ಬಳ್ಳಿಯಂತೆ ಬಳುಕುವ ಆಕರ್ಷಕ ಮೈಕಟ್ಟು ಯಾರಿಗೆ ಬೇಡ ಹೇಳಿ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ವಿಪರೀತ ಕಾಡುತ್ತಿರುವ ಸಮಸ್ಯೆ ಸ್ಥೂಲಕಾಯ. ಇದಕ್ಕೆ ಕಾರಣ ನಮ್ಮ ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ದತಿಗಲ್ಲಿನ ಪರಿಣಾಮವಾಗಿ ಹರ್ಮೊನ್ ಇಂಬ್ಯಾಲೆನ್ಸ್, ಮಾನಸಿಕ ಒತ್ತಡ ಹೀಗೆ ಹತ್ತು ಹಲವು ಕಾರಣಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ.
ಸ್ಥೂಲಕಾಯ ಕೇವಲ ದೇಹದ ಸೌಂದರ್ಯಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ, ಇದರಿಂದ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಇನ್ನಿತರ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಕ್ರಮೇಣ ನಮ್ಮಲ್ಲಿರುವ ಅಂತಃ ಶಕ್ತಿಯನ್ನು ಕುಗ್ಗಿಸುತ್ತದೆ. ಕೆಲವರಿಗಂತೂ ಸ್ಥೂಲಕಾಯವು ಜೀವವೇ ಜಿಗುಪ್ಸೆ ಎಂಬ ಹಂತವನ್ನು ತಲುಪಿಸುತ್ತದೆ.
ಇಂತಹ ಮಹಾ ಮಾರಿಗೆ ಗುಡ್ ಬೈ ಹೇಳಬೇಕಾದರೆ ನೀವು ತಪ್ಪದೆ ಈ ನಿಯಮಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ.
* ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪ ಹಾಗೂ ನಿಂಬೆರಸ ಬೆರೆಸಿ ಸೇವಿಸಿ.
* ಕನಿಷ್ಠ 30 ನಿಮಿಷಗಳ ವ್ಯಾಯಾಮವನ್ನು ತಪ್ಪದೆ ಮಾಡಿ.
* ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ.
* ದಿನನಿತ್ಯದ ಆಹಾರ ಪದ್ದತಿಯಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿ. ಸಿಹಿ ಪದಾರ್ಥ ಹಾಗೂ ಕರಿದ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕುವುದು ಅತಿ ಅವಶ್ಯಕ. ಜೊತೆಗೆ ಹಸಿ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದು ಉತ್ತಮ.
* ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಕೇವಲ 30 ದಿನಗಳಲ್ಲಿ ನಿಮಗೆ ಇದರ ಪರಿಣಾಮ ತಿಳಿಯುತ್ತದೆ.