ನ್ಯಾಯ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ : ಅಮಿತ್ ಶಾ

ಅವರು ಇಂದು ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್‍ಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Written by - Zee Kannada News Desk | Last Updated : Jan 28, 2023, 06:55 PM IST
  • ಅಪರಾಧಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ದೇಶದ ನೀತಿಗಳಲ್ಲಿಯೂ ಬದಲಾವಣೆ ತರುವ ಅವಶ್ಯಕತೆಯಿದೆ.
  • ತನಿಖೆಯು ವಿಧಿ ವಿಜ್ಞಾನದ ಆಧಾರದಲ್ಲಿ ನಡೆಯಬೇಕಿದೆ.
  • ಅಪರಾಧ ನಡೆದ ಸ್ಥಳಗಳಲ್ಲಿ ತಕ್ಷಣವೇ ವಿಧಿ ವಿಜ್ಞಾನ ಅಧಿಕಾರಿಗಳನ್ನು ಭೇಟಿ ನೀಡುವಲ್ಲಿ ಕರ್ನಾಟಕ ಹಾಗೂ ದೆಹಲಿ ಮುಂಚೂಣಿ ಸ್ಥಾನದಲ್ಲಿವೆ.
 ನ್ಯಾಯ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ : ಅಮಿತ್ ಶಾ title=
Photo Courtsey: Facebook

ಧಾರವಾಡ: ದೇಶದಲ್ಲಿ ವಿಧಿ ವಿಜ್ಞಾನ ಕೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.

ಅವರು ಇಂದು ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್‍ಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಪರಾಧ ಜಗತ್ತು ಬೆಳೆಯುತ್ತಿದೆ. ಅಪರಾಧಿಗಳು ಹೊಸ ಹೊಸ ಮಾರ್ಗಗಳನ್ನು ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಅಪರಾಧವನ್ನು ನಿಯಂತ್ರಿಸಲು ಹಾಗೂ ಅಪರಾಧಿಗಳನ್ನು ಖಚಿತವಾಗಿ ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನದ ಸಾಕ್ಷಾಧಾರಗಳು ಉಪಯೋಗವಾಗುತ್ತಿವೆ ಎಂದರು.

ಇದನ್ನೂ ಓದಿ: ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಜನ್ಮದಿನ: ಶತ್ರುಗಳೂ ಸೆಲ್ಯೂಟ್ ಹೊಡೆದ ಭಾರತೀಯ ವೀರ ಯೋಧನ ಸ್ಮರಣೆ

ಅಪರಾಧಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ದೇಶದ ನೀತಿಗಳಲ್ಲಿಯೂ ಬದಲಾವಣೆ ತರುವ ಅವಶ್ಯಕತೆಯಿದೆ. ತನಿಖೆಯು ವಿಧಿ ವಿಜ್ಞಾನದ ಆಧಾರದಲ್ಲಿ ನಡೆಯಬೇಕಿದೆ. ಅಪರಾಧ ನಡೆದ ಸ್ಥಳಗಳಲ್ಲಿ ತಕ್ಷಣವೇ ವಿಧಿ ವಿಜ್ಞಾನ ಅಧಿಕಾರಿಗಳನ್ನು ಭೇಟಿ ನೀಡುವಲ್ಲಿ ಕರ್ನಾಟಕ ಹಾಗೂ ದೆಹಲಿ ಮುಂಚೂಣಿ ಸ್ಥಾನದಲ್ಲಿವೆ.ಆರು ವರ್ಷಗಳ ಹೆಚ್ಚಿನ ಶಿಕ್ಷೆ ಆಗುವ ಅಪರಾಧಗಳಲ್ಲಿ ವಿಧಿ ವಿಜ್ಞಾನ ತನಿಖೆ ಕಡ್ಡಾಯವಾಗಿದೆ. ಕಾನೂನು ವ್ಯವಸ್ಥೆಯಲ್ಲಿ ತನಿಖೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ನ್ಯಾಯದಾನ ಕ್ಷೇತ್ರದಲ್ಲಿ ವಿಧಿ ವಿಜ್ಞಾನಗಳ ಸಾಕ್ಷಾಧಾರಗಳನ್ನು ಕಡ್ಡಾಯವಾಗಿ ಪರಿಗಣಿಸುವ ನಿಟ್ಟಿನಲ್ಲಿ ದೇಶದ ಐಪಿಸಿ-ಸಿಆರ್‍ಪಿಸಿಗಳಲ್ಲಿ ಬದಲಾವಣೆ ತರಲಾಗುವುದೆಂದರು.

