Maruti Cars : ಮಾರುತಿ ತನ್ನ ಕಾರುಗಳ ಪೋರ್ಟ್ಫೋಲಿಯೊವನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಿರುತ್ತದೆ. ಕೆಲವು ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದರೆ, ಇನ್ನು ಕೆಲವು ಕಾರುಗಳು ಅನೇಕ ವರ್ಷಗಳಿಂದ ಗ್ರಾಹಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿವೆ. ಹ್ಯಾಚ್‌ಬ್ಯಾಕ್‌ಗಳು ನಿಮ್ಮ ಕನಸಿನ ಕಾರನ್ನು ಕೈಗೆಟುಕುವ ಬೆಲೆಯಲ್ಲಿ ಪೂರೈಸಿದರೆ, ಎಸ್‌ಯುವಿಗಳು ಕಠಿಣ ರಸ್ತೆಗಳಲ್ಲಿನ ಓಡಾಟಕ್ಕೆ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ. ಆದರೆ ಐಷಾರಾಮಿ ಅನುಭವವನ್ನು ಬಯಸುವ ಜನರು ಸಾಮಾನ್ಯವಾಗಿ ಸೆಡನ್ ಕಾರುಗಳ ಮೊರೆ ಹೋಗುತ್ತಾರೆ. ಮಾರುತಿ ಸುಜುಕಿ ಡಿಜೈರ್ ಸೆಡನ್ ದೇಶದಲ್ಲೇ ಹೆಚ್ಚು ಮಾರಾಟವಾಗುವ ಸೆಡನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರು ನಿಮಗೆ ಸಿಎನ್‌ಜಿಯೊಂದಿಗೆ 31 ಕಿಮೀ ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಡಿಜೈರ್ ಬೆಲೆ :
ಮಾರುತಿ ಸುಜುಕಿ ಡಿಜೈರ್ LXi, VXi, ZXi ಮತ್ತು ZXi+ ಹೀಗೆ ನಾಲ್ಕು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಇದರ ಬೆಲೆ 6.43 ಲಕ್ಷ ರೂ.ಗಳಿಂದ 9.31 ಲಕ್ಷ ರೂ.ವರೆಗೆ ಇದೆ. ಪ್ರತಿ ರೂಪಾಂತರದ ಬೆಲೆ ಎಷ್ಟು ನೋಡೋಣ.
ಇದನ್ನೂ ಓದಿ : 32 ಕಿಮೀ ಮೈಲೇಜ್ ಕೊಡುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆ: Petrol-CNG ಬಳಕೆಯ ಈ ಕಾರಿನ ಬೆಲೆ ಬಲು ಅಗ್ಗ!
LXi ಪೆಟ್ರೋಲ್ ಮ್ಯಾನ್ಯುವಲ್ - ₹6.43 ಲಕ್ಷ
VXi ಪೆಟ್ರೋಲ್ ಮ್ಯಾನ್ಯುವಲ್ - ₹7.36 ಲಕ್ಷ
VXi ಪೆಟ್ರೋಲ್ ಆಟೋಮ್ಯಾಟಿಕ್ (AMT) - ₹7.91 ಲಕ್ಷ
ZXi ಪೆಟ್ರೋಲ್ ಮ್ಯಾನ್ಯುವಲ್ - ₹8.04 ಲಕ್ಷ
VXi CNG ಮ್ಯಾನ್ಯುವಲ್ - ₹8.31 ಲಕ್ಷ
ZXi ಪೆಟ್ರೋಲ್ ಆಟೋಮ್ಯಾಟಿಕ್ (AMT) - ₹8.59 ಲಕ್ಷ
ZXi ಪೆಟ್ರೋಲ್ ಮ್ಯಾನ್ಯುವಲ್ - ₹8.76 ಲಕ್ಷ
ZXi CNG ಮ್ಯಾನ್ಯುವಲ್ - ₹8.99 ಲಕ್ಷ
ZXi ಪ್ಲಸ್ ಪೆಟ್ರೋಲ್ ಆಟೋಮ್ಯಾಟಿಕ್ (AMT)- ₹9.31 ಲಕ್ಷ
ಇಂಜಿನ್ ಮತ್ತು ವೈಶಿಷ್ಟ್ಯಗಳು :
ಮಾರುತಿ ಡಿಜೈರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿದ್ದು 89bhp ಮತ್ತು 113Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಐದು-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಎಂಜಿನ್ ಅನ್ನು ಜೋಡಿಸಲಾಗಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಕೀಲೆಸ್ ಎಂಟ್ರಿ, ರಿಯರ್ ಎಸಿ ವೆಂಟ್‌ಗಳು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಮಾರುತಿ ಸುಜುಕಿ ಡಿಜೈರ್ ಹ್ಯುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಇದನ್ನೂ ಓದಿ : ಗ್ರಾಹಕರಿಗೆ ಬಿಗ್ ಶಾಕ್! ಅಗ್ಗದ ಎಲೆಕ್ಟ್ರಿಕ್ ಕಾರು ಬೆಲೆಯನ್ನು ಒಮ್ಮೆಲೇ ಏರಿಸಿದ ಟಾಟಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.