ನಿರ್ದೇಶಕ ಪವನ್ ಒಡೆಯರ್ ಜೊತೆ ನಟಿ ಅಪೇಕ್ಷಾ ಪುರೋಹಿತ್ ನಿಶ್ಚಿತಾರ್ಥ

          

Last Updated : Nov 29, 2017, 05:00 PM IST
ನಿರ್ದೇಶಕ ಪವನ್ ಒಡೆಯರ್ ಜೊತೆ ನಟಿ ಅಪೇಕ್ಷಾ ಪುರೋಹಿತ್ ನಿಶ್ಚಿತಾರ್ಥ title=

ಚಂದನವನದಲ್ಲಿ ಇತ್ತೀಚಿಗೆ ಮದುವೆಯ ಪರ್ವ ಆರಂಭವಾಗಿದೆ ಎಂದರೆ ಹುಸಿಯಾಗಲಾರದು. ಹೌದು, ಧೃವ ಸರ್ಜಾ- ಮೇಘನಾ, ರಕ್ಷಿತ್ ಶೆಟ್ಟಿ-ರಶ್ಮಿಕ ಮಂದಣ್ಣ ಹೀಗೆ ಹಲವಾರು ತಾರೆಗಳು ಮದುವೆಯ ತಯಾರಿಯಲ್ಲಿದ್ದಾರೆ. ಅಂತಹವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ ಗೂಗ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹಾಗೂ ಕಾಫಿತೋಟ ಚಿತ್ರದ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವರಿಸಲಿದ್ದಾರೆ. 

ಹೌದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, 
ಡಿ. 7ರಂದು ಅವರ ನಿಶ್ಚಿತಾರ್ಥ ನಡೆಯಲಿದೆ. 2018ರ ಆಗಸ್ಟ್ ನಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ ಎಂದು ತಿಳುದುಬಂದಿದೆ.

Trending News