Sri Lanka Players: ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಇಂದು ನಡೆದ ಮೂರು ಪಂದ್ಯಗಳ ಸರಣಿಯ ಭಾರತ ಮತ್ತು ಶ್ರೀಲಂಕಾ ಮೂರನೇ ಏಕದಿನ ಪಂದ್ಯದಲ್ಲಿ, ಜೆಫ್ರಿ ವಾಂಡರ್ಸೆ ಮತ್ತು ಅಶೆನ್ ಬಂಡಾರ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ಪರಿಣಾಮ ಇಬ್ಬರೂ ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬಾರಿಸಿದ ಬೌಂಡರಿಯನ್ನು ತಡೆಯಲು ಹೋದ ವಾಂಡರ್ಸೆ ಮತ್ತು ಅಶೆನ್ ಬಂಡಾರ ಡಿಕ್ಕಿ ಹೊಡೆದಿದ್ದಾರೆ. ಫುಟ್‌ಬಾಲ್‌ನಲ್ಲಿ ಸಾಮಾನ್ಯವಾಗಿ ನೋಡುವ ಸ್ಲೈಡಿಂಗ್ ಚಾಲೆಂಜ್ ನ್ನು ಕ್ರಿಕೆಟ್ ನಲ್ಲೂ ಆಗಾಗ್ಗೆ ಬಳಸಲಾಗುತ್ತದೆ. ಹೀಗೆ ಮಾಡಿದರೆ ಮತ್ತೊಬ್ಬ ಆಟಗಾರ ಸೇಫ್ ಆಗಿ ಹೊರಬರಬಹುದು. ಆದರೆ ಇದೇ ಟ್ರಿಕ್ಸ್ ಇಲ್ಲಿ ಮುಳುವಾಗಿದ್ದು, ಒಬ್ಬರ ಹೊಟ್ಟೆಗೆ ಗಂಭೀರ ಗಾಯವಾಗಿದ್ದರೆ, ಮತ್ತೊಬ್ಬರ ಕಾಲಿಗೆ ಪೆಟ್ಟಾಗಿದೆ.
ಡಿಕ್ಕಿಯಾದ ದೃಶ್ಯ ನೋಡಿ:
Not so good scenes from Trivandrum.
Just hoping that the injuries aren’t serious. #INDvsSL#GreenfieldStadium pic.twitter.com/7RhrzHOq18— Nirmal Jyothi (@majornirmal) January 15, 2023
Players collided with each other
Hoping for nothing serious 🙏🙏♥️#indvssl #injury pic.twitter.com/aeJbGDYhQ6
— Riseup Pant (@RiseupPant) January 15, 2023
ಘಟನೆ ಸಂಭವಿಸುತ್ತಿದ್ದಂತೆ ಶ್ರೀಲಂಕಾದ ಫಿಸಿಯೋಥೆರಪಿಸ್ಟ್ ಮೈದಾನಕ್ಕೆ ಆಗಮಿಸಿ ಪರೀಕ್ಷಿಸಿದರು. ಬಳಿಕ ಸ್ಟ್ರೆಚರ್ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಇದೇ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ವೃತ್ತಿಪರರು ಮೈದಾನದ ಆಟಗಾರರಿಗೆ ಸಹಾಯ ಮಾಡಲು ಧಾವಿಸುತ್ತಿರುವುದು ಕಂಡುಬಂತು. ಇನ್ನು ವಿರಾಟ್ ಕೊಹ್ಲಿ ಶ್ರೀಲಂಕಾ ಆಟಗಾರರ ಬಳಿ ಗಾಯಗೊಂಡ ಪ್ಲೇಯರ್ಸ್ ಬಗ್ಗೆ ವಿಚಾರಿಸುತ್ತಿರುವುದು ಕಂಡುಬಂತು.
ಇದನ್ನೂ ಓದಿ: T20 World Cup: 6 ಬಾಲ್ 26 ರನ್: ಒಂದೇ ಓವರ್ ನಲ್ಲಿ ಕಮಾಲ್ ಮಾಡಿದ ಟೀಂ ಇಂಡಿಯಾದ ಹೆಣ್ಣು ಹುಲಿ
ಸದ್ಯ ಟೀ ಇಂಡಿಯಾ ಬ್ಯಾಟಿಂಗ್ ಮುಗಿಸಿದ್ದು, 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಕಲೆ ಹಾಕಿದೆ. ಜೊತೆಗೆ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ವಿರಾಟ್ 166 ರನ್ ಗಳಿಸಿ ಅಜೇಯರಾಗಿದ್ದಾರೆ. ಶ್ರೀಲಂಕಾ ತಂಡಕ್ಕೆ ಭಾರೀ ಮೊತ್ತದ ಗುರಿ ನೀಡಿದ್ದು, ಮೂರನೇ ಪಂದ್ಯವನ್ನು ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.