ಈ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಮರೆತೂ ಸೇವಿಸಬಾರದು!

Side Effects Of Banana: ಬಾಳೆಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ತಿನ್ನಲು ಸುಲಭ ಮತ್ತು ಇದು ಜೇಬಿಗೂ ಕೂಡ ಹೊರೆಯಾಗುವುದಿಲ್ಲ, ಆದ್ದರಿಂದ ಹೆಚ್ಚಿನ ಜನರು ಬಾಳೆಹಣ್ಣುಗಳನ್ನು ತಿನ್ನಲು ಬಯಸುತ್ತಾರೆ.   

Written by - Nitin Tabib | Last Updated : Mar 7, 2023, 10:55 PM IST
  • ಬಾಳೆಹಣ್ಣು ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ.
  • ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು
  • ರಂಜಕದಂತಹ ಖನಿಜಗಳನ್ನು ಹೊಂದಿದೆ.
ಈ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಮರೆತೂ ಸೇವಿಸಬಾರದು! title=
ಜನರು ಮರೆತೂ ಕೂಡ ಬಾಳೆಹಣ್ಣು ಸೇವಿಸಬಾರದು!

Side Effects Of Banana: ಬಾಳೆಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ತಿನ್ನಲು ಸುಲಭ ಮತ್ತು ಇದು ಜೇಬಿಗೂ ಕೂಡ ಹೊರೆಯಾಗುವುದಿಲ್ಲ, ಆದ್ದರಿಂದ ಹೆಚ್ಚಿನ ಜನರು ಬಾಳೆಹಣ್ಣುಗಳನ್ನು ತಿನ್ನಲು ಬಯಸುತ್ತಾರೆ. ಬಾಳೆಹಣ್ಣು ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿದೆ.

ಶೀತದ ಸಮಸ್ಯೆ ಇರುವವರು
ಶೀತವಿರುವಾಗ ಮತ್ತು ಚಳಿಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ಇದು ತಂಪಾದ ಗುಣಧರ್ಮ ಹೊಂದಿದೆ ಮತ್ತು ಇದನ್ನು ತಿನ್ನುವುದರಿಂದ ಕೆಮ್ಮು ಮತ್ತು ಶೀತದ ಸಮಸ್ಯೆ ಹೆಚ್ಚಾಗುತ್ತದೆ.

ಅಸ್ತಮಾ ಕಾಯಿಲೆ ಇರುವವರು
ಬಾಳೆಹಣ್ಣು ತಂಪು ಗುಣಧರ್ಮ ಹೊಂದಿರುವ ಕಾರಣ ಒಂದು ವೇಳೆ ನಿಮಗೆ ಅಸ್ತಮಾದಂತಹ ಉಸಿರಾಟದ ಸಮಸ್ಯೆ ಇದ್ದರೆ, ನೀವು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಬಾಳೆಹಣ್ಣು ತಿಂದರೆ ಕೆಮ್ಮಿನ ಸಮಸ್ಯೆಯೂ ಹೆಚ್ಚಾಗಬಹುದು.

ಮಧುಮೇಹ ಸಮಸ್ಯೆ ಇರುವವರು
ಬಾಳೆಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿದೆ. ನೀವು ಮಧುಮೇಹ ಹೊಂದಿದ್ದರೆ, ನೀವು ಮಾಗಿದ ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬಾಳೆಹಣ್ಣು ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತದೆ.

ಅಲರ್ಜಿ ಸಮಸ್ಯೆ ಇರುವವರು
ಕೆಲವರಿಗೆ ಬಾಳೆಹಣ್ಣಿನಿಂದ ಅಲರ್ಜಿ ಇರುತ್ತದೆ. ಬಾಳೆಹಣ್ಣಿನಿಂದ ತುರಿಕೆ ಉಂಟಾಗುತ್ತಿದ್ದರೆ, ಬಾಳೆಹಣ್ಣುಗಳನ್ನು ತಿನ್ನಬಾರದು. ಬಾಳೆಹಣ್ಣು ತಿನ್ನುವುದರಿಂದ ಅಲರ್ಜಿ ಇರುವವರು ತುರಿಕೆ, ದದ್ದುಗಳು ಮತ್ತು ಚರ್ಮದ ದದ್ದುಗಳ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ-ಹಾಸಿಗೆಯಲ್ಲಿದ್ದುಕೊಂಡೆ ಈ ಒಂದು ಕೆಲಸ ಮಾಡಿ, 7 ದಿನಗಳಲ್ಲಿ ಬೆಣ್ಣೆಯಂತೆ ಕರಗುತ್ತೆ ಹೊಟ್ಟೆ ಭಾಗದ ಬೊಜ್ಜು!

ಹೊಟ್ಟೆಯ ಸಮಸ್ಯೆ ಇರುವವರು
ಬಾಳೆಹಣ್ಣನ್ನು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಹೊಟ್ಟೆಯ ತೊಂದರೆ ಇದ್ದಾರೆ, ಬಾಳೆಹಣ್ಣು ತಿನ್ನುವುದರಿಂದ ಹಾನಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಇದ್ದು ಅದು ಹೊಟ್ಟೆಯನ್ನು ಬಿಗಿಗೊಳಿಸುತ್ತದೆ.

ಇದನ್ನೂ ಓದಿ-ತೂಕ ಇಳಿಕೆಗೆ ಮಾಡಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಅದ್ಭುತ ಪಾನೀಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News