ಪ್ರೀತಿಯಲ್ಲಿ ಬಿದ್ದ ಹುಡಗನ ಮೊದಲ ತೊದಲ ನುಡಿ

ಪ್ರೀತಿ ಅಂದ್ರೆನೆ ಹಾಗೆ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡುವೆಯೂ ಬೇಡ, ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಫರ್ಶದ ಸಿಂಚನ ಸಾಕು ಎನಿಸುತ್ತದೆ. ಬಿಟ್ಟಿರಲಾದ ತವಕ, ಏನು ಬೇಡವೆನ್ನುವ ಭಾವ, ಹಸಿವಿಲ್ಲದ ಅದೆಷ್ಟೋ ಘಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತದೆ.

Written by - MALLIKARJUN PATIL | Edited by - Yashaswini V | Last Updated : Feb 7, 2023, 07:15 AM IST
  • ಒಂದೊಮ್ಮೆ ಏನೇ ನೋಡಿದ್ರೂ ಅವಳ ಜೊತೆ ಹಂಚಿಕೊಳ್ಳುವ ಆಸೆ
  • ಯಾರನ್ನೇ ಮಾತನಾಡಿಸಿದ್ರೂ ಅವಳ ಜೊತೆ ಹೋಲಿಕೆ ಮಾಡುವ ಮನಸ್ಸು
  • ಚಿಂತೆಯಲ್ಲೂ ಸಂಗಾತಿಯದ್ದೇ ಸದ್ದು, ಸಂತೋಷದಲ್ಲೂ ಅವಳದ್ದೇ ನೆನಪು
ಪ್ರೀತಿಯಲ್ಲಿ ಬಿದ್ದ ಹುಡಗನ ಮೊದಲ ತೊದಲ ನುಡಿ title=
Valentine Day 2023

ನವಿಲಾಟದ ನಗುವಿನಲ್ಲಿ ಬೆಳದಿಂಗಳಂತೆ ಬಳುಕುವ ನಗುವಿನ ಸುಂದರಿ ನನ್ನವಳು. ಮನಸ್ಸಿನಲ್ಲಿ ಮಗುವಿನಂತೆ ಕನಸಿನಲ್ಲಿ ಕವನದ ಪದಗಳಂತಿರುವ ಮಿಂಚುಳ್ಳಿ ಅವಳು, ಪ್ರೀತಿಯ ಪಟದಲ್ಲಿ ಮೋಡಗಳ ಮೇಲೆ ಹಾರುವ ಬಯಕೆಯಲ್ಲಿ ಕೈ ಹಿಡಿದು ನಡಿಸಿದ ಭುವನಸಿರಿಯವಳು. ವರ್ಷದಾರೆಯಲ್ಲಿ ಅಮೃತವ ಹೆಕ್ಕಿ ಹೃದಯಕೆ ಸಂಜೀವಿನಿ ದಾರೆಯೆರೆಯುವ ಕೆಂಪು ಕಸ್ತೂರಿ ಮನೆಯವಳು. ಅದೆಷ್ಟೋ ಬಣ್ಣಿಸಿದರೂ ಪದಗಳೇ ಮುಗಿಯದ ಸೌಂದರ್ಯ ಸಿರಿ ನನ್ನವಳು.

ಇದು ಪ್ರೀತಿಯ ರಸದಾರೆಯಲ್ಲಿ ಮನಸಾರೆ ನಡೆಯುವ ಹುಡುಗನ ಮೊದಲ ತೊದಲ ನುಡಿಗಳು. ಪ್ರೀತಿ ಅಂದ್ರೆನೆ ಹಾಗೆ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡುವೆಯೂ ಬೇಡ, ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಫರ್ಶದ ಸಿಂಚನ ಸಾಕು ಎನಿಸುತ್ತದೆ. ಬಿಟ್ಟಿರಲಾದ ತವಕ, ಏನು ಬೇಡವೆನ್ನುವ ಭಾವ, ಹಸಿವಿಲ್ಲದ ಅದೆಷ್ಟೋ ಘಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತದೆ.

