ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ನ್ಯೂಸ್! ಕೇಂದ್ರ ಸರ್ಕಾರ ನೀಡಿದ ಮಹತ್ವದ ಮಾಹಿತಿ !

ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಬಯಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿರಲಿದೆ. ಸುದೀರ್ಘ ನಿರೀಕ್ಷೆಯ ನಂತರ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ನೀಡಲು ಸರ್ಕಾರ ನಿರ್ಧರಿಸಿದೆ.  

Written by - Ranjitha R K | Last Updated : Mar 13, 2023, 01:12 PM IST
  • ಹಳೆಯ ಪಿಂಚಣಿ ಯೋಜನೆ ಕುರಿತು ಹೊಸ ಅಪ್ಡೇಟ್
  • ಹಳೆಯ ಪಿಂಚಣಿ ಯೋಜನೆ ನೀಡಲು ಸರ್ಕಾರ ನಿರ್ಧಾರ
  • ಯಾರಿಗೆ ಸಿಗಲಿದೆ OPS ಪ್ರಯೋಜನ ?
ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ನ್ಯೂಸ್!  ಕೇಂದ್ರ ಸರ್ಕಾರ ನೀಡಿದ ಮಹತ್ವದ ಮಾಹಿತಿ !   title=

ಬೆಂಗಳೂರು : ಹಳೆಯ ಪಿಂಚಣಿ ಯೋಜನೆ ಕುರಿತು ಕೇಂದ್ರ ಸರ್ಕಾರ ಅಪ್ಡೇಟ್ ವೊಂದನ್ನು ಜಾರಿ ಮಾಡಿದೆ. ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಬಯಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿರಲಿದೆ. ಸುದೀರ್ಘ ನಿರೀಕ್ಷೆಯ ನಂತರ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ನೀಡಲು ಸರ್ಕಾರ ನಿರ್ಧರಿಸಿದೆ. ಇದೀಗ ಹಳೆಯ ಪಿಂಚಣಿ ಯೋಜನೆ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ಇದೀಗ ಈ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. 

ಯಾವ ಉದ್ಯೋಗಿಗಳು OPS ನ ಪ್ರಯೋಜನವನ್ನು ಪಡೆಯಲಿದ್ದಾರೆ ? : 
ಡಿಸೆಂಬರ್ 22, 2003 ರ ಮೊದಲು ಕೆಲಸಕ್ಕೆ ನೇಮಕಗೊಂಡಿರುವ ಉದ್ಯೋಗಿ ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಆದರೆ ಡಿಸೆಂಬರ್ 22, 2003 ರ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ಹಳೆಯ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ ! 2,300 ರೂ.ಗಳಷ್ಟು ಅಗ್ಗವಾದ ಚಿನ್ನ !

ಆಗಸ್ಟ್‌ನೊಳಗೆ ಹಳೆಯ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ : 
ಯಾರು ಹಳೆಯ ಪಿಂಚಣಿ ಯೋಜನೆಯನ್ನು ಆಯ್ಕೆಯನ್ನು ಪಡೆಯಬಹುದು ಅವರು ಆಗಸ್ಟ್ 31 2023 ರವರೆಗೆ ಈ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ. ಆಗಸ್ಟ್ 31 ರವರೆಗೆ ಹಳೆಯ ಪಿಂಚಣಿ ಯೋಜನೆಯನ್ನು   ಆಯ್ಕೆ ಮಾಡದ ಅರ್ಹ ಉದ್ಯೋಗಿಗಳನ್ನು ಹೊಸ ಪಿಂಚಣಿ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. 

ಆಯ್ಕೆ ಮಾಡಿದ ನಂತರ ಬದಲಾಯಿಸಲು ಸಾಧ್ಯವಾಗುವುದಿಲ್ಲ :
ಅಧಿಕೃತ ಮಾಹಿತಿಯ ಪ್ರಕಾರ, ಉದ್ಯೋಗಿ ಹಳೆಯ ಪಿಂಚಣಿ ಯೋಜನೆಗೆ ಆಯ್ಕೆ ಮಾಡುವುದು ಅವರ ಬಳಿಯಿರುವ ಕೊನೆಯ ಆಯ್ಕೆಯಾಗಿರುತ್ತದೆ. ಒಮ್ಮೆ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡ ನಂತರ ನೌಕರರು ಹೊಸ ಪಿಂಚಣಿ ಯೋಜನೆಗೆ ಹೋಗುವುದು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : 7th Pay Commission : ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! 

ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು? :
ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ನೋಡುವುದಾದರೆ ಇಲ್ಲಿ ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ಪಿಂಚಣಿ  ನಿರ್ಧಾರವಾಗುತ್ತದೆ. ಇದಲ್ಲದೇ ಹಣದುಬ್ಬರ ದರ ಹೆಚ್ಚಾದಂತೆ ಡಿಎ ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೊಸ ವೇತನ ಆಯೋಗವನ್ನು ಜಾರಿಗೆ ತಂದರೂ ಪಿಂಚಣಿಯನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News