Chatrurgrah Yog In Aries: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ರಾಶಿಗಳಿಗೆ ಧನಹಾನಿಯ ಸಾಧ್ಯತೆ!

Chatrurgrah Yog In Aries: ಗ್ರಹ ಹಾಗೂ ನಕ್ಷತ್ರಗಳ ನಡೆಯಲ್ಲಾಗುವ ಬದಲಾವಣೆಯ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಬೀಳುತ್ತದೆ. ಹೀಗಿರುವಾಗ ಇದೀಗ ಮೇಷ ರಾಶಿಯಲ್ಲಿ ನಾಲ್ಕು ಗ್ರಹಗಳ ಮೈತ್ರಿ ನೆರವೇರುತ್ತಿದ್ದು, ಈ ಮೈತ್ರಿ ಕೆಲ ರಾಶಿಗಳ ಜಾತಕದವರ ಪಾಲಿಗೆ ಶುಭ ಫಲಿತಾಂಶಗಳನ್ನು ನೀಡಿದರೆ, ಕೆಲ ಜಾತಕದವರ ಪಾಲಿಗೆ ಅಶುಭ ಫಲಿತಾಂಶಗಳನ್ನು ನೀಡಲಿದೆ. ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚತುರ್ಗ್ರಹಿ ಯೋಗ ಯಾವ ರಾಶಿಯ ಜಾತಕದವರ ಪಾಲಿಗೆ ಅಶುಭ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ, 
 

Chaturgrah Yog In Mesh Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಹಾಗೂ ನಕ್ಷತ್ರಗಳ ಲೆಕ್ಕಾಚಾರದಲ್ಲಿ ಏಪ್ರಿಲ್ ತಿಂಗಳು ತುಂಬಾ ವಿಶೇಷವಾಗಿರಲಿದೆ ಎನ್ನಲಾಗಿದೆ. ಗ್ರಹಗಳ ರಾಶಿ ಪರಿವರ್ತನೆಯ ಕಾರಣ ಎಲ್ಲಾ ರಾಶಿಗಳ ಮೇಲೆ ಅವುಗಳ ಪ್ರಭಾವ ಗೋಚರಿಸಲಿದೆ. ಇದೇ ರೀತಿ ಗ್ರಹಗಳ ಮೈತ್ರಿಯೂ ಕೂಡ ಜನರ ಜೀವನದ ಮೇಲೆ ಶುಭ ಹಾಗೂ ಅಶುಭ ಪ್ರಭಾವ ಬೀರುತ್ತವೆ. ಹೌದು, ಪ್ರಸ್ತುತ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ಒಟ್ಟು ನಾಲ್ಕು ಗ್ರಹಗಳು ಒಟ್ಟಿಗೆ ಬರಲಿದ್ದು, ಇದರಿಂದ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ವೈದಿಕ ಪಂಚಾಂಗದ ಪ್ರಕಾರ, ಏಪ್ರಿಲ್ 14 ರಂದು ಸೂರ್ಯ, ಏಪ್ರಿಲ್ 22 ರಂದು ಗುರು ಗ್ರಹ ಮೇಷ ರಾಶಿಯನ್ನು ಪ್ರವೇಶಿಸುತ್ತಿವೆ.

 

ಇದನ್ನೂ ಓದಿ-Hanuman Jayanti 2023 Horoscope: ಹನುಮ ಜಯಂತಿ ದಿನ ಈ ರಾಶಿಗಳ ಜನರ ಮೇಲೆ ಆಂಜನೆಯನ ವಿಶೇಷ ಕೃಪಾವೃಷ್ಟಿ, ಅಪಾರ ಸುಖ-ಸಂಪತ್ತು ಪ್ರಾಪ್ತಿ!

 

ಇದರ ಜೊತೆಗೆ ಮೇಷ ರಾಶಿಯಲ್ಲಿ ಈಗಾಗಲೇ ರಾಹು ಹಾಗೂ ಬುಧ ವಿರಾಜಮಾನರಾಗಿದ್ದಾರೆ, ಹೀಗಾಗಿ ಮೇಷ ರಾಶಿಯಲ್ಲಿ ಈ ಮೈತ್ರಿ ನೆರವೇರಲಿದೆ. ಈ ರೀತಿಯ ಸಂಯೋಗ ಸುದೀರ್ಘ 12 ವರ್ಷಗಳ ಬಳಿಕ ನೆರವೇರುತ್ತಿದೆ ಎನ್ನಲಾಗಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಸುಖ ಸಂಪತ್ತು ಹರಿದುಬಂದರೆ, ಕೆಲ ರಾಶಿಗಳ ಪಾಲಿಗೆ ಈ ಮೈತ್ರಿ ಅಶುಭ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಗಳ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಕಾಲ ಬರಲಿದೆ, ಹಾಗಾದರೆ ಬನ್ನಿ, ಯಾವ ರಾಶಿಗಳ ಪಾಲಿಗೆ ಈ ಚತುರ್ಗ್ರಹಿ ಯೋಗ ಅಶುಭವಾಗಿದೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /4

