ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
59ನೇ ವರ್ಷಕ್ಕೆ ಕಾಲಿಡುತ್ತಿರುವ ಕುಮಾರಸ್ವಾಮಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮೂಲಕ ಶುಭಾಷಯ ಕೋರುತ್ತಾ " ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ದಿರ್ಘಾಯುಶ್ಯ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
Birthday greetings to Karnataka CM Shri @hd_kumaraswamy Ji. Praying for his long and healthy life.
— Narendra Modi (@narendramodi) December 16, 2018
ಇನ್ನೊಂದೆಡೆ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರು ಸಹ ಸಿಎಂ ಕುಮಾರಸ್ವಾಮಿಗೆ ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾ. "ರಾಜ್ಯದ ಮುಖ್ಯಮಂತ್ರಿಗಳಾದ @hd_kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪರ ಹಾಗೂ ರೈತಪರವಾಗಿರುವ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ @hd_kumaraswamy ಅವರಿಗೆ ದೇವರು ಆಯುಷ್ಯ , ಆರೋಗ್ಯ, ಶಕ್ತಿ ನೀಡುವ ಮೂಲಕ ಹೊಸ ಅಭಿವೃದ್ಧಿಯ ಪರ್ವ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಲೆಂದು ಹಾರೈಸುತ್ತೇನೆ " ಎಂದು ಕುಮಾರಸ್ವಾಮಿಗೆ ದೇವೇಗೌಡರು ಹಾರೈಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದ @hd_kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಜನಪರ ಹಾಗೂ ರೈತಪರವಾಗಿರುವ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ @hd_kumaraswamy ಅವರಿಗೆ ದೇವರು ಆಯುಷ್ಯ , ಆರೋಗ್ಯ, ಶಕ್ತಿ ನೀಡುವ ಮೂಲಕ ಹೊಸ ಅಭಿವೃದ್ಧಿಯ ಪರ್ವ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಲೆಂದು ಹಾರೈಸುತ್ತೇನೆ.— H D Devegowda (@H_D_Devegowda) December 16, 2018
ಹುಟ್ಟುಹಬ್ಬದ ಪ್ರಯುಕ್ತ ಸಿಎಂ ಕುಮಾರಸ್ವಾಮಿ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ "ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ' ಎಂದು ವಿನಂತಿಸಿಕೊಂಡಿದ್ದಾರೆ.