ನವದೆಹಲಿ: ಯುಪಿಎ ಸರ್ಕಾರದಲ್ಲಿ ನಂದನ್ ನೀಲಕೇಣಿಯವರ ಕಲ್ಪನೆಯಲ್ಲಿ ಮೂಡಿ ಬಂದಂತಹ ಮಹತ್ವದ ಆಧಾರ್ ಯೋಜನೆಗೆ ಜಗತ್ತಿನ ಶ್ರೀಮಂತ್ ವ್ಯಕ್ತಿ ಬಿಲ್ ಗೇಟ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
In 2009, my friend @NandanNilekani was tapped by the government of India to turn its vision for a digital ID system into a reality. A decade later, nearly all of India’s 1.3 billion residents are enrolled in this impressive program: https://t.co/2YUxCRwXPE pic.twitter.com/QisjcAtjvL
— Bill Gates (@BillGates) February 8, 2019
ಈ ಯೋಜನೆಯ ಕುರಿತಾದ ತಮ್ಮ ಬರಹವೊಂದನ್ನು ಈಗ ಬಿಲ್ ಗೇಟ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."2009 ರಲ್ಲಿ ನನ್ನ ಸ್ನೇಹಿತ ನಂದನ್ ನೀಲಕೇಣಿ ಭಾರತ ಸರ್ಕಾರದ ಮೂಲಕ ಡಿಜಿಟಲ್ ಗುರುತು ವ್ಯವಸ್ಥೆಯೊಂದನ್ನು ಜಾರಿಗೆ ತಂದರ.ಇದು ದಶಕದ ನಂತರ ಸುಮಾರು 1.3 ಬಿಲಿಯನ್ ಜನರು ಈ ಕಾರ್ಯಕ್ರಮದಲ್ಲಿ ನೊಂದಣಿಯಾಗಿದ್ದಾರೆ" ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಈ ಯೋಜನೆಯ್ ಕುರಿತಾಗಿ ವಿಸ್ತೃತ ಬರಹವನ್ನು Making the world’s invisible people, visible ಎನ್ನುವ ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ.
ಕಳೆದ ಒಂದು ದಶಕದಿಂದ ನಂದನ್ ನೀಲಕಣಿ ಈ ಅದೃಶ್ಯ ಜನರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.