IPL 2023: ಐಪಿಎಲ್ ಶುರುವಾಗಿ 14 ಸೀಸನ್ ಗಳೇ ಕಳೆದಿವೆ. ಇದೀಗ 15 ನೇ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಕಳೆದ 14 ಸೀಸನ್ ಗಳಲ್ಲಿ ನಮ್ಮ ಆರ್ಸಿಬಿ ತಂಡ 7 ಬಾರಿ ಪ್ಲೆ ಆಫ್ ಗೆ ಹೋಗಿದೆ ಹಾಗೂ 3 ಬಾರಿ ಫೈನಲ್ ಪಂದ್ಯ ಆಡಿದೆ. ಆದರೂ ಕೂಡ ಒಂದೇ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ವಿಷಯವಾಗಿ ಆರ್ಸಿಬಿ ವಿರುದ್ಧ ಹಲವಾರು ಟೀಕೆಗಳನ್ನು ತಂಡದ ವಿರೋಧಿಗಳು ಮಾಡುತ್ತಲೇ ಬಂದಿದ್ದಾರೆ.
ಆರ್ಸಿಬಿ ಘಟಾನುಘಟಿ ಆಟಗಾರರೊಂದಿಗೆ ಬಲಿಷ್ಠ ತಂಡವನ್ನೇ ಹೊಂದಿದ್ದರು ಸಹ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಚೋಕರ್ಸ್ ತಂಡ, ನಿಮ್ಮ ಹಣೆಬರಹದಲ್ಲಿ ಕಪ್ ಸಿಗುವುದು ಬರೆದಿಲ್ಲ ಹೀಗೆ ಹಲವಾರು ಟ್ರೊಲ್ ಗಳನ್ನೂ ಸಹ ಆರ್ಸಿಬಿ ವಿರೋಧಿ ಫ್ಯಾನ್ಸ್ ಗಳು ಮಾಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ- ಚೆನ್ನೈ ತಂಡದಲ್ಲಿ ಧೋನಿಯ ನಾಯಕತ್ವ ಸ್ಥಾನವನ್ನು ತುಂಬಲಿದ್ದಾರೆ ಈ ಆಟಗಾರ...!
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕನ್ನಡದ ದಾನಿಶ್ ಸೇಠ ನಡೆಸುವ ಆರ್ಸಿಬಿ ಇನ್ಸೈಡರ್ ಶೋ ನಲ್ಲಿ ಈ ಕುರಿತಂತೆ ದಾನಿಷ್ ಕೇಳಿದ ಪ್ರಶ್ನೆಗೆಖಡಕ್ ಆಗಿಯೇ ಉತ್ತರಿಸಿರುವ ವಿರಾಟ್ ಕೊಹ್ಲಿ, "ಇದು ಒಂದು ದೊಡ್ಡ ಫ್ರಾಂಚೈಸಿಗೆ ಇರುವ ಒತ್ತಡ. ನಮ್ಮ ತಂಡಕ್ಕೆ ತುಂಬಾ ಜನ ಕಪ್ ಗೆದ್ದಿಲ್ಲ ಅಂತ ಕಿಚಾಯಿಸುತ್ತಲೇ ಇದ್ದಾರೆ. ಆ ತರಹ ನಿರೀಕ್ಷೆಗಳಿದ್ದರೆ ಬಂದು ಆಡಿ ಒಂದು ದೊಡ್ಡ ತಂಡಕ್ಕೆ ಹೇಳಿ. ನಾವು ಏಕೆ ಇಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದೇವೆ ಅಂತ ಹೇಳಿ. ಇಲ್ಲವಾದಲ್ಲಿ ನಾವು ಯಾವುದೋ ಒಂದು ಅನುಪಯುಕ್ತ (Faltu) ತಂಡವಾಗಿರುತ್ದ್ದೆವು" ಎಂದು ಹೇಳಿದ್ದಾರೆ.
ಇದನ್ನೂ ಓದಿ- IPL 2023: ಲಕ್ನೋ ವಿರುದ್ಧ ಚೆನ್ನೈ ತಂಡಕ್ಕೆ 12 ರನ್ ಗಳ ರೋಚಕ ಗೆಲುವು
ವಿಶ್ವದಲ್ಲೇ ಅತಿ ದೊಡ್ಡ ಅಭಿಮಾನಿ ಬಳಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವ ಏಕೈಕ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹಾಗಾಗಿ, ಇಷ್ಟು ಸೀಸನ್ ಗಳು ಕಳೆದರೂ ಸಹ ಒಂದೇ ಒಂದು ಬಾರಿ ತಂಡ ಕಪ್ ಗೆಲ್ಲದಿದ್ದಾಗ ಅದಕ್ಕಾಗಿ ಟೀಕೆ ಮಾಡುವುದು ಸಹಜ. ಆದರೆ, ಇದಕ್ಕೆಲ್ಲ ಕಿವಿಗೊಟ್ಟು ಒತ್ತಡದಲ್ಲಿ ಆಡಬಾರದು ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ಅದಲ್ಲದೆ ಈ ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ಹಾಸ್ಯಚಕಿತರಾಗಿ ಹಲವಾರು ವಿಷಗಳನ್ನು ಮಾತನಾಡಿದರು. ಇದಲ್ಲದೆ, ಕವನದ ಮೂಲಕ ಆರ್ಸಿಬಿಯ ಕೆಲವು ಸನ್ನಿವೇಶಗಳನ್ನು ಸಹ ಮೆಲುಕು ಹಾಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.