‘ನನ್ನ ಮುಖ ಏನ್ ತೋರಿಸೋದು ಅಲ್ಲಿ ತೋರಿಸಿ’ ಮೈದಾನದಲ್ಲಿಯೇ ಕೋಪಗೊಂಡ Rohit Sharma ಬೈದಿದ್ದು ಯಾರಿಗೆ?

Rohit Sharma frustrated with cameraman: ರವಿಚಂದ್ರನ್ ಅಶ್ವಿನ್ ಹ್ಯಾಂಡ್ಸ್‌ಕಾಂಬ್ ಎಲ್ಬಿಡಬ್ಲ್ಯೂಗೆ ಕ್ಯಾಚ್ ನೀಡಿದಾಗ ಈ ಘಟನೆ ಸಂಭವಿಸಿದೆ. ಆದರೆ ಅಂಪೈರ್ ಭಾರತದ ಪರವಾಗಿ ನಿರ್ಧಾರವನ್ನು ನೀಡಲಿಲ್ಲ. ಆತ್ಮವಿಶ್ವಾಸ ತೋರಿದ ಅಶ್ವಿನ್, ರೋಹಿತ್‌ಗೆ ಡಿಆರ್‌ಎಸ್ ಪರಿಶೀಲನೆ ನಡೆಸುವಂತೆ ಕೇಳಿಕೊಂಡರು. ವಿಮರ್ಶೆ ಪ್ರಕ್ರಿಯೆಯಲ್ಲಿ, ಕ್ಯಾಮರಾಮನ್ ರೋಹಿತ್ ಮತ್ತು ಭಾರತೀಯ ತಂಡದ ಮೇಲೆ ಕ್ಯಾಮಾರಾ ಫೋಕಸ್ ಮಾಡಿದರು.

Written by - Bhavishya Shetty | Last Updated : Feb 11, 2023, 02:53 PM IST
    • ಕ್ಯಾಮರಾಮನ್ ಮೇಲೆ ಕೋಪಿಸಿಕೊಂಡ ನಾಯಕ ರೋಹಿತ್ ಶರ್ಮಾ
    • ವಿಮರ್ಶೆಯನ್ನು ತೋರಿಸುವ ಬದಲು ಕ್ಯಾಮೆರಾ ರೋಹಿತ್ ಮತ್ತು ಭಾರತ ತಂಡದ ಮೇಲೆ ಕೇಂದ್ರೀಕರಿಸಿತ್ತು
    • ರವಿಚಂದ್ರನ್ ಅಶ್ವಿನ್ ಹ್ಯಾಂಡ್ಸ್‌ಕಾಂಬ್ ಎಲ್ಬಿಡಬ್ಲ್ಯೂಗೆ ಕ್ಯಾಚ್ ನೀಡಿದಾಗ ಈ ಘಟನೆ ಸಂಭವಿಸಿದೆ
‘ನನ್ನ ಮುಖ ಏನ್ ತೋರಿಸೋದು ಅಲ್ಲಿ ತೋರಿಸಿ’ ಮೈದಾನದಲ್ಲಿಯೇ ಕೋಪಗೊಂಡ Rohit Sharma ಬೈದಿದ್ದು ಯಾರಿಗೆ? title=
Rohit Sharma

Rohit Sharma frustrated with cameraman: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯದ ಡಿಆರ್‌ಎಸ್ ಪರಿಶೀಲನೆಯ ಸಮಯದಲ್ಲಿ ಕ್ಯಾಮರಾಮನ್ ಅವರ ಮೇಲೆ ಕೇಂದ್ರೀಕರಿಸಿದ್ದಕ್ಕಾಗಿ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಅವರನ್ನು ಬೈದಿದ್ದು, ಈ ವಿಡಿಯೋ ವೈರಲ್ ಆಗಿದೆ. ಪೀಟರ್ ಹ್ಯಾಂಡ್ಸ್‌ಕಾಂಬ್ ಅವರ ವಿಕೆಟ್‌ಗಾಗಿ ನಡೆಯುತ್ತಿರುವ ವಿಮರ್ಶೆಯನ್ನು ತೋರಿಸುವ ಬದಲು ಕ್ಯಾಮೆರಾ ರೋಹಿತ್ ಮತ್ತು ಭಾರತ ತಂಡದ ಮೇಲೆ ಕೇಂದ್ರೀಕರಿಸಿತ್ತು.

ಇದನ್ನೂ ಓದಿ: IND vs AUS: ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನೇ ಬ್ರೇಕ್‌ ಮಾಡಿದ್ರು ಶಮಿ.!

ರವಿಚಂದ್ರನ್ ಅಶ್ವಿನ್ ಹ್ಯಾಂಡ್ಸ್‌ಕಾಂಬ್ ಎಲ್ಬಿಡಬ್ಲ್ಯೂಗೆ ಕ್ಯಾಚ್ ನೀಡಿದಾಗ ಈ ಘಟನೆ ಸಂಭವಿಸಿದೆ. ಆದರೆ ಅಂಪೈರ್ ಭಾರತದ ಪರವಾಗಿ ನಿರ್ಧಾರವನ್ನು ನೀಡಲಿಲ್ಲ. ಆತ್ಮವಿಶ್ವಾಸ ತೋರಿದ ಅಶ್ವಿನ್, ರೋಹಿತ್‌ಗೆ ಡಿಆರ್‌ಎಸ್ ಪರಿಶೀಲನೆ ನಡೆಸುವಂತೆ ಕೇಳಿಕೊಂಡರು. ವಿಮರ್ಶೆ ಪ್ರಕ್ರಿಯೆಯಲ್ಲಿ, ಕ್ಯಾಮರಾಮನ್ ರೋಹಿತ್ ಮತ್ತು ಭಾರತೀಯ ತಂಡದ ಮೇಲೆ ಕ್ಯಾಮಾರಾ ಫೋಕಸ್ ಮಾಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್, “ನನ್ನ ಮುಖ ಏನ್ ತೋರಿಸ್ತೀಯಾ, ಅಲ್ಲಿ ತೋರಿಸು” ಎಂದು ಗುಡುಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು?

ಸದ್ಯ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಗೆಲುವು ಸಾಧಿಸಿದೆ. ಆತಿಥೇಯರು ಮೂರು ಸ್ವರೂಪಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸುತ್ತಿರುವುದು ಸಂತಸದ ಸಂಗತಿ. ಇನ್ನು ನಾಗ್ಪುರ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಒಟ್ಟು 400 ರನ್‌ಕಲೆ ಹಾಕಿತ್ತು. ನಾಯಕ ರೋಹಿತ್ ಶರ್ಮಾ ಶತಕದ ನಂತರ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಜೊತೆಗೂಡಿ ಭಾರತವನ್ನು ಮುನ್ನಡೆಸಿದರು, ಬೌಲಿಂಗ್ ನಲ್ಲೂ ಸಹ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅಬ್ಬರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News