಎಂದೇ ಜನ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇಲ್ಲಿ ಪತಿ ಇಬ್ಬರೂ ಪತ್ನಿಯರ ಜೊತೆಗೆ ಒಂದೇ ಮನೆಯಲ್ಲಿ ಸಂಸಾರ ನಡೆಸಬೇಕು.  

ಇದನ್ನೂ ಓದಿ : ನಾಗರಹಾವನ್ನು ನುಂಗುತ್ತಿರುವ ಅಪರೂಪದ ಬಿಳಿ ದೈತ್ಯ ಸರ್ಪ! ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ!!

 ಇನ್ನೂ ಆಶ್ಚರ್ಯ ಎಂದರೆ ಇಲ್ಲಿ ಇಬ್ಬರೂ ಪತ್ನಿಯರು ಪರಸ್ಪರ ಸಾಮರಸ್ಯದಿಂದ, ಅನ್ಯೋನ್ಯವಾಗಿ ಬದುಕು ಸಾಗಿಸುತ್ತಾರೆ.ತಮ್ಮ ಗಂಡನನ್ನು ಒಂದೇ ಸೂರಿನಡಿ ಹಂಚಿಕೊಳ್ಳುತ್ತಾರೆ.ಇಲ್ಲಿ ಇಬ್ಬರೂ ಪತ್ನಿಯರು ಒಡ ಹುಟ್ಟಿದ ಸಹೋದರಿಯರ ರೀತಿಯಲ್ಲಿ ಬದುಕು ಸಾಗಿಸುತ್ತಾರೆ.  

ಈ ಸಂಪ್ರದಾಯ ಆರಂಭವಾದದ್ದು ಹೇಗೆ ? : 
ಈ ಸಂಪ್ರದಾಯದ ಮೂಲವು ಸಂಪ್ರದಾಯದಂತೆ ಆಕರ್ಷಕವಾಗಿದೆ.ಪುರಾತನ ಮೂಢನಂಬಿಕೆಗಳು ಈ ಪದ್ಧತಿಯ ಹಿಂದಿನ ಮುಖ್ಯ ಕಾರಣ ಎನ್ನುವುದು ಗ್ರಾಮಸ್ಥರ ಮಾತು. ಸ್ಥಳೀಯ ದಂತಕಥೆಗಳ ಪ್ರಕಾರ,ಯಾವುದೇ ವ್ಯಕ್ತಿ ಒಂದೇ ಮದುವೆಯಾದರೆ  ಒಂದೋ ಆತನಿಗೆ ಸಂತಾನ ಭಾಗ್ಯ ಇರುವುದಿಲ್ಲವಂತೆ ಅಥವಾ ಒಂದೇ ಹೆಣ್ಣು ಮಗು ಇರುತ್ತದೆಯಂತೆ. ಹಾಗಾಗಿ ತನ್ನ ವಂಶ ಬೆಳೆಯಬೇಕು ಎನ್ನುವ ಉದ್ದೇಶದಿಂದ  ಎರಡನೇ ಮದುವೆ ಅನಿವಾರ್ಯ ಎನ್ನುವುದು ಈ ಗ್ರಾಮದವರ ನಂಬಿಕೆ.  ನಂಬಿಕೆಯ ಪ್ರಕಾರ, ಇಲ್ಲಿ ಎರಡನೇ ಪತ್ನಿಯೇ ಗಂಡು ಮಗುವಿಗೆ ಜನ್ಮ ನೀಡುತ್ತಾಳೆಯಂತೆ. 

ಇದನ್ನೂ ಓದಿ : Viral news: "ನನಗೆ ವರ ಬೇಕು..ಆದರೆ ಷರತ್ತುಗಳು ಅನ್ವಯ"! ಈ ಮಹಿಳೆಯ ಡಿಮ್ಯಾಂಡ್‌ ಏನು ಗೊತ್ತಾ? ಪೋಸ್ಟ್‌ ನೋಡಿ ಆನ್‌ಲೈನ್‌ನಲ್ಲಿ ಹಾಜರಾದ ಯುವಕರು

ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಈ ಪದ್ಧತಿಯಿಂದ ದೂರ ಸರಿಯುತ್ತಿದೆ. ಆದರೆ ಹಳೆಯ ತಲೆಮಾರಿನವರು ಈ ಸಂಪ್ರದಾಯಕ್ಕೆ ಇನ್ನೂ ಕೂಡಾ ಅಂಟಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News