ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3673 ಪೌರಕಾರ್ಮಿಕರ ನೇರ ನೇಮಕಾತಿ ವಿಚಾರದಲ್ಲಿ ಅವ್ಯವಹಾರ ಆಗ್ತಿದೆ ಎಂಬ ಆರೋಪ ಸ್ವತಃ ಪೌರ ಕಾರ್ಮಿಕರೇ ಆರೋಪ ಮಾಡಿದ್ದಾರೆ. ಒಂದೇ ಕುಟುಂಬದಲ್ಲಿ ಎಂಟತ್ತು ಜನರಿಗೆ ಪೌರಕಾರ್ಮಿಕ ಹುದ್ದೆಯನ್ನ ನೀಡಿದ್ದು, ಇದ್ದರಲ್ಲಿ ಲಕ್ಷಾಂತರ ರೂ ಭ್ರಷ್ಟಾಚಾರ ವೆಸಗಲಾಗಿದೆ ಎಂದು ದೂರಲಾಗಿದೆ. ಹೀಗಾಗಿ ಪೌರಕಾರ್ಮಿಕರ ಆಯ್ಕೆ ಪ್ರಕ್ರಿಯೆಯನ್ನ ಸೂಕ್ತಬದ್ಧವಾಗಿ ನಡೆಸಲಿ ಎಂದು ಪೌರಕಾರ್ಮಿಕರು ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ.
ನೇಮಕಾತಿಗೆ ಆಕ್ಷೇಪಣೆ ಸಲ್ಲಿಸಬಹುದು : ಪೌರಕಾರ್ಮಿಕರ ನೇಮಕಾತಿ ಸಂಬಂಧ ಅರ್ಜಿಯನ್ನು ಸ್ವೀಕರಿಸಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ದಿನಾಂಕ: 21.02.2023 ರಂದು ಹೊರಡಿಸಿದ್ದು, ದಿನಾಂಕ: 02.03.2023ರ ವರೆಗೆ ಆಕ್ಷೇಪಣೆ ಸಲ್ಲಿಸಿಲು ಬಿಬಿಎಂಪಿ ಆಹ್ವಾನಿಸಲಾಗಿದೆ. ಈ ವೇಳೆ ಪೌರಕಾರ್ಮಿಕ ಸಂಘಟನೆಗಳು ಮತ್ತು ಪೌರಕಾರ್ಮಿಕರು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದು, ಈ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ, ದಾಖಲಾತಿಗಳ ನೈಜತೆಯನ್ನು ಪರಿಶೀಲಿಸಿ ನಂತರ ಮುಂದಿನ ಅಗತ್ಯ ಕ್ರಮವಹಿಸಿ ಅಂತಿಮ ಪಟ್ಟಿಯನ್ನು ಹೊರಡಿಸಲಾಗುವುದು ಎಂದು ಆಯ್ಕೆ ಮಾಡುವ ಅಧಿಕಾರಿ ವರ್ಗ ಮಾಹಿತಿ ನೀಡಿದೆ.
ಇದನ್ನೂಓದಿ: Crime News: ಪ್ರೇಮ ವೈಫಲ್ಯ ಹಿನ್ನೆಲೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಯತ್ನ!
ಅರ್ಜಿ ಸಲ್ಲಿಸಿರುವ ಯಾವುದೇ ಅರ್ಹ ಪೌರ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಹಾಗು ಯಾವುದೇ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆಗೆ ಅಡ್ಡಪರಿಣಾಮ ಬೀರಿಲ್ಲ ಎಂದು ಬಿಬಿಎಂಪಿ ಆಡಳಿತ ಹಾಗೂ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು ಹಾಗೂ ನೇಮಕಾತಿ ಮತ್ತು ವಿಚಾರಣೆ ಪ್ರಕ್ರಿಯೆಯ ಸದಸ್ಯ ಕಾರ್ಯದರ್ಶಿಯಾದ ಡಾ. ಹರೀಶ್ ಕುಮಾರ್ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.