ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸರ್ಕಾರ ವಿಳಂಭ ಮಾಡಿರುವುದಕ್ಕೆ ಅಳಿಯ ಅನಿರುದ್ದ್ ಈಗ ತೀವ್ರ ಅಸಮಾಧಾನಗೊಂಡಿದ್ದಾರೆ.
ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ವಿಳಂಬದ ನೀತಿ ಅನುಸರಿಸುವುದಕ್ಕೆ ಕಿಡಿ ಕಾರಿರುವ ಅನಿರುದ್ದ್ "ಖಂಡಿತವಾಗ್ಲೂ ನಮಗೆ ಬೇಜಾರು ಎನ್ನುವುದಕ್ಕಿಂತಲೂ ತುಂಬಾ ದುಃಖವಾಗುತ್ತಿದೆ ಈಗಂತೂ ನಮ್ಮ ತಾಳ್ಮೆ ಮೀತಿ ಮೀರಿ ಹೋಗಿದೆ ಈಗ ನಮಗೆ ಕೋಪ ಬರುವುದಕ್ಕೆ ಸುರುವಾಗಿದೆ.ನಿಜವಾಗಲೂ 30ನೇ ಡಿಸೆಂಬರ್ ಒಳಗೆ ಇತ್ಯರ್ಥವಾಗಲಿಲ್ಲ ಎಂದರೆ,ಮೈಸೂರು ಜಾಗದ್ದು ಕೇಸ್ ಎಲ್ಲ ಬಗೆ ಹರಿಲಿಲ್ಲ ಅಂದ್ರೆ ನಾವು ಏನು ಮಾಡ್ತಿವಿ ನಮಗೆ ಗೊತ್ತಿಲ್ಲ, ನಾವು ಅಪ್ಪ ಅವರ ಅಭಿಮಾನಿಗಳು ಮತ್ತು ಅವರ ಸಿಂಹಗಳು ಅವರನ್ನು ಎಬ್ಬಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆ.30ರ ಒಳಗಡೆ ಇದು ಇತ್ಯರ್ಥವಾಗಲಿಲ್ಲವೆಂದರೆ ಕರ್ನಾಟಕದಿಂದ ಎಲ್ಲಾ ಸಿಂಹಗಳನ್ನು ಕರೆಸುತ್ತೇವೆ.ಎಷ್ಟು ವರ್ಷ ಅಂತಾ ಕಾಯೋದು ಯಾವ ಯಾವ ಕಚೇರಿ ಅಲೆಯೋದು" ಎಂದು ಅನಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಬರುವ ಡಿಸೆಂಬರ್ 30ರೊಳಗೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗದಿದ್ದರೆ ಉಗ್ರವಾದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಇತ್ತೀಚೆಗೆ ಅಂಬರೀಶ್ ನಿಧನದ ನಂತರ ಅವರಿಗೂ ಕೂಡ ಸ್ಮಾರಕ ನಿರ್ಮಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು.ಈ ಹಿನ್ನಲೆಯಲ್ಲಿ ಈಗ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ 9 ವರ್ಷವಾದರೂ ಸಹಿತ ನಿರ್ಮಾಣವಾಗದೆ ಇರುವುದಕ್ಕೆ ಅನಿರುದ್ದ್ ಅವರು ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.