ಉಪವಾಸ ಮಾಡುವಾಗ, ನಿಮ್ಮ ಶಕ್ತಿಯ ಮಟ್ಟವನ್ನು ನೀವು ತಿಳಿದಿರಬೇಕು. ಈ ಹೆಚ್ಚಿನ ಪ್ರೊಟೀನ್ ತಿಂಡಿಗಳು ನಿಮ್ಮನ್ನು ದೀರ್ಘಕಾಲದವರೆಗೆ ಚೈತನ್ಯದಿಂದ ಇಡುತ್ತವೆ. ಪ್ರೊಟೀನ್ ಬರಿತ ಆಹಾರಗಳು ಯಾವವು ಈ ಕೆಳಗಿದೆ ನೋಡಿ..
Chaitra Navratri 2023 : ಚೈತ್ರ ನವರಾತ್ರಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಈ ಒಂಬತ್ತು ದಿನಗಳ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಹಬ್ಬದ ಸಮಯದಲ್ಲಿ ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಕ್ತಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಉಪವಾಸ ಮಾಡುವಾಗ, ನಿಮ್ಮ ಶಕ್ತಿಯ ಮಟ್ಟವನ್ನು ನೀವು ತಿಳಿದಿರಬೇಕು. ಈ ಹೆಚ್ಚಿನ ಪ್ರೊಟೀನ್ ತಿಂಡಿಗಳು ನಿಮ್ಮನ್ನು ದೀರ್ಘಕಾಲದವರೆಗೆ ಚೈತನ್ಯದಿಂದ ಇಡುತ್ತವೆ. ಪ್ರೊಟೀನ್ ಬರಿತ ಆಹಾರಗಳು ಯಾವವು ಈ ಕೆಳಗಿದೆ ನೋಡಿ..
ಮೊಸರು ಜೊತೆ ಹಣ್ಣು : ಮೊಸರನ್ನು ಬಾಳೆಹಣ್ಣು, ಸೇಬು ಮತ್ತು ದಾಳಿಂಬೆಯಂತಹ ಕೆಲವು ತಾಜಾ ಹಣ್ಣುಗಳೊಂದಿಗೆ ಬೆರೆಸಿ ರುಚಿಕರವಾದ ಮತ್ತು ಪೌಷ್ಟಿಕವಾದ ಹಣ್ಣುಗಳ ಸಲಾಡ್ ಅನ್ನು ತಯಾರಿಸಿ ಸೇವಿಸಬಹುದು. ಮೊಸರು ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ.
ಹುರಿದ ಕಮಲ ಬೀಜ : ಹುರಿದ ಕಮಲ ಬೀಜ ನವರಾತ್ರಿಯ ತಿಂಡಿಯನ್ನು ಉತ್ತಮಗೊಳಿಸುತ್ತದೆ. ಅವು ಬಹಳಷ್ಟು ಪ್ರೋಟೀನ್, ಫೈಬರ್ ಮತ್ತು ಕೆಲವು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಅವುಗಳ ರುಚಿಯನ್ನು ಹೆಚ್ಚಿಸಲು, ಅವುಗಳನ್ನು ತುಪ್ಪ ಅಥವಾ ಆಲಿವ್ ಎಣ್ಣೆಯಲ್ಲಿ ಹುರಿಯಿರಿ, ನಂತರಅದಕ್ಕೆ ವೆಲಪ ಕಲ್ಲು ಉಪ್ಪನ್ನು ಸಿಂಪಡಿಸಿ ಸೇವಿಸಿ.
ಸಾಬುದಾನ ಖಿಚಡಿ : ರುಚಿಕರವಾದ ಖಿಚಡಿ ಮಾಡಲು ಪ್ರೋಟೀನ್ನ ಅತ್ಯುತ್ತಮ ಮೂಲವಾಗಿರುವ ಸಾಬುದಾನವನ್ನು ಬಳಸಿ. ಖಿಚಡಿಯ ಪೌಷ್ಟಿಕಾಂಶವನ್ನು ಹೆಚ್ಚಿಸಲು, ನೀವು ಕೆಲವು ಕಡಲೆಕಾಯಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಬಹುದು.
ಸಾಮೆ ಅಕ್ಕಿಯ ಖೀರ್ : ಮತ್ತೊಂದು ರುಚಿಕರವಾದ ಉಪಹಾರವೆಂದರೆ ಸಾಮೆ ಅನ್ನದಿಂದ ಮಾಡಿದ ಖೀರ್. ಇದು ತುಂಬುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದ್ದು ಇದನ್ನು ಪುಲಾವ್ ಅಥವಾ ಬಿರಿಯಾನಿ ರೂಪದಲ್ಲಿ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ತಯಾರಿಸಬಹುದು. ನೀವು ಸಂವತ್ ಅನ್ನದೊಂದಿಗೆ ರೈಸ್ ಪುಲಾವ್ ಮಾಡಬಹುದು.