ದೆಹಲಿ: ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಕಾರ್ಯಕರ್ತರು ಕಾನ್ಸುಲೇಟ್ ಮೇಲೆ ದಾಳಿ ಮಾಡಿದ ನಂತರ ಲಂಡನ್‌ನಲ್ಲಿರುವ ಹೈಕಮಿಷನ್ ಎದುರು ಭಾರತೀಯರು ಸತತ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಪ್ರತಿಭಟನೆ ವೇಳೆ ಯಾವುದೇ ಅನಗತ್ಯ ಘಟನೆ ನಡೆಯಬಾರದೆಂದು ಸ್ಥಳದಲ್ಲಿ ಯುಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಆಕ್ರೋಶದ ಮಧ್ಯೆಯು ಯುಕೆ ಪೋಲೀಸ್ ಡ್ಯಾನ್ಸ್ ಫುಲ್ ವೈರಲ್ ಆಗಿದೆ.
ಮಾರ್ಚ್ 19 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಪರ ಬೆಂಬಲಿಗರ ಗುಂಪು ದಾಳಿ ಮಾಡಿ ಭಾರತದ ರಾಷ್ಟ್ರೀಯ ಧ್ವಜವನ್ನು ಕಿತ್ತೊಗೆದ ದೃಶ್ಯವು ಭಾರತೀಯರ ಅಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್ ವೈರಲ್
ಈ ಹಿನ್ನಲೆ ಖಲಿಸ್ತಾನಿ ವಿರುದ್ದ ಭಾರತೀಯರು ಸತತ ಎರಡು ವಾರಗಳ ಕಾಲದಿಂದ ಪ್ರತಿಭಟನೆ ನಡೆಸಿ ಸದ್ಯಕೀಗ ಅಲ್ಲಿ ಪರಿಸ್ಥಿತಿ ತಣ್ಣಾಗಾದಂತಿದೆ. ಈ ವೇಳೆ ಯುಕೆ ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯರ ಬೆಂಬಲಿಗರೊಂದಿಗೆ ಶಾಂತಿ ಪ್ರತಿಭಟನೆ ಸಮಯದಲ್ಲಿ ಭಾರತೀಯ ಫೇಮಸ್ 'ಜೈ ಹೋ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಆದರೆ ಇದರಲೇನಿದೆ ವಿಶೇಷ ಎಂದು ಯೋಚಿಸುತ್ತಿರಬಹುದು ಖಂಡಿತವಾಗಿಯು ವಿಶೇಷ ಇದೆ. ಕಾರಣ ಅಂಥ ಅಕ್ರೋಶದ ಮಧ್ಯೆಯು ಬ್ರಿಟೀಷ್ ಪೋಲೀಸ್ ಅಧಿಕಾರಿಯೊಬ್ಬರು ಭಾರತೀಯ ಹಾಡಿಗೆ ಹೆಜ್ಜೆ ಹಾಕುತ್ತಾರೆಂದರೆ ಇದ್ದಕ್ಕಿಂತ ವಿಶೇಷ ಬೇರೆ ಇದ್ದೀಯಾ.. ನಮ್ಮ ಭಾರತೀಯ ಸಂಗೀತ ಸಾಹಿತ್ಯವೇ ಹಾಗೆ ಎಂಥವರನ್ನು ತನ್ನತ್ತ ಸೆಳೆಯುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಭಾರತೀಯರ ಹೃದಯ ಎಷ್ಟು ಸಹೃದಯಿನೋ ಹಾಗೆ ಸಂಗೀತದಲ್ಲೂ ಅಷ್ಟೇ ಪ್ರೀತಿ ವಾತ್ಸಲ್ಯ ತುಂಬಿದೆ.
#WATCH | British policeman dances with Indian supporters outside the Indian High Commission in London.
Indians have gathered outside Indian High Commission to protest against the Khalistanis and in support of the Indian flag. pic.twitter.com/puQq5Y7kRZ
— ANI (@ANI) March 21, 2023
ಇದನ್ನೂ ಓದಿ: Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.