ವೃಷಭ ರಾಶಿ: ಮೇಷ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಚತುರ್ಗ್ರಹಿ ಯೋಗ, ವೃಷಭ ರಾಶಿಯ ಜಾತಕದವರ ಪಾಲಿಗೆ ಸ್ವಲ್ಪ ಕಷ್ಟಕರ ಸಾಬೀತಾಗಲಿದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ. ಬಾಳಸಂಗಾತಿಯ ಜೊತೆಗೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕೋಪದ ಮೇಲೆ ನಿಯಂತ್ರಣವಿರಲಿ. ಕೋಪದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದರಿಂದ ಪಾರಾಗಿ. ಕುಟುಂಬದ ಎಲ್ಲಾ ಸದಸ್ಯರ ಜೊತೆಗೆ ಮುಕ್ತವಾಗಿ ಮಾತನಾಡಿ,   

2 /4

ತುಲಾ ರಾಶಿ: ಚತುರ್ಗ್ರಹಿ ಯೋಗ ನಿಮ್ಮ ಪಾಲಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕಾರ್ಯಸ್ಥಳದಲ್ಲಿ ಒಂದೆಡೆ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿ ಬಡ್ತಿ ಹಾಗೂ ಇಂಕ್ರಿಮೆಂಟ್ ದೊರೆತರೆ, ಇದರ ಜೊತೆಗೆ ದೊಡ್ಡ ಜವಾಬ್ದಾರಿ ಕೂಡ ಸಿಗುವ ಸಾಧ್ಯತೆ ಇದೆ. ಹೀಗಾಗಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಈ ಅವಧಿಯಲ್ಲಿ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕುಟುಂಬದ ಜೊತೆಗೆ ಉತ್ತಮ ವ್ಯವಹಾರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ, ಏಕೆಂದರೆ ಇದರಿಂದ ನಿಮಗೂ ಕೂಡ ದುಃಖವಾಗುವ ಸಾಧ್ಯತೆ ಇದೆ.  

3 /4

ಕುಂಭ ರಾಶಿ: ಮೇಷ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಚತುರ್ಗ್ರಹಿ ಯೋಗ ಕುಂಭ ರಾಶಿಯವರ ಪಾಲಿಗೂ ಕೂಡ ಸ್ವಲ್ಪ ಕಷ್ಟಕರ ಸಾಬೀಟಾಗುವ ಸಾಧ್ಯತೆ ಇದೆ. ಅನಾವಶ್ಯಕ ವೆಚ್ಚ ಹೆಚ್ಚಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಲಾಭ ತಗ್ಗುವ ಎಲ್ಲಾ ಸಾಧ್ಯತೆಗಳು ಇವೆ. ಸಣ್ಣ-ಪುಟ್ಟ ಕೆಲಸಕ್ಕೆ ಅಧಿಕ ಪರಿಶ್ರಮ ಪಡಬೇಕಾಗಬಹುದು. ವೃತ್ತಿ ಜೀವನದಲ್ಲಿ ಗುರಿಯನ್ನು ನಿರ್ಧರಿಸಿ ಮುಂದಕ್ಕೆ ಸಾಗಿ. ಇಲ್ಲದೆ ಹೋದರೆ ಅಪಯಶಸ್ಸುಗಳ ಸರಣಿಯೇ ಆರಂಭಗೊಳ್ಳುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಹೊಸ ಸ್ನೇಹಿತರ ಜೊತೆಗೆ ಕಾಲ ಕಳೆಯುವುದು ನಿಮ್ಮ ಪಾಲಿಗೆ ಲಾಭಕಾರಿ ಸಿದ್ಧವಾಗಲಿದೆ.  

4 /4

ಸಿಂಹ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುರ್ಗ್ರಹಿ ಯೋಗ ಸಿಂಹ ರಾಶಿಯ ಜಾತಕದವರಿಗೆ ಸ್ವಲ್ಪ ಕಠಿಣ ಸಾಬೀತಾಗಲಿದೆ. ವ್ಯಾಪಾರದಲ್ಲಿ ಏರಿಳಿತಗಳು ಕಂಡುಬರಲಿವೆ. ಕಾರ್ಯಸ್ಥಳದಲ್ಲಿ ಪದೋನ್ನತಿಯ ಸಾಧ್ಯತೆ ಇದೆ. ಆದರೆ, ಇದರ ಜೊತೆಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಕೂಡ ಇದೆ. ಏಕೆಂದರೆ ವಿರೋಧಿಗಳು ನಿಮ್ಮ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)