New Vehicle Discount Offer: ಈ ವರ್ಷದ ಆರ್ಥಿಕ ಅಯವ್ಯಯ ಮಂಡನೆಗೆ ನಾಳೆ ಒಂದೇ ದಿನ ಬಾಕಿ ಉಳಿದಿದೆ. ಈ ಬಾರಿ ಕೇಂದ್ರ ವಿತ್ತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಹನ ಖರೀದಿಸುವವರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸುವ ಸಾಧ್ಯತೆ ಇದೆ. ಹೌದು, ನೀವು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಖರೀದಿಸಿದರೆ, ಸರ್ಕಾರವು ನಿಮಗೆ ಆದಾಯ ತೆರಿಗೆ ವಿನಾಯಿತಿ ನೀಡುತ್ತದೆ. ಆದಾಯ ತೆರಿಗೆಯಲ್ಲಿ ರಿಯಾಯಿತಿ ಪಡೆಯಲು ಬಯಸುವವರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ವಿನಾಯಿತಿಯು 31 ಮಾರ್ಚ್ 2023 ರಂದು ಮುಕ್ತಾಯಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಈ ಯೋಜನೆಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬಹುದು ಎಂಬ ಚರ್ಚೆಗಳು ಇದೀಗ ಕೇಳಿಬರಲಾರಂಭಿಸಿವೆ. ಸರ್ಕಾರ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಇಂತಹ ಪರಿಸ್ಥಿತಿಯಲ್ಲಿ, ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆ 2025 ರವರೆಗೆ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ-Budget 2023: ಬಜೆಟ್ ಮಂಡನೆಗೂ ಮುನ್ನ ಪಿಪಿಎಫ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ!
ಈ ಯೋಜನೆಯು 2019 ರಿಂದ ಚಾಲ್ತಿಯಲ್ಲಿದೆ
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಯಾರಾದರೂ ಸಾಲವನ್ನು ತೆಗೆದುಕೊಂಡರೆ, ಅದರ ಮೇಲೆ ವಿಧಿಸುವ ಬಡ್ಡಿ. ಆ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿದೆ. ಹೌದು, ಸರ್ಕಾರವು 2019 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, ನೀವು ಆರ್ಥಿಕ ವರ್ಷದಲ್ಲಿ 1.5 ಲಕ್ಷ ರೂಪಾಯಿಗಳ ವಿನಾಯ್ತಿಯನ್ನು ಪಡೆಯಬಹುದು. ಈ ಯೋಜನೆಯು 31 ಮಾರ್ಚ್ 2023 ರಂದು ಮುಕ್ತಾಯಗೊಳ್ಳಲಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇಂತಹ ಪರಿಸ್ಥಿತಿಯಲ್ಲಿ, 2023 ರ ಸಾಮಾನ್ಯ ಬಜೆಟ್ನಲ್ಲಿ ಸರ್ಕಾರವು ಈ ಕಡಿತವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಯೋಜನೆಯ ಪ್ರಯೋಜನವೆಂದರೆ ನೀವು ಸಾಲವನ್ನು ಮರುಪಾವತಿ ಮಾಡುವವರೆಗೆ ಈ ರಿಯಾಯಿತಿ ನಿಮಗೆ ಅನ್ವಯಿಸುತ್ತದೆ.
ಇದನ್ನೂ ಓದಿ-Budget 2023: ಬಡವರಿಗೆ ಸಿಗಲಿದೆ ಉಚಿತ ಸಿಲಿಂಡರ್! ಉಜ್ವಲಾ ಯೋಜನೆಯ ಬಜೆಟ್ ಹೆಚ್ಚಳಕ್ಕೆ ಸರ್ಕಾರದ ಚಿಂತನೆ
ದಿನಾಂಕ ವಿಸ್ತರಣೆಯಾಗಬಹುದು?
ಪ್ರಸ್ತುತ, ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಜನರಿಗೆ ಕೈಗೆಟಕುವಂತೆ ಮಾಡುವ ಅವಶ್ಯಕತೆ ಇದೆ. ಅಂತಹ ಯೋಜನೆ ಇದ್ದರೆ ಜನರು ಜನರು ಇ-ವಾಹನ ಖರೀದಿಸಲು ಆಸಕ್ತಿ ತೋರಿಸಬಹುದು. ಹೀಗಿರುವಾಗ, ಜನಸಾಮಾನ್ಯರಿಗೆ ಅವುಗಳನ್ನು ಕೈಗೆಟುಕುವಂತೆ ಮಾಡಲು ಸರ್ಕಾರವು ಬಜೆಟ್ನಲ್ಲಿ ಕೆಲವು ಘೋಷಣೆಗಳನ್ನು ಮಾಡಬಹುದು. ಈ ವಾಹನಗಳಲ್ಲಿ ಬಳಸಲಾದ ಬ್ಯಾಟರಿ ತುಂಬಾ ದುಬಾರಿಯಾದದ್ದು. ಇದರಿಂದಾಗಿ ಇವಿ ಬೆಲೆಯೂ ಅಧಿಕವಾಗುತ್ತದೆ. ಜನರು ಈ ವಾಹನಗಳನ್ನು ಖರೀದಿಸಲು, ಸರ್ಕಾರವು ಮೂಲಸೌಕರ್ಯಗಳತ್ತ ಗಮನ ಹರಿಸುತ್ತಿದ್ದು, ಆ ವಲಯದಲ್ಲೂ ಗಮನ ಹೆಚ್ಚುತ್ತಿದೆ. ಇದಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಜಾಲವನ್ನು ಸಿದ್ಧಪಡಿಸುವ ಕೆಲಸವೂ ನಡೆಯುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.