ನೇಪಾಳ ರಾಜ ವಂಶಸ್ಥ ಪರಾಸ್ ಷಾಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ನೇಪಾಳದ ರಾಜ ವಂಶಸ್ಥ ಪರಾಸ್ ಷಾ ಸೋಮವಾರ ಸಂಜೆ ಹೃದಯಾಘಾತದಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Last Updated : Jan 29, 2019, 04:02 PM IST
ನೇಪಾಳ ರಾಜ ವಂಶಸ್ಥ ಪರಾಸ್ ಷಾಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು  title=

ಕಠ್ಮಂಡು: ನೇಪಾಳದ ರಾಜ ವಂಶಸ್ಥ ಪರಾಸ್ ಷಾ ಸೋಮವಾರ ಸಂಜೆ ಹೃದಯಾಘಾತದಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪರಾಸ್ ಷಾ(47) ಅವರನ್ನು ಕಠ್ಮಂಡುವಿನ ಥಾಥಾಲಿಯಲ್ಲಿ ನಾರ್ವಿಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಡಿಯಾಲಜಿಸ್ಟ್ ತಂಡದ ಡಾ. ಯಾದವ್ ಭಟ್ ಅವರ ನೇತೃತ್ವದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ರಾಜ ವಂಶಸ್ಥ ಷಾ ಅವರಿಗೆ ಆಂಜಿಯೋಪ್ಲ್ಯಾಸ್ಟಿಯನ್ನು ವೈದ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಮತ್ತು ಅವರ ಸ್ಥಿತಿ ಈಗ ಸ್ಥಿರವಾಗಿದೆ ಎನ್ನಲಾಗಿದೆ. ಐದು ವರ್ಷಗಳ ಹಿಂದೆ, ಷಾ ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. 
 

Trending News