Monkey Video : ಕೋತಿಗೂ ಮಾನವನಿಗೂ ಅನೇಕ ವಿಚಾರಗಳಲ್ಲಿ ಹೋಲಿಕೆಯಿದೆ. ಕೋತಿಗಳು ಎಂದಾಗ ತಕ್ಷಣ ನೆನಪಾಗುವುದು ಅವು ಮಾಡುವ ಚೇಷ್ಟೆ. ಒಂದು ಕ್ಷಣವೂ ಸುಮ್ಮನಿರದೆ ಏನಾದರೂ ತಮಾಷೆಯ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತವೆ. ಇದನ್ನು ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ? ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂತೆ ಕೋತಿಗಳು ಮಾಡುತ್ತವೆ. ಮಂಗಗಳ ಕೈಗೆ ಸ್ಮಾರ್ಟ್‌ಫೋನ್ ಕೊಟ್ಟಾಗ ಹೇಗಿರುತ್ತೆ? ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.
ಇದನ್ನೂ ಓದಿ : Mangal Dosh : ಜಾತಕದಲ್ಲಿ ಮಂಗಳ ದೋಷವಿದ್ದರೆ ಈ ರತ್ನ ಧರಿಸಿ, ಚಮತ್ಕಾರ ನೋಡಿ.!
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ತನ್ನ ಕ್ಯಾಮೆರಾದಲ್ಲಿ ಕೋತಿಗಳನ್ನು ಸೆರೆಹಿಡಿದಿರುವುದನ್ನು ಕಾಣಬಹುದು. ವಿಡಿಯೋ ಮಾಡಿ ಬಳಿಕ ಅದೇ ವಿಡಿಯೋವನ್ನು ಮಂಗಗಳಿಗೆ ತೋರಿಸಿದ್ದಾರೆ. ಹೌದು, ಈ ವೈರಲ್ ವಿಡಿಯೋದಲ್ಲಿ ಯಾರೋ ಒಬ್ಬರು ಒಂದು ಸಣ್ಣ ಮಂಗಗಳ ಹಿಂಡಿಗೆ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಆನ್ ಮಾಡಿ ಕೊಟ್ಟಿದ್ದಾರೆ. ಮೊದಲಿಗೆ ಈ ವಿಡಿಯೋ ಫ್ರೇಮಿನಲ್ಲಿ ಮೂರು ಮಂಗಗಳು ವಿಡಿಯೋ ನೋಡುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಮಂಗ ವಿಡಿಯೋ ಕಂಡು ಏನೋ ಅಚ್ಚರಿಕಂಡಂತೆ ಉಬ್ಬೇರಿಸಿತು. ಫೋನ್ ಹಿಡಿದಿದ್ದ ವ್ಯಕ್ತಿ ಫೋನ್ ಅನ್ನು ಸ್ವಲ್ಪ ತಿರುಗಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇನ್ನೊಂದು ಮಂಗ ಸ್ಮಾರ್ಟ್‌ಫೋನ್ ಅನ್ನು ತನ್ನೆಡೆ ಕಸಿದು ವಿಡಿಯೋಗೆ ಚುಂಬಿಸಲು ಪ್ರಯತ್ನಿಸಿತು.
Craze Of Social Media🤦♀️🤦♀️ pic.twitter.com/UiLboQLD32
— Queen of Himachal (@himachal_queen) July 10, 2022
ಅಷ್ಟರಲ್ಲಿ ಮತ್ತೊಂದು ದೊಡ್ಡ ಮಂಗ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋದಲ್ಲಿದ್ದ ಮಂಗಗಳ ಹಿಂಡನ್ನು ಸ್ಪರ್ಶಿಸಲು ಯತ್ನಿಸುತ್ತದೆ. ಬಳಿಕ ಆ ಮೂರು ಮಂಗಗಳು ವಿಡಿಯೋ ವೀಕ್ಷಿಸುತ್ತಿದ್ದವು. ಅಷ್ಟರಲ್ಲಿ ಹಿಂಬದಿಯಿಂದ ಒಂದು ಪುಟಾಣಿ ಕೋತಿ ಮರಿ ಗಾಬರಿಗೊಂಡಂತೆ ದೊಡ್ಡ ಕೋತಿಯ ಬಳಿ ಬರುತ್ತದೆ. ತನ್ನದೇ ವೀಡಿಯೋ ನೋಡಿ ಬೆಚ್ಚಿಬಿದ್ದ ಫ್ರೇಮಿನಲ್ಲಿದ್ದ ಚಿಕ್ಕ ಕೋತಿಯ ಪ್ರತಿಕ್ರಿಯೆ ನೋಡಲೇಬೇಕು.
ಇದನ್ನೂ ಓದಿ : ಮೆಟ್ರೋದಲ್ಲಿ ಪ್ರತ್ಯಕ್ಷವಾದ ಮಂಜುಲಿಕಾ ಭೂತ! ಬೆಚ್ಚಿಬಿದ್ದ ಪ್ರಯಾಣಿಕರು ಮಾಡಿದ್ದೇನು?
ಕೆಲವೇ ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಇದುವರೆಗೂ ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ನೆಟಿಜನ್‌ಗಳು ಇದನ್ನು ಇಷ್ಟಪಟ್ಟಿದ್ದಾರೆ. ವೀಡಿಯೊ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.