ಅನ್ವಯಿಕ ವರ್ತನೆಗಳ ವಿಜ್ಞಾನಗಳ ಅಧ್ಯಯನಗಳೊಂದಿಗೆ ವಿಧಿ ವಿಜ್ಞಾನ ಕೇತ್ರದಲ್ಲಿ ಶೈಕ್ಷಣಿಕ ಕಲಿಕೆಗೆ ಎಲ್ಲ ರೀತಿಯ ಆಧುನಿಕ ಮೂಲ ಸೌಕರ್ಯ ಕಲ್ಪಿಸಿ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿವೆ. ವಿಧಿ ವಿಜ್ಞಾನ ಪರಿಣಿತರನ್ನು ಇಲ್ಲಿಂದ ಹೊರತರಲಾಗುವುದು. ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಅಪರಾಧಿ, ಡಿಎನ್‍ಎ ವಿಧಿ ವಿಜ್ಞಾನ, ಆಹಾರ ಹಾಗೂ ಕೃಷಿ ವಿಧಿ ವಿಜ್ಞಾನ ಕೃತಕ ಬುದ್ಧಿಮತ್ತೆ ವಿಷಯಗಳ ಬಗ್ಗೆ ಶೈಕ್ಷಣಿಕ ವಿಷಯಗಳಲ್ಲಿ ಉನ್ನತ ಜ್ಞಾನ ನೀಡಲಾಗುವುದು. ಇಡೀ ಜಗತ್ತಿನಲ್ಲಿಯೇ ಹೆಚ್ಚಿನ ವಿಧಿ ವಿಜ್ಞಾನ ಪರಿಣಿತರನ್ನು ಭಾರತದಲ್ಲಿ ಹೊರತರಲಾಗುವುದೆಂದರು.

ಈ ವಿಶ್ವವಿದ್ಯಾಲಯದ ಯುವಕರಿಗೆ ಉದ್ಯೋಗ ನೀಡಲಿದೆ. ಹಾಗೂ ಅಪರಾಧಗಳನ್ನು ಕಡಿಮೆಗೊಳಿಸಲು ಉತ್ತಮ ಕಾರ್ಯ ನಿರ್ವಹಿಸಲಿದೆ. ದೇಶದಲ್ಲಿ 10 ಸಾವಿರ ಪರಿಣಿತರನ್ನು ಉತ್ಪಾದಿಸಲಿವೆ. 70 ದೇಶಗಳ ಜೊತೆ 155 ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಅಪರಾಧ ಮಾಹಿತಿ ಬ್ಯೂರೊದಲ್ಲಿ ಒಂದುವರೆ ಕೋಟಿ ಅಪರಾಧಿಗಳ ಫಿಂಗರ್ ಪ್ರೀಂಟಿಂಗ್ ದಾಖಲಿಸಲಾಗಿದೆ. ಅಪರಾಧಿಗಳನ್ನು ತಕ್ಷಣವೆ ಪತ್ತೆ ಹಚ್ಚಲು ಉಪಯೋಗವಾಗಲಿದೆ. ವೈಜ್ಞಾನಿಕ ಪರಿಣಿತಿ, ಸಂಶೋಧನಾ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಇಂದಿನ ಅಗತ್ಯವಾಗಿದ್ದು, ಆಧುನಿಕ ಸಾಂಸ್ಥಿಕ ಹಾಗೂ ಸಂಶೋಧನಾ ಸೌಕರ್ಯದಿಂದ ಪರಿಣಿತರನ್ನು ಬೆಳೆಸುವುದರ ಜೋತೆಗೆ ಅಪರಾಧಿಗಳ ಪತ್ತೆಗೆ ಉಪಯೋಗವಾಗಲಿದೆ ಎಂದರು.

ಕರ್ನಾಟಕ ನೀತಿಗಳಲ್ಲಿ ಆಧುನಿಕ ವಿಧಿ ವಿಜ್ಞಾನವು ಹೆಚ್ಚು ಬಳಕೆಯಾಗುತ್ತಿದೆ. ಬೆಂಗಳೂರಿನಲ್ಲಿ 30 ಕೋಟಿ ವೆಚ್ಚದಲ್ಲಿ ರಾಜ್ಯ ನ್ಯಾಯ ವಿಜ್ಞಾನ ಆಧುನಿಕ ಸೌಲಭ್ಯವುಳ್ಳ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದರಲ್ಲಿ 300 ಪರಿಣಿತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಶೈಕ್ಷಣಿಕ ವಿದ್ಯಾಕಾಶಿವಾಗಿರುವ ಧಾರವಾಡಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಇನ್ನೋಂದು ಗರಿಯಾಗಿದೆ. ಎಲ್ಲ ರಾಜ್ಯಗಳಿಗೆ ದೇಶಾದ್ಯಾಂತ ಇದು ಉಪಯೋಗವಾಗಲಿದೆ. ಅಪರಾಧ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದು ನುಡಿದರು. ಬಳ್ಳಾರಿ ಹಾಗೂ ಹುಬ್ಬಳ್ಳಿಯಲ್ಲಿ ಎರಡು ಆಧುನಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳು ಸ್ಥಾಪಿಸಲಾಗಿದೆ. ಈ ವಿಶ್ವವಿದ್ಯಾಲಯದಿಂದ ಸ್ಥಳೀಯರಿಗೆ ಹಲವಾರು ಅವಕಾಶಗಳು ದೊರೆಯಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೆಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಸಚಿವರಾಧ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಈ ವಿಧಿವಿಜ್ಞಾನ ಶೈಕ್ಷಣಿಕದಿಂದ ಉದ್ಯೋಗ ಖಚಿತವೆಂದರು. ಶೀಘ್ರದಲ್ಲೇ ತರಗತಿಗಳು ಆರಂಭವಾಗಲಿದ್ದು ಮುಂದಿನ ದಿನಗಳಲ್ಲಿ ವಿಶ್ವದರ್ಜೇಯ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡದಲ್ಲಿ ಇದರಿಂದ ಶೈಕ್ಷಣಿಕ ಕ್ರಾಂತಿಯಾಗಲಿದೆ. ಅಪರಾಧ ಜಗತ್ತು ಹೆಚ್ಚೆಚ್ಚು ಬೆಳೆಯುತ್ತಿದೆ ಅಪರಾಧಿಗಳು ಹೊಸ ಹೊಸ ದಾರಿಗಳನ್ನು ಅನುಸರಿಸುತ್ತಿದ್ದಾರೆ ಆದ್ದರಿಂದ ನಮ್ಮ ನೀತಿ ಕಾನೂನುಗಳನ್ನು ಸಹ ಹೆಚ್ಚೆಚ್ಚು ಶಕ್ತಿಯುತಗೊಳಿಸಬೇಕೆಂದರು.

ಇದನ್ನೂ ಓದಿ: ಗ್ವಾಲಿಯರ್ ಬಳಿ ಸುಖೋಯ್, ಮಿರಜ್ ಫೈಟರ್ ಜೆಟ್ ಪತನ, 1 ಪೈಲಟ್ ಸಾವು

ಗೃಹ ಸಚಿವರಾದ ಅರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ, ಶಾಸಕರಾದ ಅಮೃತ ದೇಸಾಯಿ ಅರವಿಂದ ಬೆಲ್ಲದ, ಪ್ರೋ. ಎಸ್.ವಿ.ಸಂಕನೂರ, ಮಹಾಪೌರ ಈರೇಶ ಅಂಚಟಗೇರಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ರಾಜ್ಯದಲ್ಲಿ ವಿಧಿ ವಿಜ್ಞಾನ ಕ್ಷೇತ್ರದಲ್ಲಾದ ಅಭಿವೃದ್ಧಿ ಬಗ್ಗೆ ವಿವರಿಸಿದರು. ಗುಜರಾತ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪದ್ಮಶ್ರೀ, ಡಾ.ಜೆ.ಎಂ.ವ್ಯಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಕುಲಸಚಿವ ಡಾ.ಸಿ.ಡಿ.ಜಡೇಜಾ ವಂದಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News