ಬೆಂಗಳೂರು : ಆತ ಮೈ ತುಂಬ ಕೇಸ್ ಮಾಡಿಕೊಂಡಿದ್ದ ರೌಡಿ ಆಸಾಮಿ. ರೇಪ್, ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ 11 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲಿದ್ದವು. ಎಲೆಕ್ಷನ್ ಹೊತ್ತಲ್ಲಿ ಗಡಿಪಾರು ಆದೇಶ ಕೂಡ ಮಾಡಲಾಗಿತ್ತು. ಅಷ್ಟರಲ್ಲಾಗಲೇ ಆತನ ಹೆಣ ಉರುಳಿದೆ. ಮುಖ ಗುರುತು ಸಿಗದಂತೆ ಮಾರಾಕಾಸ್ತ್ರ ಝಳಪಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ನೀರಿನಂತೆ ರಕ್ತ ಹರಿದಿದೆ. ಮನೆ ಹೊಸ್ತಿಲ ಮಂದೆಯೇ ನೆತ್ತರ ಕಲೆ ಇದೆ. ಪ್ರಾಣ ಉಳಿಸಿಕೊಳ್ಳಲು ಓಡೋಡಿ ಬಂದವನು ಮನೆ ಬಾಗಿಲ ಮುಂದೆಯೇ ಉಸಿರು ಚೆಲ್ಲಿದ್ದಾನೆ. ಭೀಕರವಾಗಿ ರೌಡಿ ಶೀಟರ್ನ ಹತ್ಯೆ ಮಾಡಿರೊ ಆರೋಪಿಗಳು ಎಸ್ಕೇಪ್ ಆಗಿದ್ರೆ. ಪೊಲೀಸರು ಇಂಚಿಂಚು ಪರಿಶೀಲನೆ ನಡೆಸ್ತಿದ್ದು ಕೊಲೆಗಡುಕರ ಹೆಜ್ಜುಗುರುತು ಪತ್ತೆ ಹಚ್ತಿದ್ದಾರೆ.
ಇದನ್ನೂ ಓದಿ:ಬಿಜೆಪಿ ಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ: ಸಿಎಂ ಬೊಮ್ಮಾಯಿ
ಹೌದು..ಈ ಫೋಟೋದಲ್ಲಿ ಕಾಣ್ತಿರೊ ವ್ಯಕ್ತಿಯ ಹೆಸರು. ಕಾರ್ತಿಕ್ ಹಲಸೂರು ಪೊಲೀಸ್ ಠಾಣೆಯ ರೌಡಿ ಶೀಟರ್. ಈತನ ಮೇಲೆ ಅತ್ಯಾಚಾರ, ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 11 ಕ್ಕೂ ಪ್ರಕರಣಗಳಿದೆ. ಅಷ್ಟೇ ಅಲ್ಲ ಚುನಾವಣೆ ಹೊತ್ತಲ್ಲಿ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಗಡಿಪಾರು ಮಾಡಿ ನೋಟಿಸ್ ಕೂಡ ನೀಡಿದ್ರು. ಊರು ಬಿಡೋ ಮುಂಚಿತವಾಗಿಯೇ ಸಾವಿನ ಮನೆ ಸೇರಿದ್ದಾನೆ.
ನಿನ್ನೆ ಸಂಜೆ 6 ಗಂಟೆಯ ಸಮಯ ಹಲಸೂರಿನ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರ್ತಿದ್ದ. ಈ ವೇಳೆ ಮಾರಾಕಾಸ್ತ್ತಗಳೊಂದಿಗೆ ಬಂದ ಹಂತಕರು ಏಕಾಏಕಿ ಎರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಮುಖ ಮೂತಿ ಗುರುತಿ ಸಿಗದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಂತಕರ ಹುಡುಕಾಟ ನಡೆಸ್ತಿದ್ದಾರೆ. ಆರೋಪಿಗಳ ಬಂಧನ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಗೊತ್ತಾಗಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.