How to Contact Prime Minister: ಸಾಮಾನ್ಯ ಜನರು ಪ್ರಧಾನಿಯನ್ನು ಹೇಗೆ ಸಂಪರ್ಕಿಸುವುದು? ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

How to Contact Prime Minister: ನಿಮ್ಮ ತಲೆಯಲ್ಲೂ ಪ್ರಧಾನಿಗಳಿಗೆ ಹೇಗೆ ಪತ್ರ ಬರೆಯುವುದು ಎಂಬ ಪ್ರಶ್ನೆ ಮೂಡಿರಬೇಕಲ್ಲವೇ? ಇದಕ್ಕೂ ಮೊದಲು ಪ್ರಧಾನಿಗೆ ಯಾರು, ಯಾವ ವಿಚಾರಕ್ಕೆ ಪತ್ರ ಬರೆಯಬಹುದು? ಅಲ್ಲದೇ,  ಪತ್ರ ಬರೆಯುವ ವಿಧಾನ ಏನು? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. 

Written by - Chetana Devarmani | Last Updated : Feb 18, 2023, 01:52 PM IST
  • ಸಾಮಾನ್ಯ ಜನರು ಪ್ರಧಾನಿಯನ್ನು ಹೇಗೆ ಸಂಪರ್ಕಿಸುವುದು?
  • ಯಾರು, ಯಾವ ವಿಚಾರಕ್ಕೆ ಪತ್ರ ಬರೆಯಬಹುದು?
  • ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ
How to Contact Prime Minister: ಸಾಮಾನ್ಯ ಜನರು ಪ್ರಧಾನಿಯನ್ನು ಹೇಗೆ ಸಂಪರ್ಕಿಸುವುದು? ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ   title=
Prime Minister

How to Contact Prime Minister: ನೀವು ಆಗಾಗ ಪ್ರಧಾನಿ ಅವರಿಗೆ ಯಾರಾದರೂ ಸಾಮಾನ್ಯ ನಾಗರಿಕರು ಪತ್ರ ಬರೆದಿದ್ದಾರೆ ಎಂಬ ಸುದ್ದಿಗಳನ್ನು ಕೇಳುತ್ತಿರುತ್ತೀರಿ. ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬನಿಗೆ ಪತ್ರ ಬರೆದಿದ್ದರು. ಈ ಹಿಂದೆ ಮೋದಿಯವರ ತಾಯಿ ಹೀರಾಬೆನ್ ಅಗಲಿಕೆ ಬೆನ್ನಲ್ಲೇ, ಬೆಂಗಳೂರಿನ ಇದೇ ಬಾಲಕ ಪ್ರಧಾನಿಯರಿಗೆ ಪತ್ರ ಕಳುಹಿಸಿ ಸಾಂತ್ವನ ಹೇಳಿದ್ದ. ಇದಕ್ಕೆ ಪ್ರತಿಯಾಗಿ ಮೋದಿಯವರು ಆತನಿಗೆ ಧನ್ಯವಾದ ಅರ್ಪಿಸಿ ಪತ್ರ ಕಳುಹಿಸಿದ್ದರು. ಈಗ ನಿಮ್ಮ ತಲೆಯಲ್ಲೂ ಪ್ರಧಾನಿಗಳಿಗೆ ಹೇಗೆ ಪತ್ರ ಬರೆಯುವುದು ಎಂಬ ಪ್ರಶ್ನೆ ಮೂಡಿರಬೇಕಲ್ಲವೇ? ಇದಕ್ಕೂ ಮೊದಲು ಪ್ರಧಾನಿಗೆ ಯಾರು, ಯಾವ ವಿಚಾರಕ್ಕೆ ಪತ್ರ ಬರೆಯಬಹುದು? ಅಲ್ಲದೇ,  ಪತ್ರ ಬರೆಯುವ ವಿಧಾನ ಏನು? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. 

ಇಮೇಲ್, ಪತ್ರ, ಫೋನ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ತಮ್ಮನ್ನು ಸಂಪರ್ಕಿಸಲು ಅನೇಕ ಮಾರ್ಗಗಳನ್ನು ಪ್ರಧಾನಿ ಮೋದಿ ಸಾರ್ವಜನಿಕರಿಗೆ ನೀಡಿದಾರೆ. ತಮ್ಮದೇ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಸಹ ಪ್ರಧಾನಿ ಮೋದಿ ಹೊಂದಿದ್ದಾರೆ. ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಯಾರಾದರೂ ಪತ್ರ ಕಳುಹಿಸಬಹುದು. ನೀವೂ ನಿಮ್ಮ ಪತ್ರವನ್ನು Prime Minister, south black, New Delhi -110011 ಈ ವಿಳಾಸಕ್ಕೆ ಕಳಿಸಬಹುದು. Mr. Prime Minister ಅಥವಾ "ಗೌರವಾನ್ವಿತ ನರೇಂದ್ರ ಮೋದಿ" ಅಂತ ಗೌರವ ಪೂರ್ವಕವಾಗಿ ಬರೆಯಬೇಕು. ಪತ್ರದ ವಿಳಾಸ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆದಿರಬೇಕು. 

