ಈ ನಾಲ್ಕು ಕಾಯಿಲೆಗಳನ್ನು ಶಾಶ್ವತವಾಗಿ ದೂರವಿಡುತ್ತದೆ ಹಲಸಿನ ಹಣ್ಣು

Ripe jackfruit Health Benefits In Summers: ಈ ಋತುವಿನಲ್ಲಿ ಸಿಗುವ ಆರೋಗ್ಯಕರ ಹಣ್ಣುಗಳಲ್ಲಿ ಇದು ಒಂದಾಗಿದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. 

Written by - Ranjitha R K | Last Updated : Mar 16, 2023, 03:45 PM IST
  • ಇದೀಗ ಬೇಸಿಗೆ ಆರಂಭವಾಗಿದೆ.
  • ಬೇಸಿಗೆಯಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.
  • ಹಲಸಿನ ಹಣ್ಣು ಇಷ್ಟಪಡದವರು ಬಹಳ ಕಡಿಮೆ
ಈ ನಾಲ್ಕು ಕಾಯಿಲೆಗಳನ್ನು ಶಾಶ್ವತವಾಗಿ ದೂರವಿಡುತ್ತದೆ ಹಲಸಿನ ಹಣ್ಣು   title=

Ripe jackfruit Health Benefits In Summers : ಇದೀಗ ಬೇಸಿಗೆ ಆರಂಭವಾಗಿದೆ. ಬೇಸಿಗೆಯಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅವುಗಳಲ್ಲಿ ಹಲಸು ಕೂಡಾ ಒಂದು.  ಹಲಸಿನ  ಹಣ್ಣು ಇಷ್ಟಪಡದವರು ಬಹಳ ಕಡಿಮೆ. ಈ ಋತುವಿನಲ್ಲಿ ಸಿಗುವ ಆರೋಗ್ಯಕರ ಹಣ್ಣುಗಳಲ್ಲಿ ಇದು ಒಂದಾಗಿದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಹಾಗಾಗಿ ಈ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು :
1. ಮಲಬದ್ಧತೆಗೆ ಹಲಸು ಪ್ರಯೋಜನಕಾರಿ :

ಹಲಸು ಫೈಬರ್‌ನ ಉತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ  ಮಲಬದ್ಧತೆಯ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ಕರುಳಿನ ಚಲನೆಯನ್ನು ಕ್ರಮಬದ್ಧವಾಗಿಡಲು ಇದು ಸಹಕಾರಿಯಾಗಿದೆ. ಇದು  ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. 

ಇದನ್ನೂ ಓದಿ : Health Tips : ಪ್ರತಿದಿನ ರಾತ್ರಿ 2 ಲವಂಗ ಸೇವಿಸಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಗೋತ್ತಾ?

2. ಮಧುಮೇಹದಲ್ಲಿ ಹಲಸು ಪ್ರಯೋಜನಕಾರಿ :
ದೇಹವು ಹಲಸಿನ ಹಣ್ಣನ್ನು ಹೆಚ್ಚು ನಿಧಾನವಾಗಿ ಜೀರ್ಣಿಸಿಕೊಳ್ಳುತ್ತದೆ. ಇದು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅಂದರೆ, ಹಲಸಿನ ಹಣ್ಣು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವುದರ ಜೊತೆಗೆ ಸಕ್ಕರೆ ಅಂಶ ಏರಿಕೆಯಾಗದಂತೆ ತಡೆಯುತ್ತದೆ.  

3. ಹೈ ಬಿಪಿಯಲ್ಲಿ ಪ್ರಯೋಜನಕಾರಿ ಹಲಸು  :
ಹೈ ಬಿಪಿ ರೋಗಿಗಳಿಗೆ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಪೊಟ್ಯಾಸಿಯಂ ಸಮೃದ್ಧವಾಗಿರುವ ಹಲಸು ನಿಮ್ಮ ರಕ್ತನಾಳಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ. 

ಇದನ್ನೂ ಓದಿ : ಹಲವು ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಈ ಹಣ್ಣು ಒಂದು ವರದಾನಕ್ಕೆ ಸಮಾನ! 

4. ಅಲ್ಸರ್ ಆಗಿದ್ದರೆ ಹಲಸು ತಿನ್ನಿ  :
ಹಲಸಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅಲ್ಸರ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಯಿಯ ಹುಣ್ಣುಗಳನ್ನು ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತಾರೆ. ಇದರೊಂದಿಗೆ ಹೊಟ್ಟೆಯ ಪಿಹೆಚ್ ಸಮತೋಲನದಲ್ಲಿಡಲು ಈ ಹಣ್ಣು ಸಹಕಾರಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News