ವೈಟ್‌ ಹೆಡ್ಸ್‌ ತೆಗೆದುಹಾಕುಲು ಇಲ್ಲಿವೆ ಸುಲಭ ಮಾರ್ಗಗಳು..!

White Heads : ಮೊಡವೆಗಳಿಂದ ಬಳಲುತ್ತಿರುವವರ ಮುಖದ ಮೇಲೆ ಕಪ್ಪು ಅಥವಾ ಬಿಳಿ ಚುಕ್ಕೆಗಳ ಸಮಸ್ಯೆ ಇರುತ್ತದೆ ಅವುಗಳೇ ವೈಟ್‌ ಹೆಡ್ಸ್‌ ಗಳು. ಇವುಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ಕ್ಲೋಸ್ಡ್ ಕಾಮೆಡೋನ್‌ಗಳು ಎಂದೂ ಕರೆಯುತ್ತಾರೆ, ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಲ್ಲಿ ವೈಟ್‌ಹೆಡ್‌ಗಳು ತುಂಬಾ ಸಾಮಾನ್ಯವಾಗಿದೆ.  

Written by - Zee Kannada News Desk | Last Updated : Apr 7, 2023, 01:40 PM IST
  • ವೈಟ್‌ ಹೆಡ್‌ಗಳು ಮುಖದ ಸೌಂದರ್ಯವನ್ನು ಕಡಿಮೆಮಾಡುತ್ತವೆ.
  • ಸಾಮಾನ್ಯವಾಗಿ ವಯಸ್ಕರ ಮುಖದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
  • ಇಲ್ಲಿವೆ ಸುಲಭವಾದ ಮಾರ್ಗಗಳು..
ವೈಟ್‌ ಹೆಡ್ಸ್‌ ತೆಗೆದುಹಾಕುಲು ಇಲ್ಲಿವೆ ಸುಲಭ ಮಾರ್ಗಗಳು..!  title=

Beauty Tips : ಈ ವೈಟ್‌ ಹೆಡ್‌ಗಳು ಮುಖದ ಸೌಂದರ್ಯವನ್ನು ಕಡಿಮೆಮಾಡುತ್ತವೆ. ಇವುಗಳು ಸಾಮಾನ್ಯವಾಗಿ ವಯಸ್ಕರ ಮುಖದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳಿಂದ ಬೇಸೋತ್ತಿರುವವರು ಇದ್ದಾರೆ, ಮತ್ತು ಅವುಗಳನ್ನು ತೊಲಗಿಸಲು ಸಾಕಷ್ಟು ಕಷ್ಟಪಡುತ್ತಿರುವವರು ಇದ್ದಾರೆ. ಅಂತವರಿಗೆ ಇಲ್ಲಿವೆ ಸುಲಭವಾದ ಮಾರ್ಗಗಳು.. 

ಟೊಮೆಟೊ
ವೈಟ್ ಹೆಡ್‌ಗಳನ್ನು ತೊಡೆದುಹಾಕಲು ಸ್ಟೀಮಿಂಗ್ ಅತ್ಯುತ್ತಮ ಮಾರ್ಗವಾಗಿದೆ. ನಾವು ಮಾಲಿನ್ಯಕರ ಪರಿಸರದಲ್ಲಿ ಓಡಾಡುತ್ತೆವೆ ಅಲ್ಲಿನ ಧೂಳಿನ ಕಣಗಳು ಮುಖದಮೇಲೆ ಕುಳಿತು ಮುಖವು ತನ್ನ ಕಾಂತಿಯನ್ನು ಕಳೆದುಕೊಳ್ಳುವುದರ ಜೊತೆಗೆ ವೈಟ್‌ ಹೆಡ್ಸ ಗಳನ್ನು ಉಂಟುಮಾಡುತ್ತದೆ. ಇದಕ್ಕೆ ನೈಸರ್ಗಿಕ ಪರಿಹಾರವಾಗಿ ಟೊಮೆಟೊ ಹಚ್ಚಿ ಮುಖವನ್ನು ತೊಳೆಯುವುದರಿಂದ ಮುಖದಲ್ಲಿನ ಕಾಂತಿಯನ್ನು ಹೆಚ್ಚಿಸಿ ವೈಟ್‌ ಹೆಡ್ಸ್‌ ಗಳನ್ನು ಕಡಿಮೆಮಾಡಬಹುದು. 

ಇದನ್ನೂ ಓದಿ-ನ್ಯಾಚುರಲ್ ಗ್ಲೋಯಿಂಗ್ ಸ್ಕಿನ್ ಗಾಗಿ ಬಳಸಿ ಮೊಟ್ಟೆಯ ಈ ನಾಲ್ಕು ಫೇಸ್ ಪ್ಯಾಕ್‌ಗಳನ್ನು..!

ಹಾಲು
ಸರಳವಾಗಿ 2 ಟೇಬಲ್ಸ್ಪೂನ್ ಹಾಲು ಒಂದು ಚಮಚ ನಿಂಬೆ ರಸ ಮತ್ತು 1 ಚಮಚ ಉಪ್ಪು ಮಿಶ್ರಣ ಮಾಡಿ. ಚೆನ್ನಾಗಿ ಬೆರೆಸಿ ಅದನ್ನು ಮುಖದ ಮೇಲೆ ಅನ್ವಯಿಸಿ, ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ. 

ಟೂತ್ಪೇಸ್ಟ್
ಟೂತ್‌ಪೇಸ್ಟ್‌ನಲ್ಲಿರುವ ಫ್ಲೋರೈಡ್ ಮೊಡವೆ ಮತ್ತು‌ ವೈಟ್ ಹೆಡ್ ಎರಡನ್ನೂ ಗುಣಪಡಿಸಲು ಸಹಾಯ ಮಾಡುತ್ತದೆ. ಮುಖದ ಪೀಡಿತ ಪ್ರದೇಶಕ್ಕೆ ಜೆಲ್ ಆಧಾರಿತ ಪೇಸ್ಟ್ ಅನ್ನು ಸರಳವಾಗಿ ಅನ್ವಯಿಸಿ, ಕೆಲವು ನಿಮಿಷಗಳ ಕಾಲ ಬಿಡಿ, ತದನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಅಡಿಗೆ ಸೋಡಾ
ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಅದು ಒಣಗುವವರೆಗೆ ಬಿಟ್ಟು ತದನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ-ನಿಮ್ಮ ಉಸಿರಾಟದ ಸಾಮರ್ಥ್ಯವನ್ನು ಸುಧಾರಿಸಲು ಇಲ್ಲಿವೆ ಪರಿಣಾಮಕಾರಿ ವ್ಯಾಯಾಮಗಳು

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News