ನವದೆಹಲಿ: ಇಂದು ಭಾನುವಾರ ಜಾರ್ಸುಗುಡ ಜಿಲ್ಲೆಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಗುಂಡು ಹಾರಿಸಿದ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರು ಗಾಯಗೊಂಡು ಸಾವನ್ನಪ್ಪಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದಾಸ್ ತೆರಳುತ್ತಿದ್ದಾಗ ಜಾರ್ಸುಗುಡಾದ ಬ್ರಜರಾಜನಗರದ ಗಾಂಧಿ ಛಾಕ್ ಬಳಿ ಈ ಘಟನೆ ಸಂಭವಿಸಿದೆ.ಸಮವಸ್ತ್ರದಲ್ಲಿದ್ದ ಎಎಸ್‌ಐ ಗೋಪಾಲ್ ದಾಸ್ ಅವರು ಇದ್ದಕ್ಕಿದ್ದಂತೆ ಸಚಿವರ ವಾಹನದ ಬಳಿ ಬಂದು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಬ್ರಜರಾಜನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಗುಪ್ತೇಶ್ವರ ಭೋಯ್ ಹೇಳಿದ್ದಾರೆ.
Odisha Health Minister Naba Kishore Das dies. He was shot at by a police ASI at Brajarajnagar in Jharsuguda district.
He was air lifted to Bhubaneswar for treatment at Apollo Hospital. #Odisha #NabaKishoreDas #NabaKisoreDas pic.twitter.com/BRWWmoLsn8
— Aman Dwivedi (@amandwivedi48) January 29, 2023
ಇದನ್ನೂ ಓದಿ: ಸಾಹಸ ಸಿಂಹನಿಗೆ ʼಕರ್ನಾಟಕ ರತ್ನʼ ಗೌರವ ನೀಡುವ ಭರವಸೆ ನೀಡಿದ ಸಿಎಂ..!
ASI ಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಆದರೆ ಹಿರಿಯ ಬಿಜೆಡಿ ನಾಯಕನ ಮೇಲಿನ ಕ್ರೂರ ದಾಳಿಯ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.ಸ್ಥಳದಲ್ಲೇ ಸಚಿವರು ಪ್ರಜ್ಞೆ ತಪ್ಪಿ ಬಿದ್ದಿದ್ದರು.ಅಂತಹ ಗಂಭೀರ ಸ್ಥಿತಿಯಲ್ಲಿ, ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.ನಂತರ, ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಕರೆದೊಯ್ಯಲಾಯಿತು.
ಇದನ್ನೂ ಓದಿ: CCL 2023 : ʼಸೆಲೆಬ್ರಿಟಿ ಕ್ರಿಕೆಟ್ ಲೀಗ್ʼ ಶುರು.. ಸುದೀಪ್ ʼಕರ್ನಾಟಕ ಬುಲ್ಡೋಜರ್ಸ್ʼ ತಂಡ ಸೇರಿ 8 ಟೀಂ ಭಾಗಿ
ಆರೋಗ್ಯ ಸಚಿವರ ಮೇಲಿನ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಆದೇಶಿಸಿದ್ದಾರೆ.ಏತನ್ಮಧ್ಯೆ, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.