Health Benefits Of Lemon Juice: ನಿಂಬೆ ಹಣ್ಣು ಸಾಕಷ್ಟು ಪ್ರಮಾಣದ ಪೊಟ್ಯಾಸಿಯಂ ಹೊಂದಿದ್ದು, ಇದು ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರವಿಡಲು ಅಗತ್ಯವಾಗಿದೆ.
Lemon Juice Health Benefits: ದೇಶದಾದ್ಯಂತ ಬೇಸಿಗೆಯ ಬಿಸಿ ಜೋರಾಗಿದೆ. ಬಿಸಿಲಿನ ಹೊಡೆತಕ್ಕೆ ಜನಸಾಮಾನ್ಯರು ನಲುಗಿಹೋಗಿದ್ದಾರೆ. ಬೇಸಿಗೆಯಲ್ಲಿ ನಾವು ನಮ್ಮ ದೇಹವನ್ನು ಡಿಹೈಟ್ರೇಟ್(Dehydration) ಆಗಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಪ್ರತಿದಿನ ನಿಂಬೆ ಪಾನಕ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಬಯುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬೆಳಗ್ಗೆ 1 ಲೋಟ ನಿಂಬೆ ಪಾನಕ ಸೇವಿಸಿದ್ರೆ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ನಿಂಬೆ ರಸವು ಪಿತ್ತಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ.
ನಿಂಬೆ ಪಾನಕವು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಯಕೃತ್ತಿಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಪಿತ್ತರಸವನ್ನು ಹೆಚ್ಚಿಸುತ್ತದೆ, ಇದು ಕೊಬ್ಬು ಮತ್ತು ಲಿಪಿಡ್ಗಳನ್ನು ಒಡೆಯಲು ಸಹಾಯ ಮಾಡುತ್ತದೆ.
ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ C ಇರುತ್ತದೆ. ಇದು ವಿವಿಧ ರೋಗಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಪ್ರತಿದಿನ 1 ಲೋಟ ನಿಂಬೆ ಪಾನಕವನ್ನು ಸೇವಿಸಿದ್ರೆ ಅನೇಕ ರೋಗಗಳಿಂದ ದೂರವಿರಬಹುದು.
ನಿಂಬೆ ರಸದಲ್ಲಿರಯವ ಫೆವೆಲೊನಾಯ್ಡ್ ಎಂಬ ಸಂಯುಕ್ತವು ದೇಹವನ್ನು ವಿವಿಧ ರೀತಿಯ ಕ್ಯಾನ್ಸರ್ನಿಂದ ರಕ್ಷಿಸುತ್ತದೆ. ನಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯಬಹುದು.
ನಿಂಬೆ ಪಾನಕ ಸೇವಿಸುವುದರಿಂದ ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ನಿಯಮಿತವಾಗಿ ನಿಂಬೆ ರಸ ಸೇವಿಸಬೇಕು.