ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಉಚಿತವಾಗಿ ಸಿಗಲಿದೆ ವಿದ್ಯುತ್

Free Electricity: ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಇದರ ನಡುವೆ ವಿದ್ಯುತ್ ಬಿಲ್ ಹೆಚ್ಚಳ ಜನರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಮುಕ್ತಿ ಪಡೆಯಲು 

Written by - Yashaswini V | Last Updated : Apr 13, 2023, 10:03 AM IST
  • ಕರೆಂಟ್ ಬಿಲ್ ಚಿಂತೆ ಬೇಡ!
  • ಉಚಿತವಾಗಿ ಸಿಗಲಿದೆ ವಿದ್ಯುತ್
  • ಸರ್ಕಾರದ ಈ ಯೋಜನೆ ಸದ್ಬಳಕೆ ಮಾಡಿಕೊಂಡರೆ ಉಚಿತ ವಿದ್ಯುತ್ ಲಭ್ಯವಾಗಲಿದೆ
ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಉಚಿತವಾಗಿ ಸಿಗಲಿದೆ ವಿದ್ಯುತ್ title=

How To Get Free Electricity: ಬೇಸಿಗೆಯಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್‌ನಂತಹ ಉಪಕರಣಗಳಿಲ್ಲದೆ ಬದುಕುವುದನ್ನು ಊಹಿಸಿಕೊಳ್ಳಲೂ ಕೂಡ ಸಾಧ್ಯವಿಲ್ಲ. ಹೀಗಾಗಿಯೇ ಬೇರೆಲ್ಲಾ ಋತುಗಳಿಗಿಂತ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಕೊಂಚ ಹೆಚ್ಚು. ಇದರಿಂದಾಗಿ ವಿದ್ಯುತ್ ಬಿಲ್ ಹೊರೆಯೂ ಅಧಿಕವಾಗುತ್ತದೆ. ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎಂಬಂತಿರುವಾಗ ವಿದ್ಯುತ್ ಬಿಲ್ ಹೆಚ್ಚಳ ಜನರ ಜೇಬಿಗೆ ಮತ್ತಷ್ಟು ಹೊರೆಯಾಗುತ್ತಿರುವುದಂತೂ ಸುಳ್ಳಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಒಂದು ಮಹತ್ತರ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ನೀವು ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹೂಡು. ಅದುವೇ,  ಸೋಲಾರ್ ಪ್ಯಾನಲ್ ಅಳವಡಿಕೆ. 

ಮನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸುವುದರಿಂದ ವಿದ್ಯುತ್ ಬಿಲ್ ಅನ್ನು ಉಳಿಸಬಹುದು. ಮಾತ್ರವಲ್ಲ, ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸುಲಭವಾಗಿ ಅಳವಡಿಸಬಹುದಾದ ಸೌರಫಲಕದ ಸಹಾಯದಿಂದ ನೀವು  ಯಾವುದೇ ಒತ್ತಡವಿಲ್ಲದೆ ಎಸಿ, ಫ್ಯಾನ್ ಮತ್ತು ಕೂಲರ್ ಅನ್ನು ಚಲಾಯಿಸಬಹುದು. 

ಇದನ್ನೂ ಓದಿ- ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇ ಈ ಪುಟ್ಟ ಲ್ಯಾಂಪ್

ವಾಸ್ತವವಾಗಿ, ಸೌರ ಫಲಕ ಅಥವಾ ಸೋಲಾರ್ ಪ್ಯಾನಲ್ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುವ ಸಾಧನವಾಗಿದೆ. ಇದು ಪರಿಸರ ಸ್ನೇಹಿ ಶಕ್ತಿಯೂ ಹೌದು ಎಂಬುದನ್ನೂ ಕೂಡ ತಳ್ಳಿಹಾಕುವಂತಿಲ್ಲ. ಮತ್ತೊಂದು ಗಮನಾರ್ಹ ವಿಷಯವೆಂದರೆ ನೀವು ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಹಾಕಿಸಲು ಸರ್ಕಾರದ ವತಿಯಿಂದ ಸಹಾಯಧನವೂ ಲಭ್ಯವಾಗಲಿದೆ. 

ಇದನ್ನೂ ಓದಿ- Cars: ಈ ಐಷಾರಾಮಿ ಕಾರು ಕೇವಲ 1 ಲಕ್ಷದಲ್ಲಿ ನಿಮ್ಮದಾಗಬಹುದು! ಇದರ ಲುಕ್-ಪ್ರಸಿದ್ಧಿಗೆ ಫಿದಾ ಆಗೋದು ಪಕ್ಕಾ

ಸೋಲಾರ್ ಪ್ಯಾನೆಲ್ ಬೆಲೆ & ಸರ್ಕಾರದ ಸಬ್ಸಿಡಿ:
ಸಾಮಾನ್ಯವಾಗಿ ಒಂದು ದೊಡ್ಡ ಸೋಲಾರ್ ಪ್ಯಾನೆಲ್ ಅಳವಡಿಸಲು ಒಂದೂವರೆ ಲಕ್ಷ ರೂಪಾಯಿಯವರೆಗೆ ವೆಚ್ಚವಾಗುತ್ತದೆ. ಸರ್ಕಾರದ ಯೋಜನೆಯಡಿ ನೀವು ಈ ಸೋಲಾರ್ ಪ್ಯಾನೆಲ್ ಖರೀದಿಸುತ್ತಿದ್ದರೆ ಸರ್ಕಾರವು ಈ ಸೋಲಾರ್ ಪ್ಯಾನೆಲ್‌ಗಳಿಗೆ ಸಬ್ಸಿಡಿಯನ್ನು ನೀಡುತ್ತದೆ. ಈ ಸಬ್ಸಿಡಿ ಸಹಾಯದಿಂದ ನೀವು ಸುಮಾರು 75,000 ರೂ.ಗಳಿಂದ 1.20 ಲಕ್ಷ ರೂ.ಗಳಲ್ಲಿ ಸೌರ ಫಲಕವನ್ನು ಅಳವಡಿಸಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News