ನವದೆಹಲಿ: ಪ್ರಪಂಚದಲ್ಲಿ ಎಂಥೆಂತಾ ವಿಚಿತ್ರ ಮನುಷ್ಯರು ಇರುತ್ತಾರೆ… ತಾವು ಮಾಡುವ ಎಡವಟ್ಟುಗಳಿಂದಲೇ ಅವರು ಸಖತ್ ಸುದ್ದಿಯಾಗುತ್ತಾರೆ. ಹುಡುಗಾಟವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡವರು ಹಲವರಿದ್ದಾರೆ. ಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡವರಿದ್ದಾರೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೌದು, ಇಂತಹ ಶತಮೂರ್ಖ ಹುಡುಕಿದ್ರೂ ನಿಮಗೆ ಸಿಗಲ್ಲ. ಜಸ್ಟ್ ಮಿಸ್ ಆಗಿದ್ರೂ ಈತನ ಪ್ರಾಣಪಕ್ಷಿ ಹಾರಿಹೋಗ್ತಿತ್ತು. ಆದರೆ ಅದೃಷ್ಟವಶಾತ್ ಆತನ ಆಯಸ್ಸು ಗಟ್ಟಿಯಾಗಿತ್ತು. ಹೀಗಾಗಿ ಬದುಕಿದೆ ಬಡಜೀವ ಎಂಬತೆ ಈ ವ್ಯಕ್ತಿ ಸಾವಿನ ಮನೆಯ ಕದ ತಟ್ಟಿ ಪ್ರಾಣ ಉಳಿಸಿಕೊಂಡಿದ್ದಾನೆ.
ಇದನ್ನೂ ಓದಿ: ರಾಷ್ಟ್ರಪತಿ ಕಾಲು ಮುಟ್ಟಿ ನಮಸ್ಕರಿಸಲು ಬಂದ ಸರ್ಕಾರಿ ಅಧಿಕಾರಿ ಸಸ್ಪೆಂಡ್...!
ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿದ್ರೆ ಒಂದುಕ್ಷಣ ನಿಮಗೆ ಶಾಕ್ ಅಗುತ್ತದೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿಯ ಮೂರ್ಖತನ ಕಂಡರೆ ಆತನ ಕಪಾಳಕ್ಕೆ ಎರಡು ಬಿಡಬೇಕು ಅನ್ನಿಸುತ್ತದೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅಂತೀರಾ? ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ.
क्या आपके ज़िंदगी की कोई क़ीमत नहीं !!! pic.twitter.com/fbv8EJWsU9
— Awanish Sharan (@AwanishSharan) January 14, 2023
ರೈಲು ಬರುವಾಗಲೇ ಹಳಿ ದಾಟಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಚಲಿಸುವ ರೈಲು ಹತ್ತಲು ಹೋಗಿ ಅನೇಕು ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಅದೇ ರೀತಿ ಈ ವ್ಯಕ್ತಿ ರೈಲು ಹಳಿ ದಾಟಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ. ಆದರೆ ಅದೃಷ್ಟ ಚೆನ್ನಾಗಿತ್ತು, ಹೀಗಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರೈಲು ಬರುವಾಗಲೇ ಈ ವ್ಯಕ್ತಿ ಹಳಿ ದಾಟಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಹೀಗೆ ಹಳಿ ದಾಟಲು ಯತ್ನಿಸುತ್ತಿದ್ದ ವೇಳೆಯೇ ಆತನ ಕಾಲಿನಲ್ಲಿದ್ದ ಶೂವೊಂದು ಕಳಚಿಬಿದ್ದಿದೆ. ಈ ವೇಳೆ ಆತನಿಗೆ ಏನು ಮಾಡಬೇಕೆಂಬುದೇ ಒಂದುಕ್ಷಣ ತೋಚಿಲ್ಲ. ಹೀಗಾಗಿ ಆತ ತನ್ನ ಶೂ ಎತ್ತಿಕೊಂಡು ಆ ಕಡೆ-ಈಕಡೆ ಓಡಾಡಿ ರೈಲು ಬರುವುದನ್ನು ಲೆಕ್ಕಿಸದೆ ಹಳಿ ದಾಟಲು ಯತ್ನಿಸಿದ್ದಾನೆ.
ಇದನ್ನೂ ಓದಿ: ನಗ್ನ ವಿಡಿಯೋ ಕಾಲ್ ಬಲೆಗೆ ಬಿದ್ದು 2.69 ಕೋಟಿ ರೂ.ಕಳೆದುಕೊಂಡ ಉದ್ಯಮಿ..!
ಇನ್ನೇನು ರೈಲು ಬಂದು ಗುದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಆತ ಹಳಿದಾಟಿ ರೈಲ್ವೆ ಪ್ಲಾಟ್ ಫಾರಂ ಏರಿದ್ದಾನೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನು ಕೂಗಿ ಕೂಗಿ ಅಲ್ಲಿಯೇ ನಿಲ್ಲು ಅಂದರೂ ಕೇಳಿಲ್ಲ. ಹಳಿ ದಾಟಿ ಬಂದ ಆತನನ್ನು ಪೊಲೀಸ್ ಸಿಬ್ಬಂದಿ ಮೇಲಕ್ಕೆ ಎತ್ತಿದ್ದಾನೆ. ಇದೇ ವೇಳೆ ಆತ ಮಾಡಿದ ಮೂರ್ಖತನಕ್ಕೆ ಕಪಾಳಕ್ಕೆ ಬಾರಿಸಿದ್ದಾನೆ. ಈ ವಿಡಿಯೋ ಹಂಚಿಕೊಂಡಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್, ‘ನಿನ್ನ ಪ್ರಾಣಕ್ಕೆ ಬೆಲೆಯಿಲ್ಲವೇ!!!’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.