ದಾವಣಗೆರೆ: ಜಾರಿ ನಿರ್ದೇಶನಾಲಯ(ED)ದ ಪ್ರರಕಣ ಮುಚ್ಚಲು ಅಧಿಕಾರಿಯ ತಂದೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್ ನೀಡಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಜಗಳೂರು ಕಾಂಗ್ರೆಸ್ ಟಿಕೆಟ್ ಹಂಚಿಕೆಗೂ ಡಿಕೆಶಿ ಇಡಿ ಕೇಸ್ಗೂ ಸಂಬಂಧ ಇದೆ ಎನ್ನಲಾಗುತ್ತಿದೆ. ಇಡಿ ಕೇಸ್ಗೆ ಅನುಕೂಲ ಆಗಲಿ ಅಂತಾ ಜಗಳೂರು ಟಿಕೆಟ್ ಕೊಟ್ಟಿದ್ದಾರಾ ಡಿಕೆಶಿ..? ಅನ್ನೋ ಪ್ರಶ್ನೆ ಮೂಡಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆದಾಯ ತೆರಿಗೆ ಇಲಾಖೆ ಅಧಿಕಾರಿಯ ತಂದೆಯ ಪಾಲಾಗಿದೆ. ಜಗಳೂರು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಪುತ್ರ ವಿಜಯಕುಮಾರ್ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಜಿಲ್ಲಾಧಿಕಾರಿಯಾಗಿದ್ದಾರೆ.
ಇದನ್ನೂ ಓದಿ: Karnataka Election 2023 : ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ
ಈ ವಿಜಯ ಕುಮಾರ್ ಬಳಿಯೇ ಡಿ.ಕೆ.ಶಿವಕುಮಾರ್ ಫೈಲ್ಗಳಿವೆ. ಡಿಕೆಶಿ, ಎಂ.ಬಿ.ಪಾಟೀಲ್ ಸೇಫ್ ಆಗೋಕೆ ವಿಜಯ ಕುಮಾರ್ ತಂದೆಗೆ ಟಿಕೆಟ್ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಜಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ.ರಾಜೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಎಚ್.ಪಿ.ರಾಜೇಶ್ ಜಗಳೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಡಿಕೆಶಿ ತಮ್ಮ ತೆವಲು ತೀರಿಸಿಕೊಳ್ಳಲು ದೇವೇಂದ್ರಪ್ಪಗೆ ಟಿಕೆಟ್ ನೀಡಿದ್ದಾರೆಂದು ಅವರು ಆರೋಪಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 3 ಕೋಟಿ ರೂ. ಪಾರ್ಟಿ ಫಂಡ್ ಕೊಟ್ಟಿದ್ದಾರೆ ಅಂತಾ ಟಿಕೆಟ್ ಕೊಟ್ಟಿದ್ದಾರೆಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Election 2023: ಪ್ರಚಾರಕ್ಕೆ ತೆರಳಿದ್ದ BJP ಅಭ್ಯರ್ಥಿ ಅವಿನಾಶ್ ಜಾಧವ್ ಕಾರಿನ ಮೇಲೆ ಕಲ್ಲು ತೂರಾಟ!
ಇನ್ನು ಮಾಜಿ ಶಾಸಕ ಎಚ್.ಪಿ.ರಾಜೇಶ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ. ಬಿದರಿಕೆರೆ ತೋಟದಲ್ಲಿ ಸಭೆ ನಡೆಸಿರುವ ಅವರು, ಪಕ್ಷೇತರನಾಗಿ ನಿಲ್ಲಲು ನಿರ್ಧರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.