SSC CGL Tier 1 Result : ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಟೈರ್ 1 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
SSC CGL ನ ಶ್ರೇಣಿ 1 ರ ಪರೀಕ್ಷೆಯನ್ನು ಡಿಸೆಂಬರ್ 1 ರಿಂದ ಡಿಸೆಂಬರ್ 13, 2022 ರವರೆಗೆ ನಡೆಸಲಾಗಿತ್ತು. ಪರೀಕ್ಷೆಯನ್ನು CBT ವಿಧಾನದಲ್ಲಿ ನಡೆಸಲಾಗಿತ್ತು. ಈಗ ಆಯೋಗವು ಬಿಡುಗಡೆ ಮಾಡಿದ ಶ್ರೇಣಿ 1 ಫಲಿತಾಂಶದ ಅಂಕಗಳ ಆಧಾರದ ಮೇಲೆ, ಅಭ್ಯರ್ಥಿಗಳನ್ನು ಶ್ರೇಣಿ 2 ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಶ್ರೇಣಿ 1 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು SSC CGL ಶ್ರೇಣಿ 2 ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ : Video : ಸಂಸತ್ತಿನಲ್ಲಿ ಅವಾಚ್ಯ ಶಬ್ದ ಬಳಿಸಿ ಟೀಕೆಗೆ ಗುರಿಯಾದ ಟಿಎಂಸಿ ಸಂಸದೆ!
Direct Link: SSC CGL 2022 Tier 1 Exam Result
SSC CGL 2022 ಶ್ರೇಣಿ 1 ಪರೀಕ್ಷೆಯ ಫಲಿತಾಂಶವನ್ನು ಈ ಹಂತಗಳ ಮೂಲಕ ಚೆಕ್ ಮಾಡಿಕೊಳ್ಳಿ :
1. ಅಭ್ಯರ್ಥಿಗಳು ಮೊದಲು ಈ ಅಧಿಕೃತ ವೆಬ್ಸೈಟ್ ssc.nic.in ಗೆ ಹೋಗಿ.
2. ಇದರ ನಂತರ ಮುಖಪುಟದಲ್ಲಿ ನೀಡಲಾದ Resultsವಿಭಾಗದ ಮೇಲೆ ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ, ಇಲ್ಲಿ ನೀವು SSC CGL Tier I Result ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಹೀಗೆ ಮಾಡುವುದರಿಂದ PDF ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
5. ಈ PDF ನಲ್ಲಿ ನಿಮ್ಮ ಫಲಿತಾಂಶವನ್ನು ನೀವು ಪರಿಶೀಲಿಸಬಹುದು.
ಇದನ್ನೂ ಓದಿ : Cow hug day : ಕೇಳಿ ಪ್ರೇಮಿಗಳೇ.. ʼವ್ಯಾಲೆಂಟೈನ್ಸ್ ಡೇʼ ಬಿಟ್ಟು ʼಹಸು ಅಪ್ಪುಗೆ ದಿನʼ ಆಚರಿಸಿ..!
SSC CGL Tier ಶ್ರೇಣಿ 2ರ ಪರೀಕ್ಷೆ ಮಾರ್ಚ್ 2 ರಿಂದ ಮಾರ್ಚ್ 7, 2023 ರವರೆಗೆ ನಡೆಯಲಿದೆ. ಶ್ರೇಣಿ 2ರ ಪರೀಕ್ಷೆಯ ಪ್ರವೇಶ ಕಾರ್ಡ್ಗಳನ್ನು ಆಯೋಗವು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಿಂದ ಇದನ್ನೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.