ಬೆಲ್ಲ ಮತ್ತು ಕಡಲೆ ಬೀಜ : ಸದೃಢ ದೇಹವನ್ನು ಹೊಂದಲು ಯುವಕರು ಸಾಕಷ್ಟು ಸಾಹಸಗಳನ್ನು ಮಾಡುತ್ತಾರೆ. ಜಿಮ್ ಹೋಗುವುದು, ಮೆಡಿಸಿನ್ ತೆಗೆದುಕೊಳ್ಳುವುದು, ಹೀಗೆ ಇನ್ನೂ ಹಲವಾರು ರೀತಿಯ ಟ್ರಿಕ್ಸ್ ನ್ನು ಬಳಸುತ್ತಾರೆ. ಆದರೆ ಅದೆಲ್ಲಕ್ಕಿಂತ ಮೊದಲು ನಮ್ಮ ಸ್ನಾಯುಗಳು ಬಲಯುತವಾಗಿರಬೇಕು. ಅಂದಾಗ ಮಾತ್ರ ನಮ್ಮ ದೇಹ ಸದೃಢವಾಗಿರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಜಿಮ್ ನಂತಹ ಟ್ರಿಕ್ ಗಳನ್ನು ದೇಹಕ್ಕೆ ತಡೆಯುವ ಸಾಮರ್ಥ್ಯವಿರುವುದಿಲ್ಲ ಇದರಿಂದಾಗಿ ಸ್ನಾಯು ಊತ ಹಾಗೂ ಇನ್ನೀತರ ಫಿಜಿಕಲ್ ತೊಂದರೆಗಳು ಉಂಟಾಗಬಹುದು. ಬೆಲ್ಲ ಮತ್ತು ಕಡಲೆಬೀಜವನ್ನು ಬೆಳಗಿನ ಜಾವ ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದುದು.
ಹಿಂದಿನ ಕಾಲದ ಜನರು ಇಂದಿಗೂ 100 ವರ್ಷ ಬದುಕಿರುವ ಉದಾಹರಣೆಗಳನ್ನು ನಾವು ಕೇಳಿದ್ದೇವೆ ಅದಕ್ಕೆ ಕಾರಣ ಅವರು ಸೇವಿಸಿರುವ ಉಪಹಾರ. ಅವರು ಹೊಂದಿರುವ ಸದೃಢ ದೇಹ ಬುದ್ದಿ ಶಕ್ತಿ, ಎಲ್ಲವೂ ಆಶ್ಚರ್ಯವಾದರೂ ಸತ್ಯ ಅವರ ಜೀವನದ ಶೈಲಿಗಳೇ ಹಾಗಿದ್ದವು. ಅದರಲ್ಲಿ ಕಾಲು ಭಾಗವನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಬೇರೆ ಯಾವ ಮಾತ್ರೆ ಹಾಗೂ ಆರ್ಟಿಫಿಷಿಯಲ್ ಜೀವನ ಶೈಲಿಗೆ ಹೋದಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ.
ಇದನ್ನೂ ಓದಿ - ಈ ಸಸ್ಯಾಹಾರಗಳಲ್ಲೂ ಸಮೃದ್ಧವಾಗಿದೆ ವಿಟಮಿನ್ ಬಿ -12
ಬೆಲ್ಲ ಹಾಗೂ ಕಡಲೇ ಬೀಜ ಸೇವನೆಯಿಂದ ಆಗುವ ಪ್ರಯೋಜನಗಳು ಇಲ್ಲಿವೆ ನೋಡಿ :
* ಬೆಲ್ಲವು ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ.
* ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಕಾರಿಯಾಗುತ್ತದೆ..
* ಜೀರ್ಣಾಂಗದ ವ್ಯವಸ್ಥೆಯನ್ನು ಸರಾಗವಾಗಿಸಲು ಸಹಕಾಯಾಗುತ್ತದೆ.
* ಮಧುಮೇಹ ಇರುವವರಿಗೆ ಬೆಲ್ಲ ತುಂಬಾ ಪ್ರಯೋಜನಕಾರಿ.
* ಕಡಲೇ ಬೀಜ ಮೂಳೆಗಳು ಹಗೂ ಹಲ್ಲುಗಳು ಸದೃಢವಾಗಿರುವಂತೆ ಮಾಡುತ್ತದೆ.
* ಬೆಲ್ಲ ದರ್ವಾಸನೆ ಹಾಗೂ ಹಲ್ಲಿನ ಕ್ಷಯವನ್ನು ದೂರಮಾಡುತ್ತದೆ.
* ಮೊಡವೆ ಮುಂತಾದ ಸಮಸ್ಯೆಗಳನ್ನು ಕ್ರಮೇಣ ಕಡಿಮೆ ಮಡಬಹುದು.
* ಬೆಲ್ಲ ಮತ್ತು ಕಡಲೇ ಬೀಜ ಎರಡು ಉತ್ತಮ ಆರೋಗ್ಯಕರ ಪದಾರ್ಥಗಳಾಗಿದ್ದು, ದೇಹಕ್ಕೆ ಉತ್ತಮವಾದ ಪ್ರಯೋಜನವನ್ನು ಮಾಡುತ್ತದೆ.
ಇದನ್ನೂ ಓದಿ - Health Tips: ಈ ಆರೋಗ್ಯ ಸಮಸ್ಯೆ ಇದ್ದವರ ಮೇಲೆ ಬೀಟ್ರೂಟ್ ನೆರಳು ಸಹ ಬೀಳಬಾರದು: ಎಚ್ಚರ!!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.