ICC Latest T20 Ranking: ಟೀಂ ಇಂಡಿಯಾದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಈ ವರ್ಷ ವಿಶೇಷವೇನೂ ಸಾಧನೆ ಮಾಡಿಲ್ಲ. ಈ ನಡುವೆ ಸತತ ವೈಫಲ್ಯವಿದ್ದರೂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂರ್ಯಕುಮಾರ್ ಯಾದವ್ ಅವರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ICC T20 ಬ್ಯಾಟ್ಸ್’ಮನ್’ಗಳ ಇತ್ತೀಚಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಸೂರ್ಯಕುಮಾರ್ ಯಾದವ್ ಕೆಟ್ಟ ಹಂತದ ಮೂಲಕ ಸಾಗುತ್ತಿದ್ದಾರೆ. ಆದರೆ ಅವರು ICC (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಪುರುಷರ ಚ. ಸೂರ್ಯಕುಮಾರ್ 906 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಅವರು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (811 ಅಂಕ) ಮತ್ತು ನಾಯಕ ಬಾಬರ್ ಅಜಮ್ (755 ಅಂಕ), ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ (748 ಅಂಕ) ಮತ್ತು ನ್ಯೂಜಿಲೆಂಡ್ನ ಡೆವೊನ್ ಕಾನ್ವೇ (745 ಅಂಕ) ಅವರಿಗಿಂತ ಮುಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ 15ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಐಪಿಎಲ್’ನ ಈ ಋತುವಿನಲ್ಲಿ ಇದುವರೆಗೆ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಆಟವಾಡಿಲ್ಲ. ಅವರು ಮುಂಬೈ ಇಂಡಿಯನ್ಸ್ ಪರವಾಗಿ ಮೊದಲ ಮೂರು ಪಂದ್ಯಗಳಲ್ಲಿ 15, 01 ಮತ್ತು 0 ರನ್ ಗಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ T20I ಸರಣಿಯಲ್ಲಿ ಆಟಗಾರರು ತಮ್ಮ ಪ್ರದರ್ಶನವನ್ನು ಉತ್ತಮವಾಗಿಯೇ ಪ್ರದರ್ಶಿಸಿದ್ದಾರೆ. ಯುವ ಸ್ಪಿನ್ನರ್ ಮಹಿಶ್ ಟೀಕ್ಷಣ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನು ಸಾಧಿಸುವ ಮೂಲಕ ಬೌಲರ್’ಗಳ ಶ್ರೇಯಾಂಕದಲ್ಲಿ ಜಂಟಿ ಐದನೇ ಸ್ಥಾನವನ್ನು ಪಡೆದರು. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಬೌಲರ್ಗಳ ಪಟ್ಟಿಯಲ್ಲಿ, ಫಜಲ್ಹಾಕ್ ಫಾರೂಕಿ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಮತ್ತು ಶ್ರೀಲಂಕಾದ ವನಿಂದು ಹಸರಂಗ ಅವರಿಗಿಂತ ಮುಂದಿದ್ದಾರೆ. ಬೌಲರ್ಗಳ ಪಟ್ಟಿಯಲ್ಲಿ ಟಾಪ್ 10ರೊಳಗೆ ಯಾವೊಬ್ಬ ಭಾರತೀಯನೂ ಸೇರಿಲ್ಲ.
ಇದನ್ನೂ ಓದಿ: Sweat Perfume: ಬೆವರು ಸುರಿಸಿ ಅಲ್ಲಲ್ಲಾ... ಬೆವರಿನಿಂದಲೇ ಸಿದ್ಧವಾದ ಪರ್ಫ್ಯೂಮ್ ಇದು! ಡಿಮ್ಯಾಂಡಪ್ಪೋ ಡಿಮ್ಯಾಂಡ್
ಟೆಸ್ಟ್ ರ್ಯಾಂಕಿಂಗ್ ಕೂಡ ಬದಲಾಗಿದೆ!
ಮಿರ್ಪುರದಲ್ಲಿ ಐರ್ಲೆಂಡ್ ವಿರುದ್ಧ ಬಾಂಗ್ಲಾದೇಶ ಜಯಗಳಿಸಿದ ನಂತರ ಟೆಸ್ಟ್ ಶ್ರೇಯಾಂಕದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಮುಶ್ಫಿಕರ್ ರಹೀಮ್ ಟೆಸ್ಟ್ ಬ್ಯಾಟ್ಸ್ಮನ್’ಗಳ ಪಟ್ಟಿಯಲ್ಲಿ 126 ಮತ್ತು ಔಟಾಗದೆ 51 ಸ್ಕೋರ್’ಗಳ ಮೂಲಕ ಐದು ಸ್ಥಾನಗಳನ್ನು ಹೆಚ್ಚಿಸಿಕೊಂಡು 17 ನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್ಗಳ ಪಟ್ಟಿಯಲ್ಲಿ ಸ್ಪಿನ್ ಜೋಡಿ ತೈಜುಲ್ ಇಸ್ಲಾಂ ಮತ್ತು ಶಕೀಬ್ ಅಲ್ ಹಸನ್ ಲಾಭ ಗಳಿಸಿದ್ದಾರೆ. ತೈಜುಲ್ ಐದು ವಿಕೆಟ್ ಪಡೆದು ಮೂರು ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ ತಲುಪಿದ್ದಾರೆ. ಬಾಂಗ್ಲಾದೇಶದ ನಾಯಕ ಶಕೀಬ್ ಎರಡು ಸ್ಥಾನ ಸುಧಾರಿಸಿ ಜಂಟಿ 26ನೇ ಕ್ರಮಾಂಕದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.