Nepal Plane Tragedy: ದುರಂತ ಅಂತ್ಯ ಕಂಡ ಪಶುಪತಿನಾಥನ ದರ್ಶನಕ್ಕೆ ತೆರಳಿದ್ದ ಭಕ್ತರು!

Nepal Plane Crash: ನೇಪಾಳ ವಿಮಾನದ ದುರಂತದಲ್ಲಿ ಸಾವನ್ನಪ್ಪಿದ ಐವರು ಭಾರತೀಯರು ಉತ್ತರಪ್ರದೇಶದ ಗಾಜಿಪುರ ನಿವಾಸಿಗಳು. ಕಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದರು ದುರಂತ ಅಂತ್ಯ ಕಂಡಿದ್ದರು.

Written by - Puttaraj K Alur | Last Updated : Jan 16, 2023, 10:32 AM IST
  • ನೇಪಾಳದ ಪೊಖರಾದಲ್ಲಿ ಭಾನುವಾರ ಭೀಕರ ವಿಮಾನ ದುರಂತ ಸಂಭವಿಸಿದೆ
  • ಐವರು ಭಾರತೀಯರು ಸೇರಿದಂತೆ 72 ಜನರು ದುರ್ಮರಣ ಹೊಂದಿದ್ದಾರೆ
  • ಪಶುಪತಿನಾಥನ ದರ್ಶನಕ್ಕೆ ತೆರಳಿದ್ದ ಉತ್ತರಪ್ರದೇಶದ ಮೂಲದ ಐವರು ಸ್ನೇಹಿತರು
Nepal Plane Tragedy: ದುರಂತ ಅಂತ್ಯ ಕಂಡ ಪಶುಪತಿನಾಥನ ದರ್ಶನಕ್ಕೆ ತೆರಳಿದ್ದ ಭಕ್ತರು! title=
ಭೀಕರ ವಿಮಾನ ದುರಂತ

ಕಠ್ಮಾಂಡು: ನೇಪಾಳದ ಪೊಖರಾದಲ್ಲಿ ಭಾನುವಾರ ಭೀಕರ ವಿಮಾನ ದುರಂತ  ಸಂಭವಿಸಿದ್ದು, ಐವರು ಭಾರತೀಯರು ಸೇರಿದಂತೆ 72 ಜನರು ದುರ್ಮರಣ ಹೊಂದಿದ್ದಾರೆ. ಕಳೆದ 30 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ವಿಮಾನ ದುರಂತ ಇದಾಗಿದೆ. ಪತನವಾದ ವಿಮಾನದಲ್ಲಿ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಒಟ್ಟು 72 ಮಂದಿ ಇದ್ದರು ಎಂದು ವರದಿಯಾಗಿದೆ.

‘ಯೇತಿ ಏರ್‌ಲೈನ್ಸ್‌ಗೆ ಸೇರಿದ ATR–72 ವಿಮಾನವು ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಭಾನುವಾರ ಬೆಳಗ್ಗೆ 10.25ಕ್ಕೆ ಹೊರಟಿತ್ತು. ಕಠ್ಮಂಡುವಿನಿಂದ 160 ಕಿಮೀ ದೂರದಲ್ಲಿರುವ ಪೊಖರಾದಲ್ಲಿ ಬೆಳಗ್ಗೆ 10.40ರ ವೇಳೆಗೆ ಈ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದರೆ ವಿಮಾನ ನಿಲ್ದಾಣದಿಂದ ಕೆಲವೇ 100 ಮೀಟರ್‌ ದೂರದಲ್ಲಿದ್ದಾಗ ವಿಮಾನವು ನೆಲಕ್ಕೆ ಅಪ್ಪಳಿಸಿತ್ತು. ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿದ್ದು, ವಿಮಾನದಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Watch: ಸಂಸದೆ ಸುಪ್ರಿಯಾ ಸುಳೆ ಸೀರೆಗೆ ತಗುಲಿದ ಬೆಂಕಿ, ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ

ಪಶುಪತಿನಾಥನ ದರ್ಶನಕ್ಕೆ ತೆರಳಿದ್ದವರ ದುರಂತ ಅಂತ್ಯ!

ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡ ಐವರು ಭಾರತೀಯರು ಪಶುಪತಿನಾಥನ ದರ್ಶನಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಅಭಿಷೇಕ್ ಕುಶ್ವಾಹಾ (25), ವಿಶಾಲ್‌ ಶರ್ಮಾ (22), ಅನಿಲ್ ಕುಮಾರ್ ರಾಜ್ಬರ್ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ವಿಮಾನ ದುರಮತದಲ್ಲಿ ಪ್ರಾಣ ಕಳೆದುಕೊಂಡವರು. ಇವರೆಲ್ಲರೂ ಸ್ನೇಹಿತರಾಗಿದ್ದು, ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಗಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ಯಕ ಅಖೌರಿ, ‘ನಾವು ಮೃತರ ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ. ಸರ್ಕಾರದಿಂದ ಯಾವ ರೀತಿಯ ನೆರವು ನೀಡಬೇಕು ಅನ್ನೋದರ ಬಗ್ಗೆ ಚರ್ಚಿಸುತ್ತಿದ್ದೇವೆ. ಇದು ತುಂಬಾ ದುಃಖದ ವಿಷಯ. ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ನಾವು ಸಂತಾಪ ಸೂಚಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಂತದ ಸುದ್ದಿ, ಕನಿಷ್ಠ ವೇತನದಲ್ಲಿ ಶೀಘ್ರದಲ್ಲೇ ಹೆಚ್ಚಳ

ಸೋನು ಜೈಸ್ವಾಲ್ ಉದ್ಯಮಿಯಾಗಿದ್ದರೆ, ವಿಶಾಲ್‌ ಶರ್ಮಾ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅನಿಲ್ ಕುಮಾರ್ ರಾಜ್ಬರ್ ಮತ್ತು ಅಭಿಷೇಕ್ ಕುಶ್ವಾಹಾ ಗಾಜಿಪುರದಲ್ಲಿ ಜನ ಸೇವಾ ಕೇಂದ್ರವನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News