ಯೂಟ್ಯೂಬ್ ಚಾನೆಲ್ ಗಳಿಗೆ ಬಿಗ್ ಶಾಕ್; ಬರೋಬ್ಬರಿ 78 ಲಕ್ಷ ವೀಡಿಯೋ ಡಿಲೀಟ್!

ಯೂಟ್ಯೂಬ್ ಕಮ್ಯುನಿಟಿ ಗೈಡ್ ಲೈನ್ಸ್ ಎನ್ಫೋರ್ಸ್ಮೆಂಟ್ ವರದಿಯ ಪ್ರಕಾರ, ಈ ವೀಡಿಯೋಗಳಲ್ಲಿ 81 ಪ್ರತಿಶತ ವೀಡಿಯೋಗಳನ್ನು ಯಂತ್ರಗಳಿಂದ ಪತ್ತೆ ಮಾಡಲಾಗಿದೆ. 

Last Updated : Dec 15, 2018, 02:40 PM IST
ಯೂಟ್ಯೂಬ್ ಚಾನೆಲ್ ಗಳಿಗೆ ಬಿಗ್ ಶಾಕ್; ಬರೋಬ್ಬರಿ 78 ಲಕ್ಷ ವೀಡಿಯೋ ಡಿಲೀಟ್! title=

ನವದೆಹಲಿ: ಕಳೆದ ಜುಲೈ-ನವೆಂಬರ್ ನಡುವಿನ ಅಂತರದಲ್ಲಿ ಬರೋಬ್ಬರಿ 78 ಲಕ್ಷ ಆಕ್ಷೇಪಾರ್ಹ ವೀಡಿಯೋಗಳನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ. 

ಯೂಟ್ಯೂಬ್ ಕಮ್ಯುನಿಟಿ ಗೈಡ್ ಲೈನ್ಸ್ ಎನ್ಫೋರ್ಸ್ಮೆಂಟ್ ವರದಿಯ ಪ್ರಕಾರ, ಈ ವೀಡಿಯೋಗಳಲ್ಲಿ 81 ಪ್ರತಿಶತ ವೀಡಿಯೋಗಳನ್ನು ಯಂತ್ರಗಳಿಂದ ಪತ್ತೆ ಮಾಡಲಾಗಿದೆ. ಅವುಗಳಲ್ಲಿ ಶೇ.74.5ರಷ್ಟು ವೀಡಿಯೋಗಳನ್ನು ಯಾರೂ ವೀಕ್ಷಿಸಿಲ್ಲ ಎಂಬುದು ಬಹಿರಂಗವಾಗಿದೆ.

ಈ ಬಗ್ಗೆ ಕಂಪನಿಯು ಶುಕ್ರವಾರ ಹೇಳಿಕೆ ನೀಡಿದ್ದು, "ಕಂಪನಿಯು ನಿರ್ದೇಶನಗಳನ್ನು ಉಲ್ಲಂಘಿಸಿರುವ ವೀಡಿಯೋಗಳನ್ನು ಚಾನೆಲ್'ನಿಂದ ತೆಗೆದುಹಾಕಲಾಗಿದೆ. ಒಂದು ವೇಳೆ ಚಾನೆಲ್'ಗಳು ಇದೇ ರೀತಿ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ಆ ಚಾನೆಲ್'ಗಳನ್ನೇ ಬಂದ್ ಮಾಡಲಾಗುವುದು ಎಂದಿದೆ.

ವೀಡಿಯೋಗಳ ವಿಮರ್ಶಣೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಆಕ್ಷೇಪಾರ್ಹ ವೀಡಿಯೋಗಳನ್ನೂ ಯುಟ್ಯೂಬ್ ಡಿಲೀಲ್ ಮಾಡಿದೆ. ಹಾಗೆಯೇ ಸಂಸ್ಥೆಯ ತಂಡಗಳು 2017ರ ಪರಿಶೀಲನೆಗಾಗಿ ಸುಧಾರಿತ ಯಂತ್ರ ಕಲಿಕೆ ತಂತ್ರಜ್ಞಾನಗಳನ್ನು ಬಳಸಿಕೊಂಡಿವೆ.

ಕಂಪೆನಿಯು ಅದರ ಪ್ಲಾಟ್ಫಾರ್ಮ್ನಲ್ಲಿ ಆಕ್ಷೇಪಾರ್ಹ ವಿಷಯವನ್ನು ಗುರುತಿಸಲು ಮಾನವ ವಿಮರ್ಶಕರು ಮತ್ತು ತಂತ್ರಜ್ಞಾನದ ಮಿಶ್ರಣವನ್ನು ಬಳಸುತ್ತಿದೆ ಮತ್ತು ಅದರ ತಂಡಗಳು 2017 ರಲ್ಲಿ ಪರಿಶೀಲನೆಗಾಗಿ ಫ್ಲ್ಯಾಗ್ ವಿಷಯಕ್ಕಾಗಿ ಸುಧಾರಿತ ಯಂತ್ರ ಕಲಿಕೆ ತಂತ್ರಜ್ಞಾನಗಳನ್ನು ಬಳಸಿಕೊಂಡಿವೆ. "ಸೆಪ್ಟೆಂಬರ್ನಲ್ಲಿ ಹಿಂಸಾತ್ಮಕ, ಉಗ್ರಗಾಮಿತ್ವ ಪ್ರೇರೇಪಿತ ಅಥವಾ ಮಕ್ಕಳ ರಕ್ಷಣೆ ವಿಚಾರಗಳನ್ನು ಉಲ್ಲಂಘಿಸಿದ 90 ಕ್ಕಿಂತಲೂ ಹೆಚ್ಚು ಅಪ್ಲೋಡ್ ಮಾಡಲಾದ ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದೆ" ಎಂದು ಸಂಸ್ಥೆ ಹೇಳಿದೆ. 
 

Trending News