ಒಂದೊಮ್ಮೆ ಏನೇ ನೋಡಿದ್ರೂ ಅವಳ ಜೊತೆ ಹಂಚಿಕೊಳ್ಳುವ ಆಸೆ, ಯಾರನ್ನೇ ಮಾತನಾಡಿಸಿದ್ರೂ ಅವಳ ಜೊತೆ ಹೋಲಿಕೆ ಮಾಡುವ ಮನಸ್ಸು, ಚಿಂತೆಯಲ್ಲೂ ಸಂಗಾತಿಯದ್ದೇ ಸದ್ದು, ಸಂತೋಷದಲ್ಲೂ ಅವಳದ್ದೇ ನೆನಪು, ಹುಚ್ಚುತನವೋ, ಅತಿಯಾದ ಹಚ್ಚಿಕೊಳ್ಳುವಿಕೆಯೋ ಗೊತ್ತಿಲ್ಲ, ನೀ ಇಲ್ಲದೇ ನಾನಿಲ್ಲ ಎನ್ನುವ ಭಾವನೆ ಆ ಪ್ರೀತಿಯಲ್ಲಿ ಸದಾ ಇರುತ್ತೆ. ಅಷ್ಟೊಂದು ಘಾಡ, ಅಷ್ಟೊಂದು ಅಗಾದವೇ ಇದು. ಸಾವನ್ನೂ ಲೆಕ್ಕಿಸದೇ ಪ್ರೇಮಿಗಳು ಪ್ರೀತಿಯಲ್ಲಿ ಮುಳುಗಿ ಮರೆಯಾಗಿ ಹೋಗಿದ್ದು ಉಂಟು. 

ಇದನ್ನೂ ಓದಿ-  ವಾಸ್ತು ಪ್ರಕಾರ, ಈ ವಸ್ತುಗಳನ್ನು ಎಂದಿಗೂ ನಿಮ್ಮ ಪ್ರೇಮಿಗಳಿಗೆ ನೀಡಲೇಬಾರದು

ಅದೆಂತಾ ಮಾಯೆಯೋ ಗೊತ್ತಿಲ್ಲ. ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. 

ಅವಳ ಜೊತೆಗೆ ಕಳೆಯುವ ಮಧುರ ಕ್ಷಣಗಳಂತೂ ಎಂದಿಗೂ ಬೇಗನೆ ಸವೆಯಂತೆ ಇರಬೇಕು ಅನಿಸುತ್ತೆ. ಕೈ ಹಿಡಿದಾಗ ಅವಳ ಮೊಗದಲ್ಲಿ ಮೂಡುವ ಮುಗುಳ್ನಗು ಸಾವಿನವರೆಗೂ ಹೀಗೆ ಇರಲಿ ಎಂದೆನಿಸುವುದು. ಪಕ್ಕದಲ್ಲಿರುವಾಗ ಮಾತು ಹೆಚ್ಚಾಗಿ ಇಲ್ಲದಿದ್ದರೂ ಮೌನವೇ ಎಲ್ಲದಕ್ಕೂ ಪ್ರಶ್ನೆ ಕೇಳಿ ಉತ್ತರವನ್ನೂ ಪಡೆದುಕೊಂಡಿರುತ್ತೆ. ಆಕಾಶದಲ್ಲಿನ ಮೋಡಗಳು ಕೂಡ ನಮ್ಮನ್ನ ನೋಡುತ್ತಿವೆ ಅನ್ನೋ ಭಯವೂ ಜೊತೆಗೆ ಇರುತ್ತೆ. ಆದರೂ ಅವಳು ಜೊತೆಯಲ್ಲೇ ಇರಬೇಕು ಅನ್ನೋ ಹಂಬಲಿಕೆ ಕ್ಷಣ ಕ್ಷಣವೂ ಮನಸ್ಸಲ್ಲಿ ಕುಣಿದಾಡುವಂತಿರುತ್ತೆ. 

ಇದನ್ನೂ ಓದಿ- ವ್ಯಾಲೆಂಟೈನ್ಸ್ ಡೇ: ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತೆ?

ಆದ್ರೆ ಪ್ರೀತಿಯ ಸಿಂಚನ ಅನ್ನೋದು ಕಥೆ ಕಾದಂಬರಿಗಳ ಮುಂದುವರೆದ ಭಾಗ ಎನಿಸಬಾರದು, ಯಾರನ್ನೋ ನೋಡಿ ಹೀಗೆ ನಾನು ಇರಬೇಕು ಅಂತ ಪ್ರೀತಿ ಮಾಡಬಾರದು, ಜೀವನದ ಸಂಚಾರದಲ್ಲಿ ಸರ್ವವೂ ನೀನೇ ಎಂದಿಗೂ ಜೊತೆಯಾಗಿ ಹೆಜ್ಜೆ ಹಾಕಿ ಬರುವ ಆ ಸಂಗಾತಿಗೆ ಮನಸ್ಸು ಕೊಟ್ಟು ಕೊನೆಯೂಸಿರು ಇರುವರೆಗೂ ಸಂತೋಷದಿಂದ ಇರಬೇಕು ಅಷ್ಟೇ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News