ಮೆಟ್ರೋದಲ್ಲಿ ಒಂದೇ ದಿನ 45,000 ಸೆಲ್ಫಿ...!

ಒಂದೇ ದಿನ ಮೆಟ್ರೋದಲ್ಲಿ 45000 ಜನರು ಸೆಲ್ಫ್ಫಿಯನ್ನು ತೆಗೆದುಕೊಂಡಿದ್ದಾರೆ ಎಂದು ಸಿಸಿಟಿವಿಯಿಂದ ಬಹಿರಂಗಗೊಂಡಿದೆ.

Last Updated : Dec 1, 2017, 05:11 PM IST
ಮೆಟ್ರೋದಲ್ಲಿ ಒಂದೇ ದಿನ 45,000 ಸೆಲ್ಫಿ...! title=

ಹೈದರಾಬಾದ್: ಹೈದರಾಬಾದ್ ಮೆಟ್ರೋ ಪ್ರಾರಂಭವಾಗಿ ಎರಡೇ ದಿನದಲ್ಲಿ ಅಪರೂಪದ ದಾಖಲೆಯೊಂದನ್ನು ಮಾಡಿದೆ. ಸೆಲ್ಫಿ ಟ್ರೆಂಡ್ ಹೆಚ್ಚಾಗಿರುವ ಈ ದಿನಗಳಲ್ಲಿ ಸೆಲ್ಫಿಯಿಂದಾಗಿ ಈ ರಾಜ್ಯದ ಮೆಟ್ರೋ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಅದೇನೆಂದರೆ ಹೈದರಾಬಾದ್ ಮೆಟ್ರೋದಲ್ಲಿ ಒಂದು ದಿನದಲ್ಲಿ 45,000 ಸೆಲ್ಫಿ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಅದರಲ್ಲೂ ಹೆಚ್ಚಿನ ಅಂದರೆ 25,000 ಸೆಲ್ಫಿ ಮಿಯಾಪುರ್ ಮೆಟ್ರೋ ನಿಲ್ದಾಣದಲ್ಲಿ ದಾಖಲಾಗಿದೆ.

ಇನ್ನು ಹೈದರಾಬಾದ್ ಮೆಟ್ರೋ ಸುರಕ್ಷತೆಯ ಬಗ್ಗೆ ಮಾತನಾಡಿರುವ ಡಿಎಂಕೆ ಎಂಪಿ ಮಹೇಂದ್ರ ರೆಡ್ಡಿ, ನಾವು ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿನ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಿದ್ದೇವೆ. ನಾವು ಸುಮಾರು 600 ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದೇವೆ ಎಂದು ಹೇಳಿದರು. ಅಲ್ಲದೆ ಮೆಟ್ರೊ ಈಗ ಅಂತರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಹೋಮ್ ಅಡ್ವೈಸರ್ ಅನುರಾಗ್ ಶರ್ಮಾ ಅವರು ಮೆಟ್ರೊ ಸುರಕ್ಷತಾ ಯೋಜನೆಯನ್ನು ನಡೆಸಿದರು ಮತ್ತು ಯೋಜನೆಯ ಪ್ರಕಾರ ಅವರು ಗುಪ್ತಚರ ವ್ಯವಸ್ಥೆಯನ್ನು ಅನುಮೋದಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

Trending News