ಇದನ್ನೂ ಓದಿ : ಕಬ್ಜ’ ಸಿನಿಮಾ ಸೃಷ್ಟಿಕರ್ತ ಆರ್.ಚಂದ್ರು ಹೀಯಾಳಿಸಿದವರು ಇಂದು ಸಲಾಂ ಹೊಡೆಯಲು ಕ್ಯೂ ನಿಂತಿದ್ದಾರೆ!

ಪ್ರಧಾನ ಮಂತ್ರಿ ಅವರಿಗೆ ನೇರವಾಗಿ ಇಮೇಲ್ ಕಳುಹಿಸುವ ವ್ಯವಸ್ಥೆ ಕೂಡ ಈಗ ಭಾರತದಲ್ಲಿ ಲಭ್ಯವಿದೆ. https://www.pmindia.gov.in/ ಗೆ ಭೇಟಿ ನೀಡುವ ಮೂಲಕ ನೀವು ಪ್ರಧಾನಿ ಅವರಿಗೆ ಮೇಲ್‌ ಮೂಲಕ ನಿಮ್ಮ ಸಂದೇಶ, ಪ್ರಶ್ನೆ, ಅಭಿಪ್ರಾಯಗಳನ್ನು ಕಳುಹಿಸಬಹುದು. ಈ ವೆಬ್‌ ಪೇಜ್‌ ತೆರೆದಾಗ ನೀವು ಕೆಳಗೆ ಸ್ಕ್ರೋಲ್‌ ಮಾಡಿದರೆ, "ಪ್ರಧಾನ ಮಂತ್ರಿಯೊಂದಿಗೆ ಸಂವಹನ" ಶೀರ್ಷಿಕೆಯ ಅಡಿಯಲ್ಲಿ "ಪ್ರಧಾನ ಮಂತ್ರಿಗೆ ಬರೆಯಿರಿ" ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲೊಂದು ಫಾರ್ಮ್‌ ಓಪನ್‌ ಆಗುತ್ತದೆ. ಈ ಆನ್‌ಲೈನ್ ಫಾರ್ಮ್ ಅನ್ನು ಫಿಲ್‌ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಭದ್ರತಾ ಅಕ್ಷರಗಳನ್ನು ಅಲ್ಲಿ ನಮೂದಿಸಬೇಕು. 

011-230114547 ಡಯಲ್‌ ಮಾಡುವ ಮೂಲಕ ನೀವು ಪ್ರಧಾನಿ ಕಚೇರಿಗೆ ನೇರವಾಗಿ ಫೋನ್ ಕಾಲ್ ಮಾಡಬಹುದು. ಅಲ್ಲದೇ, ನೀವು 011-23019545 ಅಥವಾ 011-23016857 ಗೆ ನಿಮ್ಮ ಫ್ಯಾಕ್ಸ್  ಕೂಡ ಕಳುಹಿಸಬಹುದು. ನಿಮ್ಮ ಕಾಲ್‌ ಕನೆಕ್ಟ್‌ ಆದ ಬಳಿಕ ಪ್ರಧಾನಿ ಕಚೇರಿಯ ಸದಸ್ಯರು ನಿಮ್ಮೊಂದಿಗೆ ಮಾತನಾಡುತ್ತಾರೆ. ಇವುಗಳನ್ನು ಬಿಟ್ಟು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಪ್ರಧಾನಮಂತ್ರಿಗಳ ಅಕೌಂಟ್‌ ಇವೆ. ಅಲ್ಲಿಯೂ ನೀವು ಸಂಪರ್ಕಿಸಬಹುದು. ಆದರೆ ಅವರನ್ನು ಸಂಪರ್ಕಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. 

ಇದನ್ನೂ ಓದಿ : ಚುನಾವಣಾ ಆಯೋಗದಿಂದ ಉದ್ಧವ್ ಠಾಕ್ರೆಗೆ ಹೊಡೆತ: ಶಿಂಧೆ ಪಾಲಾದ ಶಿವಸೇನೆಯ ‘ಬಿಲ್ಲು-ಬಾಣ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News