ಪ್ರಯಾಗ್ರಾಜ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗದ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಆರ್ಎಸ್ಎಸ್ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾದರೂ, ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಎನ್ನುವುದು ಮೋದಿ ಸರ್ಕಾರದ ನಡೆಯಿಂದ ಎದ್ದು ಕಾಣುತ್ತಿದೆ ಎಂದು ಆರ್ಎಸ್ಎಸ್ ಆರೋಪಿಸಿದೆ.
ಪ್ರಯಾಗ್ರಾಜ್ ಕುಂಭಮೇಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡದ ಸಂಘ ಪರಿವಾರದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೀ ಜೋಶಿ, ಕೇಂದ್ರದ ಮೋದಿ ಸರ್ಕಾರವನ್ನುದ್ದೇಶಿಸಿ 2025 ರಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆಯೇ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಭಯ್ಯಾ ಜೀ ಜೋಶಿ ಈ ಕಾರ್ಯಕ್ರಮದಲ್ಲಿ ರಾಮ ಮಂದಿರದ ಬಗ್ಗೆ ಮಾತನಾಡುತ್ತಾ, 2025 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣವಾದಾಗ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಅವರ ಪ್ರಕಾರ, ಸೋಮನಾಥ ದೇವಾಲಯದ ನಿರ್ಮಾಣದ ನಂತರ 1952 ರಲ್ಲಿ ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದರು.
ಸರ್ಕಾರವನ್ನು ಗುರಿಯಾಗಿಸಿ:
ರಾಮ ಮಂದಿರ ನಿರ್ಮಾಣಕ್ಕಾಗಿ ಇನ್ನೂ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಅಯೋಧ್ಯಾದಲ್ಲಿ ರಾಮ ಮಂದಿರ ಕೇವಲ ದೇವಸ್ಥಾನವನ್ನು ನಿರ್ಮಿಸುವುದಿಲ್ಲ. ಜೊತೆಗೆ ಇದು ಲಕ್ಷಾಂತರ ಹಿಂದೂಗಳ ನಂಬಿಕೆ ಮತ್ತು ಗೌರವದೊಂದಿಗೆ ಸಂಬಂಧ ಹೊಂದಿದೆ ಎಂದು ಈ ಕಾರ್ಯಕ್ರಮದಲ್ಲಿ ಭಯ್ಯಾ ಜೀ ಜೋಶಿ ಹೇಳಿದರು.
ಕುಂಭ ಮೇಳದಲ್ಲಿ ಹರಿದ್ವಾರದ ದಿವ್ಯ ಪ್ರೇಂ ಸೇವಾ ಮಿಷನ್ ಆಯೋಜಿಸಿದ್ದ ಸಂಘಟನೆಯ ಸೆಮಿನಾರ್ನಲ್ಲಿ ಭಯ್ಯಾ ಜೀ ಜೋಶಿ, ಕೇವಲ ದೇವಸ್ಥಾನದ ವಿಷಯ ಮಾತ್ರವಲ್ಲದೆ, ಅಭಿವೃದ್ಧಿಯ ವಿಷಯದ ಬಗ್ಗೆ ಮೋದಿ ಸರಕಾರವನ್ನೂ ಆಕ್ರಮಣ ಮಾಡಿದರು. ಮೋದಿ ಸರ್ಕಾರದ ಅಭಿವೃದ್ಧಿಯ ಬಗ್ಗೆಯೂ ಹೈಲೈಟ್ ಮಾಡಿದ ಅವರು 2025 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಿದರು. ಪಂಡಿತ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದಾಗ, 1952 ರ ವರ್ಷವನ್ನು ಅಭಿವೃದ್ಧಿಯ ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ.