ಇನ್ನೆರಡು ತಿಂಗಳ ಬಳಿಕ ಈ ಮೂರು ರಾಶಿಯವರಿಗೆ ಸೋಲೆಂಬುದೇ ಇಲ್ಲ .!

 ಮಾರ್ಚ್ 15, 2023 ರಂದು ಸಂಭವಿಸಲಿರುವ ಶನಿಯ  ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಯವರು ಅತಿ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.   
 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, 2023 ರ ಆರಂಭದಲ್ಲಿಯೇ ಬಹಳ ಮುಖ್ಯವಾದ ಗ್ರಹಗಳು ಸಾಗುತ್ತಿವೆ. ಇದರಲ್ಲಿ ಪ್ರಮುಖವಾದುದು ಶನಿಯ  ಸ್ಥಾನದ ಬದಲಾವಣೆ. ಶನಿಯು 30 ವರ್ಷಗಳ ನಂತರ ಜನವರಿ 17, 2023 ರಂದು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಇದರ ನಂತರ, ಶನಿಯು ಮಾರ್ಚ್ 15 ರಂದು ತನ್ನ ನಕ್ಷತ್ರವನ್ನು ಕೂಡಾ ಬದಲಾಯಿಸಲಿದೆ.  ಶನಿಯ ಸಂಕ್ರಮಣ, ಶನಿಯ ಅಸ್ತ, ಸೂರ್ಯನೊಂದಿಗೆ ಶನಿಯ ಸಂಯೋಗ ಮತ್ತು ಶನಿಯ ರಾಶಿ ಬದಲಾವಣೆ ಇವೆಲ್ಲವೂ ಜ್ಯೋತಿಷ್ಯದ ಪ್ರಕಾರ ಬಹಳ  ಪ್ರಾಮುಖ್ಯವಾದವು. ಮಾರ್ಚ್ 15, 2023 ರಂದು ಸಂಭವಿಸಲಿರುವ ಶನಿಯ  ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಯವರು ಅತಿ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮಿಥುನ ರಾಶಿ : ಶನಿ ನಕ್ಷತ್ರ ಬದಲಾಯಿಸುತ್ತಿರುವುದು ಮಿಥುನ ರಾಶಿಯವರ ಬಾಳಲ್ಲಿ ಹೊಸ ಬೆಳಕು ಮೂಡಿಸಲಿದೆ. ಈ ಸಮಯವು ಮಿಥುನ ರಾಶಿಯವರಿಗೆ  ವರವಾಗಿ ಪರಿಣಮಿಸಲಿದೆ. ವಿಶೇಷವಾಗಿ ಉದ್ಯಮಿಗಳು ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದಾರೆ. ಅದೃಷ್ಟ ಈ ರಾಶಿಯವರ ಜೊತೆಯಲ್ಲಿಯೇ ಸಾಗಲಿದೆ. ಹಾಗಾಗಿ ಯಾವ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ.

2 /3

ಸಿಂಹ ರಾಶಿ: ಶನಿಯ ನಕ್ಷತ್ರ ಬದಲಾವಣೆಯು ಸಿಂಹ ರಾಶಿಯವರ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಉತ್ತಮ ಸಮಯ. ಯಾಕೆಂದರೆ ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಒಳ್ಳೆಯದೇ ಆಗಲಿದೆ. ಹಣದ ಆಗಮನ ಹೆಚ್ಚಾಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. 

3 /3

ಮಕರ ರಾಶಿ : ಶನಿ ಶತಭಿಷ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿದ್ದಾನೆ. ಇದು ಮಕರ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಜೀವನದಲ್ಲಿ ಎದುರಾಗುತ್ತಿದ್ದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಠಾತ್ ಹಣಕಾಸಿನ ಲಾಭವಾಗಲಿದೆ. ಒಂದರ ಹಿಂದೆ ಒಂದರಂತೆ ಅವಕಾಶಗಳು ಎದುರಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬರಬಹುದು. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಷಯವು ಇತ್ಯರ್ಥವಾಗುತ್ತದೆ ಮತ್ತು   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.