Guru Chandra Yuti: ಕೆಲವು ಗಂಟೆಗಳ ನಂತರ ಅಂದರೆ ಏಪ್ರಿಲ್ 17 ರಂದು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಚಂದ್ರ ಮತ್ತು ಗುರು ಒಟ್ಟಿಗೆ ಮೀನದಲ್ಲಿ ಈ ರಾಜಯೋಗವನ್ನು ರೂಪಿಸುತ್ತಾರೆ. ಇದು ಅತ್ಯಂತ ಮಂಗಳಕರ ಮತ್ತು ಶಕ್ತಿಯುತವಾದ ಯೋಗವಾಗಿದೆ.
Guru Gochar 2023: ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಿಸುತ್ತವೆ. ಗ್ರಹಗಳ ಸಂಚಾರದಿಂದ ಕೆಲವೊಮ್ಮೆ ಶುಭ ಯೋಗ ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಅಶುಭವಾಗಿರುತ್ತದೆ. ಗ್ರಹಗಳ ಈ ಗೋಚಾರ ಮಾನವ ಜೀವನದ ಮೇಲೆ ಮತ್ತು ಭೂಮಿಯ ಮೇಲೆ ಪ್ರಭಾವ ಬೀರುತ್ತವೆ. ನಾಳೆ ಅಂದರೆ ಏಪ್ರಿಲ್ 17 ರಂದು ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಚಂದ್ರ ಮತ್ತು ಗುರು ಒಟ್ಟಿಗೆ ಮೀನದಲ್ಲಿ ಸಂಯೋಗ ಹೊಂದುವ ಕಾರಣ ಈ ರಾಜಯೋಗ ರೂಪುಗೊಳ್ಳುತ್ತದೆ. ಇದು ಅತ್ಯಂತ ಮಂಗಳಕರ ಯೋಗವಾಗಿದೆ. ಈ ಯೋಗವು ಕೆಲವು ರಾಶಿಗಳ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೃಷಭ ರಾಶಿ: ಗಜಕೇಸರಿ ರಾಜಯೋಗದಿಂದ ವೃಷಭ ರಾಶಿಯವರ ಭವಿಷ್ಯ ಬದಲಾಗಲಿದೆ. ನಿಮ್ಮ ಆದಾಯ ಮತ್ತು ಲಾಭದ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಸಂತಾನ ಸುಖವೂ ಪ್ರಾಪ್ತಿಯಾಗುತ್ತದೆ. ವಿದೇಶದಿಂದ ಲಾಭವಾಗಲಿದೆ. ಆಮದು-ರಫ್ತು ವ್ಯವಹಾರವಿದ್ದರೆ ಗಜಕೇಸರಿ ಯೋಗವು ಹೆಚ್ಚಿನ ಲಾಭವನ್ನು ನೀಡುತ್ತದೆ. ಭೌತಿಕ ಸುಖಗಳನ್ನು ಪಡೆಯುತ್ತೀರಿ.
ಮಿಥುನ ರಾಶಿ: ಚಂದ್ರ ಮತ್ತು ಗುರುವಿನ ಸಂಯೋಗದಿಂದ ರೂಪುಗೊಂಡ ಗಜಕೇಸರಿ ರಾಜಯೋಗ ನಿಮಗೆ ಜಾಕ್‌ಪಾಟ್ ನೀಡಲಿದೆ. ಏಕೆಂದರೆ ಜಾತಕದಲ್ಲಿ ಹತ್ತನೇ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳಲಿದೆ. ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೆ ಸಂಬಂಧ ಕೂಡಿಬರುವುದು. ಅಷ್ಟೇ ಅಲ್ಲ, ವ್ಯಾಪಾರ ಮತ್ತು ಉದ್ಯೋಗದಲ್ಲೂ ಪ್ರಗತಿ ಸಾಧಿಸಬಹುದು.
ಕಟಕ ರಾಶಿ: ಗಜಕೇಸರಿ ರಾಜಯೋಗವು ನಿಮಗೆ ಲಾಭದಾಯಕವಾಗಿರುತ್ತದೆ. ಈ ರಾಜಯೋಗವು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಅದಕ್ಕಾಗಿಯೇ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಮತ್ತು ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚುವುದು.
ಕನ್ಯಾ ರಾಶಿ: ಗಜಕೇಸರಿ ಅತ್ಯಂತ ಮಂಗಳಕರ ಯೋಗ. ಈ ರಾಜಯೋಗವು ನಿಮ್ಮ ಜಾತಕದ ಏಳನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಪಾಲುದಾರಿಕೆಯಲ್ಲಿ ಯಶಸ್ಸು ಇರುತ್ತದೆ. ಮದುವೆಯಾಗದಿರುವವರಿಗೆ ಸಂಬಂಧಗಳು ಬರಬಹುದು. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ.