ಬೆಂಗಳೂರು: ಸುಂದರ ತ್ವಚೆಯನ್ನು ಪಡೆಯಲು ಪ್ರತಿ ದಿನ ಚರ್ಮದ ಆರೈಕೆ ಬಗ್ಗೆ ಗಮನ ಹರಿಸುವುದು ಕೂಡ ಅತ್ಯಗತ್ಯ. ಇದಕ್ಕಾಗಿ ಕೆಲವರು ಸ್ಕಿನ್ ಟೋನರ್ ಅನ್ನು ಬಳಸುತ್ತಾರೆ. ಇದು ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಸಹ ಬಹಳ ಪ್ರಯೋಜನಕಾರಿ ಆಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವರಿಗೆ ಸ್ಕಿನ್ ಟೋನರ್ ಬಳಸುವ ಸರಿಯಾದ ಮಾರ್ಗ ತಿಳಿದಿರುವುದಿಲ್ಲ. ಇದು ನಿಮ್ಮ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಇದನ್ನು ತಪ್ಪಿಸಲು ಸ್ಕಿನ್ ಟೋನರ್ ಬಲಸುವಾಗ ಕೆಲವು ವಿಷಯಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸುವುದು ತುಂಬಾ ಮುಖ್ಯ.
ನೀವೂ ಸಹ ಸ್ಕಿನ್ ಟೋನರ್ ಬಳಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ:
ಕ್ಲೆನ್ಸರ್ ನಂತರವೇ ಟೋನರ್ ಬಳಸಿ:
ನೀವೂ ಸಹ ಸ್ಕಿನ್ ಟೋನರ್ ಬಳಸುತ್ತಿದ್ದರೆ ಕ್ಲೆನ್ಸರ್ ಬಳಸಿದ ನಂತರವೇ ಇದನ್ನು ಬಳಸಿ. ಯಾವಾಗಲೂ ಕ್ಲೆನ್ಸಿಂಗ್ ಮಾಡಿದ ತಕ್ಷಣ ಟೋನರ್ ಬಳಸಬೇಕು ಎಂಬುದನ್ನೂ ನೆನಪಿನಲ್ಲಿಡಿ. ಇದಲ್ಲದೆ, ನೀವು ಯಾವ ಟೋನರ್ ಬಳಸುತ್ತಿದ್ದೀರೋ ಅದಕ್ಕೆ ತಕ್ಕಂತೆ ಅದರ ಪ್ರಮಾಣವಿದ್ದರೆ ಒಳಿತು.
ಇದನ್ನೂ ಓದಿ- Tender Coconut : ಎಳೆನೀರು ಕುಡಿದ ಮೇಲೆ ತಪ್ಪದೇ ಗಂಜಿ ತಿನ್ನಿ, ಈ ಕಾಯಿಲೆ ಬುಡಸಮೇತ ತೊಲಗುತ್ತೆ
ಸಾಫ್ಟ್ ಟೋನರ್:
ನೀವು ಸಾಫ್ಟ್ ಟೋನರ್ ಅನ್ನು ಬಳಸುತ್ತಿದ್ದರೆ ಅದನ್ನು ಪ್ರತಿದಿನ ಬಳಸಬಹುದು. ಇದು ನಿಮ್ಮ ಬಳಸುವುದರಿಂದ ನಿಮ್ಮ ತ್ವಚೆ ಸುಂದರವಾಗಿ ಕಾಣುತ್ತದೆ.
ಟೋನರ್ ಸ್ಪ್ರೇ:
ಒಂದೊಮ್ಮೆ ನೀವು ಟೋನರ್ ಸ್ಪ್ರೇ ಅನ್ನು ಬಳಸುತ್ತಿದ್ದರೆ ಇದನ್ನು ಅಪ್ಪ್ಲೈ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಿ. ಇದು ತೆರೆದ ರಂಧ್ರಗಳಿಗೆ ಟೋನರ್ ಬಳಕೆಯೂ ಸಮಸ್ಯೆ ಉಂಟುಮಾಡಬಹುದು.
ಇದನ್ನೂ ಓದಿ- Skin Care : ಕಾಂತಿಯುತ ತ್ವಚೆಗಾಗಿ ಪ್ರತಿ ರಾತ್ರಿ ಈ ಒಂದು ಕೆಲಸ ಮಾಡಿ ಸಾಕು.!
ನೀವು ಸೂಕ್ಷ್ಮ ಚರ್ಮದ ಮೇಲೆ ಟೋನರ್ ಬಳಸುತ್ತಿದ್ದರೆ ಶುದ್ಧವಾದ ಹತ್ತಿ ಉಂಡೆ, ಇಲ್ಲವೇ ಬ್ಲೆಂಡರ್ ಸಹಾಯದಿಂದ ನಿಮ್ಮ ಚರ್ಮಕ್ಕೆ ಲಘುವಾಗಿ ಅನ್ವಯಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.