Expensive Celebrity Divorces : ವಿಚ್ಛೇದನ ಪಡೆದುಕೊಳ್ಳುವಾಗ ತನ್ನ ಸಂಗಾತಿಗೆ ಇಂತಿಷ್ಟು ಜೀವನಾಂಶ ನೀಡಬೇಕಾಗುತ್ತದೆ. ಸೆಲೆಬ್ರಿಟಿಗಳ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಈ ಜೀವನಾಂಶ ಕೋಟಿಗಳಲ್ಲಿ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹೃತಿಕ್ ರೋಷನ್-ಸುಸಾನ್ : ಹೃತಿಕ್ 2014 ರಲ್ಲಿ ತಮ್ಮ ಪತ್ನಿ ಸುಸಾನ್ ಖಾನ್ ಗೆ ವಿಚ್ಛೇದನ ನೀಡಿದ್ದರು. ಈ ಮೂಲಕ 14 ವರ್ಷಗಳ ದಾಂಪತ್ಯ ಕೊನೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ ಹೃತಿಕ್ ವಿಚ್ಛೇದನದ ಬದಲು ಸುಸ್ಸಾನ್ ಗೆ 380 ಕೋಟಿ ರೂ. ಜೀವನಾಂಶ ನೀಡಿದ್ದಾರೆ.
ಮಲೈಕಾ ಅರೋರಾ-ಅರ್ಬಾಜ್ ಖಾನ್: ಮಲೈಕಾ ಮತ್ತು ಅರ್ಬಾಜ್ ಖಾನ್ ಅವರ ಹಲವು ವರ್ಷಗಳ ಸಂಬಂಧ ಕೂಡಾ ಪರಸ್ಪರ ಒಪ್ಪಿಗೆಯೊಂದಿಗೆ ಕೊನೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅರ್ಬಾಜ್ ಮಲೈಕಾಗೆ 10-15 ಕೋಟಿ ಜೀವನಾಂಶವನ್ನು ನೀಡಿದ್ದರು. ಆದರೆ ಮಲೈಕಾ ಮಾತ್ರ ಇದನ್ನೂ ಪಡೆದುಕೊಳ್ಳಲಿಲ್ಲ.
ಸಂಜಯ್ ಕಪೂರ್-ಕರಿಷ್ಮಾ ಕಪೂರ್: ಕರಿಷ್ಮಾ ಕಪೂರ್ ಉದ್ಯಮಿ ಸಂಜಯ್ ಕಪೂರ್ ಅವರ ವಿವಾಗ ಅತ್ಯಂತ ವೈಭವದಿಂದ ನೆರವೇರಿತ್ತು. ಆದರೆ ಈ ಮದುವೆ ಕೂಡಾ 13 ವರ್ಷಗಳಲ್ಲಿ ಮುರಿದುಬಿತ್ತು. ಸಂಜಯ್ ವಿಚ್ಛೇದನದ ಬದಲು ಕರಿಷ್ಮಾಗೆ ಮುಂಬೈನಲ್ಲಿರುವ ತನ್ನ ಪೂರ್ವಜರ ಮನೆಯನ್ನು ನೀಡಿದ್ದರು. ಇದರೊಂದಿಗೆ 14 ಕೋಟಿ ರೂ. ಜೀವನಾಂಶ ನೀಡಿದ್ದಾರೆ.
ಸಂಜಯ್ ದತ್-ರಿಯಾ ಪಿಳ್ಳೈ: ಸಂಜಯ್ ದತ್ ತನ್ನ ಮೊದಲ ಪತ್ನಿ ರಿಚಾ ದತ್ ಸಾವಿನ ನಂತರ ರಿಯಾ ಪಿಳ್ಳೈ ಅವರನ್ನು ವಿವಾಹವಾದರು. ಆದರೆ ಈ ವಿವಾಹ ಬಹಳ ದಿನಗಳವರೆಗೆ ಉಳಿಯಲಿಲ್ಲ. ಈ ವಿಚ್ಛೇದನದ ಬದಲು ಸಂಜಯ್ ರಿಯಾಗೆ ಮುಂಬೈನಲ್ಲಿ 8 ಕೋಟಿ ಮೌಲ್ಯದ ಬಂಗಲೆಯನ್ನು ನೀಡಿದ್ದರು.
ಸೈಫ್ ಅಲಿ ಖಾನ್-ಅಮೃತಾ ಸಿಂಗ್: ಸೈಫ್ ಮೊದಲು ಮದುವೆಯಾದದ್ದು ಅಮೃತಾ ಸಿಂಗ್ ಅವರನ್ನು. ಇಬ್ಬರ ದಾಂಪತ್ಯ 13 ವರ್ಷಗಳಲ್ಲಿ ಕೊನೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅಮೃತಾಗೆ ಸೈಫ್ 5 ಕೋಟಿ ಜೀವನಾಂಶ ನೀಡಿದ್ದರು.