ತಮಿಳುನಾಡು :ಶಿಕ್ಷಕರ ಆಜ್ಞೆಗೆ ಹೆದರಿ 4 ಶಾಲಾ ವಿಧ್ಯಾರ್ಥಿಗಳ ಆತ್ಮಹತ್ಯೆ

      

Last Updated : Nov 27, 2017, 12:08 PM IST
ತಮಿಳುನಾಡು :ಶಿಕ್ಷಕರ ಆಜ್ಞೆಗೆ ಹೆದರಿ 4 ಶಾಲಾ ವಿಧ್ಯಾರ್ಥಿಗಳ ಆತ್ಮಹತ್ಯೆ title=

ಚೆನ್ನೈ: ಅದು ಗುರುವಾರದ ಸಾಯಂಕಾಲ  ನೆಲ್ಲೂರ್ ಹತ್ತಿರದ ಪಾನಪಕ್ಕಂ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಅಲ್ಲಿನ  ಶಿಕ್ಷಕರ ಆಜ್ಞೆಗೆ ಅಕ್ಷರಶಃ ಬೆಚ್ಚಿ ಹೋಗಿದ್ದರು.ಕಾರಣವಿಷ್ಟೇ  11 ಹುಡುಗಿಯರು ಮರುದಿನ ಶಾಲೆಗೆ ಬರುವಾಗ ತಮ್ಮ ಪೋಷಕರನ್ನು ಕರೆದು ತರಬೇಕೆಂಬ  ಶಿಕ್ಷಕರ ನಿರ್ಧಾರದಿಂದ ಹೆದರಿ  ಆ ಹಳ್ಳಿಯ ಶಾಲೆಯಿಂದ ಸುಮಾರು ಒಂದು ಕಿಲೋಮೀಟರ ದೂರದಲ್ಲಿರುವ ಬಾವಿ ಜಿಗಿದು ನಾಲ್ವರು ಪ್ರಾಣ ಬಿಟ್ಟಿದ್ದಾರೆ.

ಈ ವಿಷಯದ ಬಗ್ಗೆ ಪ್ರತಿಕ್ರಯಿಸಿರುವ ಒಬ್ಬ ಹುಡುಗಿ" ಸಾಯಂಕಾಲ 5.30ಕ್ಕೆ ವಿಶೇಷ ತರಗತಿ ಮುಗಿದ ನಂತರ ಹೋದ ನಾನು,ಶಾಲೆಯಲ್ಲಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಬಾರದೆಂದು ನಿರ್ಧರಿದ್ದೆ ಎಂದ ಅವಳು ಶಾಲೆಯಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ "ನಮ್ಮ ತಮಿಳು ಶಿಕ್ಷಕರು ನಮ್ಮ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ವಿತರಿಸುತ್ತಿದ್ದರು,ನನ್ನ ಸ್ನೇಹಿತೆ ಸಂಕಾರಿಯು ಎರಡು ಅಂಕದ ಪ್ರಶ್ನೆಗಳಿಗೆ ಕೇವಲ ಅರ್ಧ ಅಂಕಗಳನ್ನು ಗಳಿಸಿದ್ದಳು.ಹಿಂದಿನ ಬೆಂಚಿನಿಂದ ಕರೆದು ನನ್ನ ಅಂಕಗಳನ್ನು ಕೇಳಿದರು,ನಾನು ಅದಕ್ಕೆ ಪೂರ್ಣ ಅಂಕ ಗಳಿಸಿದ್ದೇನೆ ಎಂದು ಹೇಳಿದೆ ಆ ಸಂಧರ್ಭದಲ್ಲಿ ಸಂಕಾರಿಯು  ಮಾರ್ಕ್ಸ್ ವಿಚಾರವಾಗಿ ಪಿಸುಗುಡುತ್ತಿದ್ದೆವು ಎಂಬ ಮರು ಉತ್ತರಕ್ಕೆ  ಟೀಚರ್ ಸಿಟ್ಟುಗೊಂಡಿದ್ದರು.ನಂತರ  ಸಾರ್ವಜನಿಕವಾಗಿ ಮುಖ್ಯೋಪಾಧ್ಯಾಯಯರಾದ ರಾಮಾಮಣಿ  ಮತ್ತು ಇತರ ಶಿಕ್ಷಕಿಯರು ಸೇರಿ ವಿಧ್ಯಾರ್ಥಿನಿಯರಿಗೆ ಸಾರ್ವಜನಿಕವಾಗಿ ಈ 11 ವಿಧ್ಯಾರ್ಥಿಗಳನ್ನು ಅವಮಾನಿಸಲಾಯಿತು  ಇದರಿಂದ ಮನನೊಂದು  ಸಂಕಾರಿ,ರೇವತಿ ,ಮನಿಷಾ ,ಮತ್ತು ದೀಪ ಈ ಶಿಕ್ಷಕರ ಶಿಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಈ ಘಟನೆಗೆ ಪ್ರತಿಕ್ರಯಿಸಿರುವ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಪ್ರದೀಪ್ ಯಾದವ್  ಮುಖ್ಯೋಪಾಧ್ಯಾಯರನ್ನು ಮತ್ತು ಇಬ್ಬರು ಶಿಕ್ಷಕಿಯರನ್ನು ಈಗಾಗಲೇ  ಕೆಲಸದಿಂದ ಅಮಾನತ್ತುಗೊಳಿಸಲಾಗಿದೆ.ಸರ್ಕಾರವು ಸಂಪೂರ್ಣ ತನಿಖೆಯ ವರದಿಯ ಆಧಾರದ ಮೇಲೆ ಶಿಕ್ಷಕರ ಮೇಲೆ ಇನ್ನು ಕಠಿಣ ಶಿಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ ಎಂದರು. ವೆಲ್ಲೂರ್ ನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ  ಪಿ.ಪಕಲ್ವನ್  ಈ ಘಟನೆಯ ಕುರಿತು ಮಾತನಾಡುತ್ತಾ 'ತನಿಖೆ ಪ್ರಗತಿ ಹಂತದಲ್ಲಿದೆ, ಇದು ಆತ್ಮಹತ್ಯೆಯ ಪ್ರಕರಣವಾಗಿರುವುದರಿಂದ ಇಲ್ಲಿಯವರೆಗೂ ಯಾರನ್ನು ಕೂಡಾ  ಈ ಘಟನೆಯ ಕುರಿತಾಗಿ ಬಂದಿಸಿಲ್ಲ ಎಂದು ಈ ಸಂಧರ್ಭದಲ್ಲಿ ತಿಳಿಸಿದರು. 

Trending News