Sudeep Politics Entry: ಡಿಕೆಶಿ ಜೊತೆ ಸುದೀಪ್‌.! ʻಕೈʼ ಹಿಡಿತಾರಾ ಅಭಿನಯ ಚಕ್ರವರ್ತಿ?

Kiccha Sudeep entry into politics : ಕನ್ನಡ ಮಾತ್ರವಲ್ಲ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ನಟ ಕಿಚ್ಚ ಸುದೀಪ್‌ ವಿಚಾರವಾಗಿ ಈ ಹಿಂದೆ ವದಂತಿಯೊಂದು ಹರಿದಾಡುತ್ತಿತ್ತು. ನಟ ಕಿಚ್ಚ ಸುದೀಪ್‌ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಆಗ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿರಲಿಲ್ಲ.   

Written by - Chetana Devarmani | Last Updated : Feb 3, 2023, 10:41 AM IST
  • ರಾಜಕೀಯಕ್ಕೆ ಪ್ರವೇಶಿಸಲಿದ್ದಾರಾ ನಟ ಕಿಚ್ಚ ಸುದೀಪ್‌?
  • ಕಿಚ್ಚ ಸುದೀಪ್‌ ಜೊತೆ ಡಿ.ಕೆ ಶಿವಕುಮಾರ್‌ ಇರುವ ಫೋಟೋ ವೈರಲ್‌
  • ಕಿಚ್ಚನ ರಾಜಕೀಯ ಎಂಟ್ರಿ ಊಹಾಪೋಹಕ್ಕೆ ಪುಷ್ಠಿ ಕೊಟ್ಟ ಪೋಸ್ಟ್‌.!
Sudeep Politics Entry: ಡಿಕೆಶಿ ಜೊತೆ ಸುದೀಪ್‌.! ʻಕೈʼ ಹಿಡಿತಾರಾ ಅಭಿನಯ ಚಕ್ರವರ್ತಿ?  title=
ಕಿಚ್ಚ ಸುದೀಪ್‌ ಜೊತೆ ಡಿ.ಕೆ ಶಿವಕುಮಾರ್‌

Kiccha Sudeep with KPCC President DK Shivakumar and Nalapad : ಕನ್ನಡ ಮಾತ್ರವಲ್ಲ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ನಟ ಕಿಚ್ಚ ಸುದೀಪ್‌ ವಿಚಾರವಾಗಿ ಈ ಹಿಂದೆ ವದಂತಿಯೊಂದು ಹರಿದಾಡುತ್ತಿತ್ತು. ನಟ ಕಿಚ್ಚ ಸುದೀಪ್‌ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಆಗ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿರಲಿಲ್ಲ. ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮೂಲಕ ಸುದೀಪ್‌ ಕಾಂಗ್ರೆಸ್‌ ಸೇರಿದ್ದಾರೆ ಎಂಬ ಚರ್ಚೆಗಳು ಜೋರಾಗಿದ್ದವು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಸುದೀಪ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ಈ ವೈರಲ್‌ ಫೋಟೋಗಳು ಸುದೀಪ್‌ ರಾಜಕೀಯಕ್ಕೆ ಬರುವ ವಿಚಾರಕ್ಕೆ ಪುಷ್ಠಿ ನೀಡುವಂತಿವೆ. 

ಇದನ್ನೂ ಓದಿ :‌ Kichcha Sudeep : ರಾಜಕೀಯಕ್ಕೆ ಕಿಚ್ಚ ಸುದೀಪ್‌ ಎಂಟ್ರಿ? ಕಾಂಗ್ರೆಸ್‌ನಿಂದ ಬಂತಾ ಆಹ್ವಾನ!

ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದೀಪ್‌ ಈಗ ರಾಜಕೀಯ ಎಂಟ್ರಿ ಕೊಡುತ್ತಾರೆ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. CCL ನಲ್ಲಿ ಬ್ಯುಸಿಯಿರುವ ಸುದೀಪ್‌, ವಿಕ್ರಾಂತ್‌ ರೋಣ ಬಳಿಕ ಯಾವುದೇ ಹೊಸ ಸಿನಿಮಾ ಬಗ್ಗೆ ಅನೌನ್ಸ್‌ ಮಾಡಿಲ್ಲ. ಇದೀಗ ಕಾಂಗ್ರೆಸ್‌ ಪಕ್ಷ ಸದೀಪ್‌ ಅವರಿಗೆ ಬಲೆ ಬೀಸಿದೆಯಾ? ಸುದೀಪ್‌ ಅವರಿಗೆ ಕೈ ನಾಯಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರಾ? ಸುದೀಪ್‌ ಶೀಘ್ರದಲ್ಲೆ ರಾಜಕೀಯಕ್ಕೆ ಎಂಟ್ರಿ ಕೋಡೋದು ಪಕ್ಕಾನಾ? ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿವೆ. ಈ ಎಲ್ಲದಕ್ಕೂ ಕಾರಣ, ಸುದೀಪ್‌ ಜೊತೆ ಡಿಕೆಶಿ ಅವರು ಇರುವ ಈ ವೈರಲ್ ಫೋಟೋ. 

 

 

ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲಪಾಡ್‌ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಈ ಹಿಂದೆ ಕಾಂಗ್ರೆಸ್ ಮಾಜಿ ಸಂಸದೆ, ನಟಿ ರಮ್ಯಾ ಕಿಚ್ಚ ಸುದೀಪ್ ಅವರಿಗೆ ಬಹಿರಂಗವಾಗಿ ಆಹ್ವಾನ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಈ ಫೋಟೋಗಳು ಅದಕ್ಕೆ ಪುಷ್ಠಿ ನೀಡಿದ್ದು, ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ಸುದೀಪ್‌ ಅವರಿಗೆ ಈ ಭರ್ಜರಿ ಆಫರ್‌ ನೀಡಲಾಗಿದೆಯಂತೆ ಎಂದು ಹೇಳಲಾಗುತ್ತಿದೆ. ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಕಾಂಗ್ರೆಸ್‌ನಲ್ಲಿ ಶುರುವಾಗಿದೆಯಂತೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆಗಳಾಗಲಿ, ಮಾಹಿತಿಗಳಾಗಲಿ ಹೊರಬಿದ್ದಿಲ್ಲ.

ಇದನ್ನೂ ಓದಿ : ಶಾರುಖ್ ಖಾನ್‌ಗೂ ಕಿಯಾರಾ - ಸಿದ್ಧಾರ್ಥ್ ಮದುವೆಗೂ ಇದೆ ವಿಶೇಷ ನಂಟು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News