Bangalore: ಆಸ್ತಿಗಾಗಿ ತಂದೆ ಕೊಲೆಗೆ ಸಪಾರಿ ನೀಡಿದ್ದ ಮಗ ಸೇರಿ ಮೂವರ ಬಂಧನ

ಬೆಂಗಳೂರು: ತಂದೆ ಹತ್ಯೆಗೆ 1 ಕೋಟಿ ರೂಪಾಯಿಸುಪಾರಿ ನೀಡಿದ್ದ ಮಗ ಮೂವರು ಆರೋಪಿಗಳನ್ನ ಮಾರತ್ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಪಾರಿ ನೀಡಿದ ಪುತ್ರ ಮಣಿಕಂಠ, ಸುಪಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನ ಬಂಧಿಸಲಾಗಿದೆ.

Written by - VISHWANATH HARIHARA | Last Updated : Feb 27, 2023, 04:02 PM IST
  • ಆಸ್ತಿಗಾಗಿ ತಂದೆ ಕೊಲೆಗೆ ಸಪಾರಿ ನೀಡಿದ್ದ ಮಗ
  • 70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಪಾರಿ
  • ಪಣತ್ತೂರಿನ ಕಾವೇರಪ್ಪ ಲೇಔಟ್ ನಲ್ಲಿ ಘಟನೆ
Bangalore: ಆಸ್ತಿಗಾಗಿ ತಂದೆ ಕೊಲೆಗೆ ಸಪಾರಿ ನೀಡಿದ್ದ ಮಗ ಸೇರಿ ಮೂವರ ಬಂಧನ title=

ಬೆಂಗಳೂರು: ತಂದೆ ಹತ್ಯೆಗೆ 1 ಕೋಟಿ ರೂಪಾಯಿಸುಪಾರಿ ನೀಡಿದ್ದ ಮಗ ಮೂವರು ಆರೋಪಿಗಳನ್ನ ಮಾರತ್ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಪಾರಿ ನೀಡಿದ ಪುತ್ರ ಮಣಿಕಂಠ, ಸುಪಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನ ಬಂಧಿಸಲಾಗಿದೆ.

ಫೆಬ್ರುವರಿ 13ರಂದು ಪಣತ್ತೂರಿನ ಕಾವೇರಪ್ಪ ಲೇಔಟ್ ನ ಅಪಾರ್ಟ್ ಮೆಂಟ್ ಪಾರ್ಕಿಂಗ್ ಲಾಟ್ ನಲ್ಲಿ ‌ಮುನಿಸ್ವಾಮಿ ಶವ ಕೊಲೆಯಾದ ಸ್ಥಿತಿಯಲ್ಲಿ ಶವಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ರ ಮಣಿಕಂಠನನ್ನ ವಶಕ್ಕೆ‌ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿದ ಸಂಗತಿ ಬೆಳಕಿಗೆ ಬಂದಿತ್ತು. ಅಪ್ಪ-ಮಗನ ನಡುವೆ  ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು.  ಹೀಗಾಗಿ ತಂದೆ ಮುಗಿಸಲು 1 ಕೋಟಿ ಸುಪಾರಿ ನೀಡಿ ಮಾತುಕತೆ ನಡೆಸಿ ಮುಂಗಡವಾಗಿ 1 ಲಕ್ಷ ನೀಡಿರುವುದು ಗೊತ್ತಾಗಿದೆ. ಸುಪಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ಸಹಚರ ನವೀನ್ ಫೆ.13ರಂದು ನಾರಾಯಣಸ್ವಾಮಿ ಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ‌ ಮಾಡಿ ಪರಾರಿಯಾಗಿದ್ದರು. 

ಇದನ್ನೂ ಓದಿ: Bengaluru : ಹೆಂಡತಿ ಜೊತೆ ಕಿರಿಕ್ : ಎಣ್ಣೆ ಏಟಲ್ಲಿ ರಸ್ತೆ ಬದಿಯಲ್ಲಿ ವ್ಯಕ್ತಿ ಸುಸೈಡ್

ಈ ಮೊದಲೇ ಆರೋಪಿ ಮಣಿಕಂಠ ಮೊದಲ‌ ಪತ್ನಿ ಕೊಂದ‌ ಆರೋಪದ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದು ಎರಡನೇ ವಿವಾಹವಾಗಿ ಒಂದು ಹೆಣ್ಣು ಮಗುವಿದೆ.ಹೀಗಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ‌‌. ಈ ವಿಚಾರ ಗೊತ್ತಾಗುತ್ತಿದ್ದಂತೆ ಎರಡನೇ ಪತ್ನಿ ಮಣಿಕಂಠನಿಂದ ದೂರವಾಗಿ ವಿಚ್ಚೇದನದ ಮಾತುಕತೆ ನಡೆಯುತಿತ್ತು. ಈ ವಿಚಾರ ಅರಿತ ನಾರಾಯಣಸ್ವಾಮಿ,ಡಿವೋರ್ಸ್ ನೀಡಬೇಡ ಎಂದು ಮಗನಿಗೆ ಬುದ್ದಿ ಹೇಳಿದ್ದರು. ಇತ್ತ ಜೀವನ ಸಾಗಿಸಲು ಕಷ್ಟವಾಗುತ್ತೆ ಅಂತಾ ನಾರಾಯಣಸ್ವಾಮಿ ತನ್ನ ಹೆಸರಿನಲ್ಲಿದ್ದ ಪ್ಲ್ಯಾಟ್ ನ್ನ ಸೊಸೆಗೆ ರಿಜಿಸ್ಟರ್ ಮಾಡಲು ಮುಂದಾಗಿದ್ದ.

ಇದನ್ನೂ ಓದಿ: ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಪೊರಕೆಯೇ ಪರಿಹಾರ: ಎಎಪಿ ಅಭ್ಯರ್ಥಿ ಬಿ‌ಕೆ ಶಿವಪ್ಪ

ಈ ವಿಚಾರ ಗೊತ್ತಾಗುತ್ತಿದ್ದಂತೆ ಮಣಿಕಂಠ ಹಾಗೂ ತಂದೆ ನಡುವೆ ದೊಡ್ಡ ವಾಗ್ವಾದವೇ ನಡೆದಿತ್ತು.  ಹೀಗಾಗಿ ತಂದೆ ಕೊಂದರೆ ಆಸ್ತಿ ತನ್ನ ಹೆಸರಿಗೆ ಇರುತ್ತೆ ಸುಖವಾಗಿ ಇರಬಹುದು ಎಂದು ಪ್ಲಾನ್ ಮಾಡಿದ ಮಣಿಕಂಠ ತಂದೆಯ ಹತ್ಯೆಗೆ ಸುಪಾರಿ ನೀಡಿದ್ದ. ಇನ್ನೂ ಸುಪಾರಿ ಪಡೆದು ಬಂದವರು ನಾರಾಯಣಸ್ವಾಮಿ ಕೊಂದು‌ ಎಸ್ಕೇಪ್ ಆಗಿದ್ದರು. ಸದ್ಯ ತನಿಖೆ  ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News